ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ KRS ಡ್ಯಾಂ ಬಿರುಕು ಬಿಟ್ಟಿದೆ ಎಂಬ ಹೇಳಿಕೆ ಹಸಿಯಾಗಿರುವಾಗಲೇ ಇದೀಗ KRS ಡ್ಯಾಂ ಬಳಿ ಕಾವೇರಿ ಪ್ರತಿಮೆಗೆ ಹೋಗುವ ರಸ್ತೆಯ ತಳಹದಿಯಲ್ಲಿ ಕಲ್ಲುಗಳು ಕುಸಿದಿದ್ದು, ಆತಂಕ ಮೂಡಿಸಿದೆ.
ಇದನ್ನೂ ಓದಿ: ಕೆಆರ್‌ಎಸ್ ಬಿರುಕು ಬಿಟ್ಟಿದೆ ಅಂತಾ ನಾನು ಹೇಳಿಯೇ ಇಲ್ಲ: ಸಂಸದೆ ಸುಮಲತಾ ಯೂಟರ್ನ್
ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರ ನಡುವೆಯೇ ಡ್ಯಾಂನಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿದ್ದು, ಈ ರಸ್ತೆ ಕೆಳಗಿನ 30ಕ್ಕೂ ಹೆಚ್ಚು ಕಲ್ಲುಗಳು ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಗಣಿಗಾರಿಕೆಯಿಂದ ಡ್ಯಾಂಗೆ ತೊಂದರೆ ಅಂತಾ ಸರ್ಟಿಫಿಕೇಟ್ ಕೊಡೋವರೆಗೂ ಕಾಯಬೇಕಾ?: ಸುಮಲತಾ
ಇನ್ನು ಇದು ಕಾವೇರಿ ಪ್ರತಿಮೆಗೆ ತೆರಳುವ ರಸ್ತೆಯಾಗಿದ್ದು, ರಸ್ತೆಯ ತಳಹದಿಗೆ ಕಲ್ಲುಗಳನ್ನು ಅಳವಡಿಸಿಲಾಗಿತ್ತು. ರಾತ್ರಿ ಸುರಿದ ಭಾರಿ ಮಳೆ ಹಿನ್ನೆಲೆ ಕಲ್ಲುಗಳು ಕುಸಿದು ಬಿದ್ದಿವೆ. ಹಾಗಾಗಿ ಡ್ಯಾಂನಲ್ಲಿ ಯಾವುದೇ ಬಿರುಕಿಲ್ಲ ಎನ್ನುತ್ತಿದ್ದ ಅಧಿಕಾರಿಗಳು ಕೂಡ ಇದೀಗ ಕಲ್ಲು ಕುಸಿತದಿಂದ ಆತಂಕಗೊಂಡಿದ್ದಾರೆ. ಜೊತಗೆ ಇದೇ ಮೊದಲ ಬಾರಿಗೆ ಡ್ಯಾಂನಲ್ಲಿ ಇಷ್ಟೊಂದು ಪ್ರಮಾಣದ ಕಲ್ಲುಗಳು ಕುಸಿದಿವೆ ಎನ್ನಲಾಗ್ತಿದೆ.