ETV Bharat / state

ಮಂಡ್ಯ: ದೊಡ್ಡರಸಿಕೆರೆ ಗ್ರಾಪಂ ಚುನಾವಣೆಯಲ್ಲಿ ಮತ ಚಲಾಯಿಸಿದ ಸುಮಲತಾ ಅಂಬರೀಶ್ - ಗ್ರಾ.ಪಂ ಚುನಾವಣೆಯಲ್ಲಿ ಸುಮಲತಾ ಅಂಬರೀಶ್

ನನಗೆ ಇಲ್ಲಿ ಎಲ್ಲರೂ ಆಪ್ತರು, ನನಗೆ ಬೆಂಬಲ ಕೊಟ್ಟಿವರೂ ಕೂಡ ಸ್ಪರ್ಧಿ - ಪ್ರತಿಸ್ಪರ್ಧಿಯಾಗಿರುವಾಗ ನಾನು ಒಂದು‌ ಕಡೆ ಬೆಂಬಲ ನೀಡುವುದು ಸೂಕ್ತವಲ್ಲ. ಹೀಗಾಗಿ ಜನರಿಗೆ ಯಾರು ಸೂಕ್ತ ಅನಿಸುತ್ತಾರೋ ಅವರೇ ಗೆಲ್ಲಲಿ ಎಂದು ಸುಮಲತಾ ಅಂಬರೀಶ್ ದೊಡ್ಡರಸಿಕೆರೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತದಾನ‌ ಮಾಡಿ ಹೇಳಿದರು.

ಸುಮಲತಾ ಅಂಬರೀಶ್
ಸುಮಲತಾ ಅಂಬರೀಶ್
author img

By

Published : Dec 22, 2020, 10:48 PM IST

ಮಂಡ್ಯ: ಮೊದಲ ಬಾರಿಗೆ ಸಂಸದೆ ಸುಮಲತಾ ಅಂಬರೀಶ್ ಮದ್ದೂರು ತಾಲೂಕಿನ ದೊಡ್ಡರಸಿಕೆರೆ ಗ್ರಾಮದ ಮತಗಟ್ಟೆಯಲ್ಲಿ, ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ‌ ಮಾಡಿ ಸರಳತೆ ಮೆರೆದು ಗ್ರಾಮದ ಜನರ ಮೆಚ್ಚುಗೆ ಪಡೆದರು.

ಮತದಾನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ವಿಭಿನ್ನವಾದ ಚುನಾವಣೆ. ಇದರಲ್ಲಿ ಪಕ್ಷದ ಚಿಹ್ನೆ ಇರುವುದಿಲ್ಲ. ನನಗೆ ಇಲ್ಲಿ ಎಲ್ಲರೂ ಆಪ್ತರು, ನನಗೆ ಬೆಂಬಲ ಕೊಟ್ಟಿವರೂ ಕೂಡ ಸ್ಪರ್ಧಿ-ಪ್ರತಿಸ್ಪರ್ಧಿಯಾಗಿರುವಾಗ ನಾನು ಒಂದು‌ ಕಡೆ ಬೆಂಬಲ ನೀಡುವುದು ಸೂಕ್ತವಲ್ಲ. ಹೀಗಾಗಿ ಜನರಿಗೆ ಯಾರು ಸೂಕ್ತ ಅನಿಸುತ್ತಾರೋ ಅವರೇ ಗೆಲ್ಲಲಿ ಎಂಬುದು ನನ್ನ ಅಭಿಪ್ರಾಯ ಎಂದರು.

ಗ್ರಾ.ಪಂ ಚುನಾವಣೆಯಲ್ಲಿ ಮತ ಚಲಾಯಿಸಿದ ಸುಮಲತಾ ಅಂಬರೀಶ್

ನಮ್ಮ‌ ಬೆಂಬಲಿಗರೇ ಇಬ್ಬರು ಪ್ರತಿ ಸ್ಪರ್ಧಿಗಳಾಗಿದ್ದಾರೆ. ಯಾರ ಕಡೆ ಬೆಂಬಲಕ್ಕೆ ನಾನು ನಿಂತರು ಅದು ತಪ್ಪಾಗುತ್ತದೆ ಎಂದ ಅವರು, ನಾನು ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿರುವುದು ಹೊಸ ಅನುಭವ ನೀಡಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.