ETV Bharat / state

ಸಿಪಿವೈ ಪುತ್ರಿಗೆ ಕಾನೂನು ಕಂಟಕ: TAPCMS ನಿರ್ದೇಶಕಿಗೆ ಅಧ್ಯಕ್ಷನಿಂದ ಬೆದರಿಕೆ ಆರೋಪ

author img

By

Published : Oct 3, 2021, 12:14 PM IST

ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ನೆಲ ಬಾಡಿಗೆ ಮತ್ತು ಕಂದಾಯ ಪಾವತಿಸದ ಕಾರಣಕ್ಕೆ ಅವರ ವಿರುದ್ಧ ಸ್ಥಳೀಯ ಸಹಕಾರ ಸಂಸ್ಥೆಯೊಂದು ಕಾನೂನು ಹೋರಾಟಕ್ಕೆ ಮುಂದಾಗಿದೆ. ಈ ಹಿನ್ನೆಲೆ, TAPCMS ಅಧ್ಯಕ್ಷ ದೂರವಾಣಿ ಕರೆ ಮಾಡಿ ಮಹಿಳಾ ನಿರ್ದೇಶಕಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.

TAPCMS Director threatened from organisation President
TAPCMS ನಿರ್ದೇಶಕಿಗೆ ಅಧ್ಯಕ್ಷನಿಂದ ಬೆದರಿಕೆ

ಮಂಡ್ಯ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ ಎದುರಾದ ಹಿನ್ನೆಲೆ, TAPCMS ಅಧ್ಯಕ್ಷ ದೂರವಾಣಿ ಕರೆ ಮಾಡಿ ಕಚೇರಿಯ ಮಹಿಳಾ ನಿರ್ದೇಶಕಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.

ನಿಶಾ ಯೋಗೇಶ್ವರ್ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧಾರ ಮಾಡಿದ್ದು, ಈ ನಿರ್ಧಾರವನ್ನು ಸಭೆಯು ಮಾಧ್ಯಮಗಳ ಮುಂದಿಟ್ಟಿದ್ದಕ್ಕೆ ನಿರ್ದೇಶಕಿಗೆ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗ್ತಿದೆ.

ಮಂಡ್ಯ ಮದ್ದೂರು TAPCMS ಅಧ್ಯಕ್ಷ ಮಹದೇವು, ನಿರ್ದೇಶಕಿ ಕೆ.ಹೆಚ್. ಇಂದಿರಾ ಎಂಬುವವರಿಗೆ ಬೆದರಿಕೆ ಹಾಕಿದ್ದಾನೆ. ನಾನು ಸಂಸ್ಥೆ ಅಧ್ಯಕ್ಷನಾಗಿ, ಹಿರಿಯನಾಗಿ ಹೇಳ್ತಿದ್ದೀನಿ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದರಿಂದ ಸಂಸ್ಥೆಗೂ, ನಮಗೂ ಧಕ್ಕೆ ಆಗಲಿದೆ. ನಮಗೆ ಧಕ್ಕೆ ಆದಾಗ ಸುಮ್ಮನೇ ಇರೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ನೆಲ ಬಾಡಿಗೆ ಮತ್ತು ಕಂದಾಯ ಪಾವತಿಸದ ಸಿ ಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ

ಹೇಳ್ತಿದ್ದೀನಿ, ಮುಂದೆ ಆಗೋದನ್ನು ಕಾದು ನೋಡು. ನಾಳೆ ಈ ಸಂಬಂಧ ಸಭೆ ಕರೆಯುತ್ತೇನೆ. ಅಲ್ಲಿ ಮಾತನಾಡು, ಅದೇನು ಹೇಳ್ತೀಯಾ ಹೇಳು ಎಂದು ಅಧ್ಯಕ್ಷ ಮಹದೇವು ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.