ETV Bharat / state

'ಸಂಸದರ ಜನಪ್ರಿಯತೆ ಸಹಿಸಲಾಗ್ತಿಲ್ಲ'.. ಸುಮಲತಾ ಅಂಬರೀಶ್ ಆಪ್ತ ಎಸ್. ಸಚ್ಚಿದಾನಂದ ಕಿಡಿ!

ಮೊನ್ನೆಯ ಸಭೆ ನೋಡಿದರೆ ಗೊತ್ತಾಗುತ್ತೆ. ಸಂಸದರನ್ನೇ ನೇರವಾಗಿ ಟಾರ್ಗೆಟ್ ಮಾಡ್ತಿದ್ದಾರೆ. ಸಂಸದರು ಏನು ಮಾಡಿದ್ರೂ ಕೂಡ ಸುದ್ದಿ ಆಗುತ್ತಿದೆ. ಇದನ್ನು ಸಹಿಸಲು ಅವರಿಗೆ ಆಗುತ್ತಿಲ್ಲ..

Sumalatha Ambarish close friends reaction on JDS MLAs statement
ಸುಮಲತಾ ಅಂಬರೀಶ್ ಆಪ್ತ ಎಸ್. ಸಚ್ಚಿದಾನಂದ ಕಿಡಿ!
author img

By

Published : May 9, 2021, 4:39 PM IST

ಮಂಡ್ಯ: 'ಸಂಸದರ ಜನಪ್ರಿಯತೆ ಸಹಿಸಲಾಗ್ತಿಲ್ಲ' ಎಂದು ದಳಪತಿಗಳ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಆಪ್ತ ಎಸ್. ಸಚ್ಚಿದಾನಂದ ಕಿಡಿ ಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಸದರು ಜನಪ್ರಿಯತೆ ಗಳಿಸುತ್ತಿದ್ದಾರೆ. ಇದನ್ನು ಜೆಡಿಎಸ್ ಶಾಸಕರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ, ಕೆಲವು ಜೆಡಿಎಸ್ ಶಾಸಕರು ಸಂಸದರ ವಿರುದ್ಧ ಆರೋಪ ಮಾಡಿದ್ದಾರೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.

ಸುಮಲತಾ ಅಂಬರೀಶ್ ಆಪ್ತ ಎಸ್. ಸಚ್ಚಿದಾನಂದ

ಸಂಸದರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್​ನವರು ಸೋಲಿನ ಹತಾಶೆಯಿಂದ ಇನ್ನೂ ಕೂಡ ಹೊರ ಬಂದಿಲ್ಲ. ರಾಜಕೀಯ ಮಾಡಬೇಕೆಂದರೆ ಚುನಾವಣೆಗೆ ಇನ್ನೂ ಮೂರು ವರ್ಷ ಇದೆ. ಆ ಚುನಾವಣೆ ಬಂದಾಗ ಜನರ ಮುಂದೆ ಹೋಗೋಣ. ಆಗ ಜನರೇ ತೀರ್ಪು ಕೊಡ್ತಾರೆ ಎಂದು ಹೇಳಿದರು.

ಮೊನ್ನೆಯ ಸಭೆ ನೋಡಿದರೆ ಗೊತ್ತಾಗುತ್ತೆ. ಸಂಸದರನ್ನೇ ನೇರವಾಗಿ ಟಾರ್ಗೆಟ್ ಮಾಡ್ತಿದ್ದಾರೆ. ಸಂಸದರು ಏನು ಮಾಡಿದ್ರೂ ಕೂಡ ಸುದ್ದಿ ಆಗುತ್ತಿದೆ. ಇದನ್ನು ಸಹಿಸಲು ಅವರಿಗೆ ಆಗುತ್ತಿಲ್ಲ.

ಹೀಗಾಗಿ, ಸಂಸದೆ ವಿರುದ್ಧ ಮಾತನಾಡಿದ್ರೆ ತಮಗೂ ಪ್ರಚಾರ ಸಿಗುತ್ತೆ ಅಂತ ಹೀಗೆ ಮಾತನಾಡುತ್ತಾರೆ ಎಂದು ಜೆಡಿಎಸ್ ಶಾಸಕರ ವಿರುದ್ಧ ವ್ಯಂಗ್ಯವಾಡಿದರು.

ಇದನ್ನೂ ಓದಿ: ಮಂಡ್ಯ ಆಕ್ಸಿಜನ್ ಪಾಲಿಟಿಕ್ಸ್: ಬಿಲ್ ಸಹಿತ ಜೆಡಿಎಸ್ ಶಾಸಕರಿಗೆ ಸಂಸದೆ ಸುಮಲತಾ ಅಂಬರೀಶ್ ಟಾಂಗ್​

ದಯವಿಟ್ಟು ರಾಜಕೀಯವನ್ನು ಬದಿಗಿಡಿ. ಇದು ಹೆಲ್ತ್ ಎಮರ್ಜೆನ್ಸಿ ಸಮಯವಾಗಿದೆ. ಈ ಸಮಯದಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಸಂಸದರು, ಜಿಲ್ಲಾಡಳಿತದ ಜತೆ ಶಾಸಕರೆಲ್ಲರೂ ಸೇರಿ ಕೆಲಸ ಮಾಡಿ ಎಂದು ಮನವಿ ಮಾಡಿದರಲ್ಲದೇ, ಜನರ ಜೀವ ಉಳಿಸುವ, ಕೊರೊನಾ ನಿಯಂತ್ರಣಕ್ಕೆ ಮುಂದಾಗಿ ಎಂದು ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.