ಮಂಡ್ಯ: ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಇಂದು ಮಂಡ್ಯದ ಹಲವು ಭಾಗಗಳಲ್ಲಿ ಏಕಾಂಗಿಯಾಗಿ ಪ್ರಚಾರ ನಡೆಸಿದರು.
ನಗರದ ಮುಸಲ್ಮಾನರ ಬ್ಲಾಕ್ಗೆ ತೆರಳಿ, ಬಿಜೆಪಿ ಸೇರ್ಪಡೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ನಾನು ಬಿಜೆಪಿ ಸೇರಲ್ಲ, ನನ್ನ ಮೊದಲ ಆದ್ಯತೆ ಕಾಂಗ್ರೆಸ್ ಆಗಿತ್ತು. ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ಪಕ್ಷೇತರವಾಗಿ ಸ್ಪರ್ಧೆ ಮಾಡಿರುವೆ ಎಂದರು.
ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ. ಹಾಗಿದ್ದರೆ ಅವರು ಕೊಟ್ಟ ಆಫರ್ಗಳನ್ನೇ ಒಪ್ಪಿಕೊಳ್ತಿದ್ದೆ. ಮುಂದೆ ಏನೇ ನಿರ್ಧಾರ ಮಾಡಿದರೂ ನಿಮ್ಮ ಕೇಳಿ ಮಾಡ್ತೀನಿ ಎಂದು ಉರ್ದು ಭಾಷೆಯಲ್ಲೇ ಮನವರಿಕೆ ಮಾಡಿಕೊಟ್ಟರು.
'ಅಣ್ಣ ನಮ್ಮೋನಾದರು ಅತ್ತಿಗೆ ನಮ್ಮೋಳಾ' ಎಂಬ ಟ್ರೋಲ್ ವಿಚಾರವಾಗಿ, ಸೋಷಿಯಲ್ ಮೀಡಿಯಾದಲ್ಲಿ ಬರೋದಕ್ಕೆಲ್ಲಾ ತಲೆಕೆಡಿಸಿಕೊಳ್ಳಬಾರದು. ಅತ್ತಿಗೆ ನಮ್ಮೋಳ ಇಲ್ವಾ ಅನ್ನೋದನ್ನ ಮಂಡ್ಯ ಜನ ತೀರ್ಮಾನಿಸಲಿದ್ದಾರೆ ಎಂದರು.
ಮೇ 23ರ ಬಳಿಕ ಸುಮಲತಾ ಟೂರಿಂಗ್ ಟಾಕೀಸ್ ಪ್ಯಾಕಪ್ ಆಗಲಿದೆ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿ, ನೋಡೋಣ ಅವತ್ತು ನಮ್ಮ ಟೂರಿಂಗ್ ಟಾಕೀಸ್ ಖಾಲಿ ಆಗುತ್ತ, ಇಲ್ಲ ಅವರ ಡ್ರಾಮಾ ಕಂಪನಿ ಖಾಲಿ ಆಗುತ್ತಾ ಎಂದರು.
ಐಟಿ ದಾಳಿ ನಾನೇ ಮಾಡಿಸಿದ್ದು ಎನ್ನುತ್ತಾರೆ. ನಾನು ಇನ್ನೂ ಸಂಸದೆನೆೇ ಆಗಿಲ್ಲ. ಆಗಲೇ ಎಲ್ಲಿಂದ ಬಂತು ಈ ರೀತಿಯ ಪವರ್. ಥ್ಯಾಂಕ್ಸ್ ಹೇಳುತ್ತೇನೆ ನನಗೆ ಈ ಪವರ್ ನೀಡಿದ ಜೆಡಿಎಸ್‌ಗೆ ಎಂದರು.