ಮಂಡ್ಯ: ಮಂಡ್ಯದಲ್ಲಿ ಶುರುವಾಗಿದ್ದ ಆಕ್ಸಿಜನ್ ಪಾಲಿಟಿಕ್ಸ್ ವಿಚಾರಕ್ಕೆ ರೆಬಲ್ ಲೇಡಿ ಸುಮಲತಾ ಅಂಬರೀಶ್ ಅವರು ಬಿಲ್ ಸಹಿತ ಆರೋಪ ಮಾಡಿದವರಿಗೆ ಟಾಂಗ್ ನೀಡಿದ್ದಾರೆ.
ಸುಮಲತಾ ಪ್ರಚಾರಕ್ಕಾಗಿ ಸುಳ್ಳು ಹೇಳಿದ್ದಾರೆ. ಸ್ವಂತ ಹಣದಿಂದ ಆಕ್ಸಿಜನ್ ನೀಡಿಲ್ಲ ಎಂದು ಜೆಡಿಎಸ್ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ ಆರೋಪಿಸಿದ್ದರು. ಇದರಿಂದ ಕೆಂಡಾಮಂಡಲರಾಗಿರುವ ಸಂಸದೆ ಆಕ್ಸಿಜನ್ ಖರೀದಿಸಿರುವ ಬಿಲ್ ಸಹಿತ ತಿರುಗೇಟು ನೀಡಿದ್ದಾರೆ.
38 ಸಿಲಿಂಡರ್ಗೆ ಆಕ್ಸಿಜನ್ ಭರ್ತಿ ಮಾಡಿಸಿರುವ ಬಿಲ್ ಸಹಿತ ಫೇಸ್ ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಜಿಲ್ಲಾಡಳಿತದಿಂದ ಕಳಹಿಸಿರುವ ಖಾಲಿ ಸಿಲಿಂಡರ್‌ಗಳನ್ನು ಭರ್ತಿ ಮಾಡಿಸಿಕೊಟ್ಟಿದ್ದೇನೆ ಎಂದು ಮಾಹಿತಿ ಬಿಡುಗಡೆ ಮಾಡಿರುವುದಲ್ಲದೇ ಅಗತ್ಯ ಇರುವವರೆಗೂ ಈ ಕೆಲಸ ಮುಂದುವರೆಸುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಮಾಡಿ ನಾಚಿಕೆಯಾಗುವಂತೆ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಶಾಸಕರು-ಸಂಸದೆ ಸುಮಲತಾ ನಡುವೆ ಹೊಸ ಸಮರಕ್ಕೆ ನಾಂದಿ ಹಾಡಿದ ಆಕ್ಸಿಜನ್
ನೀವು ಆಕ್ಸಿಜನ್ ಪೂರೈಸಲು ಸಾಧ್ಯವಾಗದಿದ್ದರೆ ಆ ವೈಫಲ್ಯಕ್ಕೆ ನನ್ನ ಕೆಲಸಗಳನ್ನು ಗುರಿ ಮಾಡಬೇಡಿ. ಖಾಲಿ ಸಿಲಿಂಡರ್‌ಗಳನ್ನು ತನ್ನಿ, ಭೇದ ಭಾವವಿಲ್ಲದೆ ಆಕ್ಸಿಜನ್ ಭರ್ತಿ ಮಾಡಿಸಿಕೊಡುವ ಪ್ರಯತ್ನ ಮಾಡುತ್ತೇನೆಂದು ಸುಮಲತಾ ಹೇಳಿದ್ದಾರೆ.