ETV Bharat / state

ಸಿನಿಮಾ ಕ್ಷೇತ್ರದಿಂದ ಮಂಡ್ಯ ಸಂಸದರಾಗಿ ಆಯ್ಕೆಯಾದ ಮೂರನೇ ವ್ಯಕ್ತಿ ಸುಮಲತಾ ಅಂಬರೀಶ್​​ - undefined

ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ತನ್ನ ಪ್ರತಿಸ್ಪರ್ಧಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ತಮ್ಮನ್ನು ಗೆಲ್ಲಿಸಿದ ಮಂಡ್ಯ ಜನತೆಗೆ ಸುಮಲತಾ ಕೃತಜ್ಞತೆ ಸಲ್ಲಿಸಿದ್ದಾರೆ.

ಸುಮಲತಾ ಅಂಬರೀಶ್​​
author img

By

Published : May 24, 2019, 3:26 PM IST

ಮಂಡ್ಯ ಕ್ಷೇತ್ರಕ್ಕೂ ಸಿನಿಮಾ ಕ್ಷೇತ್ರಕ್ಕೂ ಭಾರೀ ನಂಟು ಇದೆ. ಸಕ್ಕರೆ ನಾಡಿನಿಂದ ರೆಬಲ್ ಸ್ಟಾರ್ ಅಂಬರೀಶ್ ಮೂರು ಬಾರಿ (1998, 1999 ಜನತಾ ದಳದಿಂದ, 2004 ರಲ್ಲಿ ಕಾಂಗ್ರೆಸ್ ಪಕ್ಷದಿಂದ) ಆಯ್ಕೆ ಆಗಿದ್ದರು. 2013 ಲೋಕಸಭಾ ಉಪ ಚುನಾವಣೆಯಲ್ಲಿ ನಟಿ ರಮ್ಯ ಸಂಸದರಾಗಿ ಆಗಿದ್ದರು. ಸಿನಿಮಾ ಕ್ಷೇತ್ರದಿಂದಲೇ ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಸಂಸದರಾಗಿ ಆಯ್ಕೆಯಾದ ಮೂರನೇ ವ್ಯಕ್ತಿ ಹಾಗೂ ಎರಡನೇ ಮಹಿಳಾ ಸಂಸದೆ.

sumalata
ಸುಮಲತಾ, ಅಂಬರೀಶ್​​

ಸಿನಿಮಾ ಕ್ಷೇತ್ರದಿಂದ ಡಾ. ಅಂಬರೀಶ್ ಅವರ ಪ್ರಭಾವವೇ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಎನ್ನಬಹುದು. ಲೋಕಸಭಾ ಸದಸ್ಯರಾಗಿ ಕಾವೇರಿ ವಿಚಾರ ಬಂದಾಗ ಕೇಂದ್ರ ಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು. ಇದೀಗ ಅವರ ಪತ್ನಿ ಸುಮಲತಾ ಅಂಬರೀಶ್ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಂಬರೀಶ್ ನಿಧನದಿಂದ ಜನರು ಸುಮಲತಾ ಮೇಲೆ ಒಲವು ತೋರಿದ್ದು, ಸುಮಲತಾ ಅಂಬರೀಶ್ ಅವರು ಪ್ರಚಾರದ ವೇಳೆ ಸೆರಗು ಒಡ್ಡಿ ಮತದಾರರಲ್ಲಿ ಕೇಳಿಕೊಂಡ ರೀತಿ, ದರ್ಶನ್, ಯಶ್​​​​, ರಾಕ್​​ಲೈನ್ ವೆಂಕಟೇಶ್, ದೊಡ್ಡಣ್ಣ ಸುಮಲತಾ ಬೆನ್ನಿಗೆ ನಿಂತದ್ದು ಅಥವಾ ಯಾರು ತಮ್ಮ ಬಗ್ಗೆ ಏನು ಮಾತನಾಡಿದರೂ ಅದಕ್ಕೆ ತಿರುಗಿ ಮಾತನಾಡದೇ, ಕಟುವಾದ ಟೀಕೆಗಳಿಗೆ ಅವರಂತೆಯೇ ಉತ್ತರ ನೀಡದಿದ್ದದ್ದು ಒಟ್ಟಿನಲ್ಲಿ ಈ ಎಲ್ಲಾ ಅಂಶಗಳು ಅವರ ಗೆಲುವಿಗೆ ಕಾರಣವಾಯಿತು ಎನ್ನಬಹುದು.

ಆದರೆ, ಚುನಾವಣೆ ಕಣ ಅಂದರೆ ಒಬ್ಬರ ಮೇಲೆ ಒಬ್ಬರು ಕೆಸರು ಎರಚುವುದು ಎಂಬ ವಿಚಾರವನ್ನು ಸುಮಲತಾ ಅಂಬರೀಶ್ ಸುಳ್ಳಾಗಿಸಿದ್ದಾರೆ ಎಂದರೆ ತಪ್ಪಿಲ್ಲ.

sumlata
ಸುದ್ದಿಗೋಷ್ಠಿಯಲ್ಲಿ ಸುಮಲತಾ

ಮುಂದಿನ ಗುರಿ

​​​​​​​ಸುಮಲತಾ ಅವರ ಮುಂದೆ ಇದೀಗ ಸಾಕಷ್ಟು ಸವಾಲುಗಳಿವೆ. ಮಂಡ್ಯ ಜನರ ಸ್ವಾಭಿಮಾನವನ್ನು ಅವರು ಉಳಿಸಬೇಕಾಗಿದೆ. ಜನರ ಕೆಲಸ, ಕ್ಷೇತ್ರದ ಬೆಳವಣಿಗೆ , ಕಾವೇರಿ ನೀರಿನ ವಿಚಾರ ಎಲ್ಲವನ್ನೂ ಅವರು ಎದುರಿಸಬೇಕಿದೆ. ಒಟ್ಟಿನಲ್ಲಿ ಮುಂದಿನ 5 ವರ್ಷಗಳು ಸುಮಲತಾ ಮಂಡ್ಯ ಪರ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸುಮಲತಾ ಅಂಬರೀಶ್ ಮಂಡ್ಯದಿಂದ ಎರಡನೇ ಮಹಿಳಾ ಲೋಕ ಸಭಾ ಸದಸ್ಯೆ

ನಾಡಿನ ಹೆಮ್ಮಯ ಮಂಡ್ಯ ಕ್ಷೇತ್ರಕ್ಕೂ ಸಿನಿಮಾ ಕ್ಷೇತ್ರಕ್ಕೂ ಬಹಳವಾದ ನಂಟು. ಈ ಸಕ್ಕರೆ ನಾಡಿನಿಂದ ಡಾ ಅಂಬರೀಶ್ ಅವರು ಮೂರು ಬಾರಿ ಸಂಸದ ಆಗಿ (1998, 1999 ಜನತಾ ದಳ್ ಇಂದ, 21004 ರಲ್ಲಿ ಕಾಂಗ್ರೆಸ್ ಪಕ್ಷದಿಂದ) ಆಯ್ಕೆ ಆಗಿದ್ದರು. ಹಾಗೆ ನೋಡಿದರೆ 1952 ರಿಂದ ಇಂದಿನ ವರೆಗೆ ಶಿವನಂಜಪ್ಪ ಅವರು 4 ಬಾರಿ, ಎಸ್ ಎಂ ಕೃಷ್ಣ ಅವರು ಎರಡು ಬಾರಿ, ಜಿ ಮಾದೆ ಗೌಡ ಅವರು 2 ಬಾರಿ ಸಂಸದರಗಿ ಆಯ್ಕೆ ಆಗಿದ್ದವರು.

2013 ಲೋಕ ಸಭಾ ಉಪ ಚುನಾವಣೆಯಲ್ಲಿ ಚಂದನವಂದ ನಟಿ ರಮ್ಯ ಸಂಸದರಾಗಿ ಆಗಿದ್ದರು. ಸಿನಿಮಾ ಕ್ಷೇತ್ರದಿಂದಲೇ ಸುಮಲತಾ ಅಂಬರೀಶ್ ಅವರು ಮೂರನೇ ವ್ಯಕ್ತಿ ಆಯ್ಕೆ ಆಗಿರುವುದು.

ಸಿನಿಮಾ ಕ್ಷೇತ್ರದಿಂದ ಡಾ ಅಂಬರೀಶ್ ಅವರ ಪ್ರಭಾವವೇ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಎನ್ನಬಹುದು. ಡಾ ಅಂಬರೀಶ್ ಅವರು ಕಾವೇರಿ ವಿಚಾರವಾಗಿ ಲೋಕ ಸಭಾ ಸದಸ್ಯ ಆಗಿ ಮತ್ತು ಕೇಂದ್ರ ಮಂತ್ರಿ ಆಗಿ ರಾಜೀನಾಮೆ ಸಹ ನೀಡಿದ್ದರು. ಅವರು ನಿಜವಾದ ಮಂಡ್ಯದ ಗಂಡು ಎಂಬುದಕ್ಕೆ ಹೆಚ್ಚು ಹೆಗ್ಗಳಿಕೆ ಸಹ ಆಗಿತ್ತು.

ಅಂಬರೀಶ್ ಅವರ ನಿಧನದಿಂದ ಅವರ ಪತ್ನಿ ಸುಮಲತಾ ಅಂಬರೀಶ್ ಅವರಿಗೆ ಸಿಂಪತಿ ಅಲೆ ಸಿಕ್ಕಿರುವುದರಲ್ಲಿ ಅತಿಶ್ಯೋಕ್ತಿಯೇನಿಲ್ಲ. ಸುಮಲತಾ ಅಂಬರೀಶ್ ಅವರ ಸೇರಗು ಒಡ್ಡಿ ಮತ ದಾರರಲ್ಲಿ ಕೇಳಿಕೊಂಡ ರೀತಿ ಅವರಿಗೆ ಹೇಗೆ ಪ್ಲಸ್ ಆಯಿತೋ, ಜೊತೆಗೆ ಅವರ್ ಹಿಂದೆ ನಿಂತ ಜೋಡೆತ್ತು ದರ್ಶನ್, ಯಷ್ ಮತ್ತು ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಸಹ ಇವರ ಗೆಲುವಿಗೆ ಸಹಾಯವಾದರೂ, ಸುಮಲತಾ ಅಂಬರೀಶ್ ಅವರ ತಾಳ್ಮೆ, ತಿಳುವಳಿಕೆ, ಎಲ್ಲೂ ಹೆಚ್ಚು ಮಾತನಾಡದೇ, ಕಟುವಾದ ಟೀಕೆಗಳಿಗೆ ಉತ್ತರಿಸಿದೆ ಪ್ರೌಡಿಮಿಯನ್ನು ಕಾಪಾಡಿಕೊಂಡಿದ್ದು ಅವರಿಗೆ ಪ್ರಜ್ಞಾವಂತರಿಂದ ಹೆಚ್ಚು ಒಲವು ಸಿಕ್ಕಿತ್ತು.

ಚುನಾವಣೆ ಕಣ ಅಂದರೆ ಒಬ್ಬರ ಮೇಲೆ ಒಬ್ಬರು ಕೆಸರು ಎರಚುವುದು ಎಂಬ ವಿಚಾರಕ್ಕೆ ಸುಮಲತಾ ಅಂಬರೀಶ್ ಅವರು ನಾಂದಿ ಹಾಡಿದ್ದಾರೆ. ಹಾಗೆಯೇ ದರ್ಶನ್ ಹಾಗೂ ಯಷ್ ಸಹ ತಮ್ಮ ಪವರ್ ದುರ್ಭಳಕೆ ಮಾಡಿಕೊಳ್ಳಲೆ ಇಲ್ಲ.

ಮುಂದಿನ ಗುರಿ? ಸುಮಲತಾ ಅಂಬರೀಶ್ ಅವರು ಪ್ರಥಮ ಪಕ್ಷೇತರ ಅಭ್ಯರ್ಥಿ ಆಗಿ ಮಂಡ್ಯ ಲೋಕ ಸಭಾ ಆಯ್ಕೆ ಆಗಿರುವುದು. ಹಾಗಾಗಿ ಅವರ ಮುಂದೆ ಈಗ ಯಾವ ಪಕ್ಷಕ್ಕೆ ಒಲವು ತೋರಿಸಬೇಕು ಎಂಬುದು ಸಹ ಜಾಣ್ಮೆಯ ನಡೆ ಆಗಿರುತ್ತದೆ.

ನನ್ನ ಕ್ಷೇತ್ರದ ಜನರುಗಳಿಗೆ ನಾನು ಉತ್ತರಿಸಬೇಕು ಎಂದ ಮೇಲೆ ಅವರ ಸಮಸ್ಯೆಗಳಿಗೆ ಪರಿಹಾರ ಕೇವಲ ಸಂಸದರ ಅನುದಾನದಿಂದ ಆಗುವುದು ಸಾದ್ಯವಿಲ್ಲ. ಆಡಳಿತ ಬಿ ಜೆ ಪಿ ಪಕ್ಷದ ಜೊತೆ ಸೇರಿಕೊಂಡು ತಮ್ಮ ಕ್ಷೇತ್ರಕ್ಕೆ ಹೆಚ್ಚು ಕೆಲಸಗಳನ್ನು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವುದು ಅವರ ಮುಂದಿರುವ ಉಪಾಯ.

ಜನರ ಕೆಲಸ, ಕ್ಷೇತ್ರದ ಬೆಳವಣಿಗೆ ಆಗಬೇಕು ಅಂದರೆ ಸುಮಲತಾ ಅಂಬರೀಶ್ ಅವರು ಆಳುವ ಪಕ್ಷಕ್ಕೆ ಜೊತೆಯಾಗಿ ತಮ್ಮ ಕ್ಷೇತ್ರದ ಅಭಿವೃದ್ದಿ ಬಗ್ಗೆ ಕಾಳಜಿ ವಹಿಸುವುದು ದೊಡ್ಡ ವಿಚಾರ. ಅದರ ಜೊತೆಗೆ ಕಾವೇರಿ ನೀರಿನ ವಿಚಾರ ಸಹಾ ಆಗಾಗ್ಗೆ ಬರುವುದು ಉಂಟು. ಅವರ ಪತಿ ಡಾ ಅಂಬರೀಶ್ ಕಾವೇರಿನ ನೀರಿನ ವಿಚಾರಕ್ಕೆ ಕುರಿತಾಗಿ ರಾಜೀನಾಮೆ ಕೊಟ್ಟ ಹಾಗೆ ಅವರು ಮಾಡದೆ ಉಪಾಯದಿಂದ ಎಲ್ಲವನ್ನೂ ಬಗೆಹರಿಸಲು ಅವರಿಗೆ ಮಾರ್ಗ ಇದೆ.

ಬರುವ ಐದು ವರ್ಷಗಳ ಅನುದಾನ ಕ್ಷೇತ್ರದ ಅಭಿವೃದ್ದಿಗೆ ಜನರಿಗೆ ತಿಳಿಯುವ ಹಾಗೆ ಖರ್ಚು ಮಾಡಿದರೆ ಸುಮಲತಾ ಅಂಬರೀಶ್ ಅವರು ಸಮಸ್ಯೆಗಳಿಗೆ ಒಳ್ಳೆಯ ಸ್ಪಂದನೇ ನಿಡಿದಂತೆ ಆಗುವುದು ಖಚಿತ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.