ಮಂಡ್ಯ: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ವೇಳೆ ತಹಶೀಲ್ದಾರ್ ನೌಕರನೊಬ್ಬರಿಂದ ಪಿಪಿಇ ಕಿಟ್ ಧರಿಸಿಕೊಂಡಿರುವ ಘಟನೆ ನಡೆದಿದೆ.
ನಾಗಮಂಗಲ ತಹಶೀಲ್ದಾರ್ ಕುಂ.ಈ.ಅಹಮದ್ ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕಾಗಿ ಆಗಮಿಸಿದ್ದ ವೇಳೆ ಕೆಳ ದರ್ಜೆಯ ನೌಕರನಿಂದ ಪಿಪಿಇ ಕಿಟ್ ಹಾಕಿಸಿಕೊಂಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
ಗ್ರಾಮ ಲೆಕ್ಕಾಧಿಕಾರಿ ಕಾರಲ್ಲಿ ತಂದಿದ್ದ ಪಿಪಿಇ ಕಿಟ್ಅನ್ನು ಕೆಳ ದರ್ಜೆ ನೌಕರನ ಕೈಯಲ್ಲಿ ಹಾಕಿಸಿಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನೌಕರನ ಕೈಯಲ್ಲಿ ಪಿಪಿಇ ಕಿಟ್ ಧರಿಸಿಕೊಂಡಿದ್ದು ಎಷ್ಟು ಸರಿ ಎಂದು ಜನರು ಚರ್ಚೆ ಮಾಡುವಂತಾಗಿದೆ.