ಮಂಡ್ಯ: ಕೆಆರ್ಎಸ್ನಿಂದ ನಾಲೆಗೆ ನೀರು ಹರಿಸಿದ್ದು, ರಾಜ್ಯ ಸರ್ಕಾರವೇ, ಕೇಂದ್ರ ಸರ್ಕಾರವಾ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಸಂಸದೆ ಸುಮಲತಾ ಅಂಬರೀಶ್ ಈ ಅನುಮಾನಕ್ಕೆ ಉತ್ತರ ನೀಡಿದ್ದಾರೆ.
![posters](https://etvbharatimages.akamaized.net/etvbharat/prod-images/3929011_.jpg)
ಸಂಸದೆ ಸುಮಲತಾ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಸಚಿವರು ನೀಡಿರುವ ಉತ್ತರದ ಪ್ರತಿಯನ್ನು ಪೋಸ್ಟ್ ಮಾಡಿ ನಾಲೆಗೆ ನೀರು ಹರಿಸಿದ್ದು ರಾಜ್ಯ ಸರ್ಕಾರವಲ್ಲ, ಕೇಂದ್ರ ಸರ್ಕಾರ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ತಮ್ಮ ಮನವಿಗೆ ಸ್ಪಂದಿಸಿ ನಾಲೆಗಳಿಗೆ ನೀರು ಬಿಡಿಸಿದ ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿ ಪೋಸ್ಟ್ ಮಾಡಿದ್ದು, ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ವೈರಲ್ ಆಗಿದೆ.