ಮಂಡ್ಯ : ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ್ದಕ್ಕೆ ವಧು-ವರ ಹಾಗೂ ಕಲ್ಯಾಣ ಮಂಟಪ ಮಾಲೀಕನಿಗೆ ತಹಶೀಲ್ದಾರ್ ದಂಡ ಹಾಕಿರುವ ಘಟನೆ ಮಂಡ್ಯ ತಾಲೂಕಿನ ಸಂತೆಕಸಲಗೆರೆ ಗ್ರಾಮದಲ್ಲಿ ನಡೆದಿದೆ.
ಓದಿ: ಕಲಬುರಗಿ: ಬೆಡ್-ವೆಂಟಿಲೇಟರ್ ಸಿಗದೆ ಕೊರೊನಾ ಸೋಂಕಿತ ಸಾವು
ಸಂತೆಕಸಲಗೆರೆ ಗ್ರಾಮದ ಭೂಮಿಸಿದ್ದೇಶ್ವರ ಸಮುದಾಯ ಭವನದಲ್ಲಿ ಸಾವಿರಕ್ಕೂ ಹೆಚ್ಚು ಜನ ಸೇರಿದ ಹಿನ್ನೆಲೆ ತಹಶೀಲ್ದಾರ್ ಸಮುದಾಯ ಭವನದ ಮೇಲೆ ದಾಳಿ ನಡೆಸಿದ್ದಾರೆ. ತಹಶೀಲ್ದಾರ್ ಚಂದ್ರಶೇಖರ್ ಶಂಗಾಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಧು-ವರರ ಕಡೆಯವರಿಗೆ ತಲಾ ₹10 ಸಾವಿರ ಹಾಗೂ ಕಲ್ಯಾಣ ಮಂಟಪ ಮಾಲೀಕನಿಗೆ ₹30 ಸಾವಿರ ಸೇರಿ ಒಟ್ಟು 50 ಸಾವಿರ ರೂ. ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದ್ದಾರೆ. ದಂಡ ಕಟ್ಟಿದ ವಧು-ವರನ ಕಡೆಯವರು ವಿವಾಹ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ತಹಶೀಲ್ದಾರ್ ಕಲ್ಯಾಣ ಮಂಟಪದ ಮಾಲೀಕರ ಸಭೆ ಕರೆದು ಆದೇಶ ಉಲ್ಲಂಘನೆ ಮಾಡದಂತೆ ಸೂಚನೆ ನೀಡಿದ್ದರು. ಆದರೆ, ಸೂಚನೆ ನೀಡಿದ್ದರೂ ಆದೇಶ ಉಲ್ಲಂಘನೆ ಮಾಡಿದ ಕಲ್ಯಾಣ ಮಂಟಪದ ಮಾಲೀಕನ ವಿರುದ್ಧ ದಂಡ ವಿಧಿಸಿ ಪ್ರಕರಣ ದಾಖಲಿಸಿದ್ದಾರೆ. ಕಲ್ಯಾಣ ಮಂಟಪ, ಭೂಮಿಸಿದ್ದೇಶ್ವರ ದೇವಾಲಯದ ಬಳಿ ಹೆಚ್ಚು ಜನ ಸೇರಿದಂತೆ ಹಾಗೂ ಯಾವುದೇ ಕಾರ್ಯಕ್ರಮ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.