ಮಂಡ್ಯ: ಮಹಾಮಾರಿ ಕೋವಿಡ್ ನಿಯಂತ್ರಣಕ್ಕೆ ಶಿಕ್ಷಕಿಯೊಬ್ಬರು ದೇವರಿಗೆ ಮುಡಿ ಕೊಟ್ಟ ಘಟನೆ ಮಂಡ್ಯದಲ್ಲಿ ನಡೆದಿದೆ.
ಅನ್ನಪೂರ್ಣೇಶ್ವರಿ ನಗರದ ದೈಹಿಕ ಶಿಕ್ಷಣ ಶಿಕ್ಷಕಿ ಉಷಾರಾಣಿ ಮುಡಿ ಕೊಟ್ಟವರು. ಇವರು ಬಸವೇಶ್ವರ ದೇವರಿಗೆ ಮುಡಿಕೊಟ್ಟು ಹರಕೆ ತೀರಿಸಿ ಕೊರೊನಾ ಹೋಗಲಿ ಎಂದು ಬೇಡಿಕೊಂಡಿದ್ದಾರೆ.
'ಆಗಸ್ಟ್ 20 ರಂದು ಕೋವಿಡ್ ಪರೀಕ್ಷೆ ಮಾಡಿಸಿದ್ದೆ. ಅಂದು ನನಗೆ ಪಾಸಿಟಿವ್ ವರದಿ ಬಂತು. ನನ್ನ ಗಂಡ ಸಂಜಯ್ ಕುಮಾರ್ ಅವರಿಗೂ ಸೋಂಕು ತಗುಲಿ 20 ದಿನಗಳ ಕಾಲ ಹೋಂ ಐಸೊಲೇಶನ್‌ನಲ್ಲಿದ್ದೆವು. ಆಗ ಯಾವ ಬಂಧು-ಬಳಗದವರೂ ನಮ್ಮನ್ನು ಕಾಣಲು ಬರಲಿಲ್ಲ. ಹೀಗಾಗಿ, ಯಾರಿಗೂ ಈ ರೀತಿಯಾಗಬಾರದು ಎಂದು ದೇವರಿಗೆ ಹರಿಕೆ ಹೊತ್ತು ಕೇಶ ಮುಂಡನ ಮಾಡಿಸಿದ್ದೇವೆ' ಎಂದರು.
ಶಿಕ್ಷಕಿಯ ಕಾರ್ಯಕ್ಕೆ ಸ್ನೇಹಿತರು ಸೇರಿದಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಸದ್ಯ ಸಕ್ಕರೆ ನಾಡಿನಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಶಿಕ್ಷಕಿ ಇದೇ ವೇಳೆ ಮನವಿ ಮಾಡಿದ್ದಾರೆ.