ಮಂಡ್ಯ: ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಜಲಯೋಗಕ್ಕೆ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ತಯಾರಿ ಮಾಡುತ್ತಿದ್ದಾರೆ.
ಖುದ್ದು ಸ್ವಾಮೀಜಿಯೇ ಜಲ ಯೋಗ ಮಾಡಲಿದ್ದು, ನಗರದ ಖಾಸಗಿ ಈಜು ಕೊಳದಲ್ಲಿ ಪೂರ್ವ ತಯಾರಿ ನಡೆಸಿದರು. ವಿಶ್ವ ಯೋಗ ದಿನಾಚರಣೆ ಸಲುವಾಗಿ ಜಲ ಯೋಗ ಪ್ರದರ್ಶನಕ್ಕೆ ಚಂದ್ರವನ ಆಶ್ರಮದ ಸ್ವಾಮೀಜಿ ಮುಂದಾಗಿದ್ದಾರೆ. ಅಂದು ವಿವಿಧ ಬಗೆಯ ಜಲಯೋಗದ ಝಲಕ್ ತೋರಿಸಲಿದ್ದಾರೆ. ನಗರದ ಪಿಇಟಿ ಈಜುಕೊಳದಲ್ಲಿ ಜಲಯೋಗ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಈಜುಕೊಳಕ್ಕೆ ಸ್ವಾಮೀಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ತಾವೇ ಜಲಯೋಗ ತಯಾರಿ ನಡೆಸಿದರು.