ಮಂಡ್ಯ: ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಬೇರೆ ಬೇರೆ ಮಗ್ಗುಲುಗಳಿಗೆ ಹೊರಳಿಕೊಳ್ಳುತ್ತಿದೆ. ಮಂಗಳವಾರ ಮಂಡ್ಯದ ಪಿಇಎಸ್ ಕಾಲೇಜಿನ ಬಳಿ 'ಅಲ್ಲಾಹು ಅಕ್ಬರ್' ಎಂದು ಕೂಗಿದ ವಿದ್ಯಾರ್ಥಿನಿ ಮುಸ್ಕಾನ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
'ನಾನು ಅಸೈನ್ಮೆಂಟ್ ಕೊಡಲು ಕಾಲೇಜಿಗೆ ಹೋಗಿದ್ದೆ. ಈ ವೇಳೆ ಬುರ್ಕಾ ತೆಗೆದುಕೊಂಡು ಹೋಗು ಎಂದು ಹುಡುಗರು ಹೇಳಿದರು. ಗುಂಪು ಕಟ್ಟಿಕೊಂಡು ಘೋಷಣೆಗಳನ್ನು ಕೂಗುತ್ತಿದ್ದರು. ಇದೇ ರೀತಿ ನನ್ನ ಸ್ನೇಹಿತೆಯರಿಗೂ ತಡೆದಿದ್ದರು. ಅವರು ಜೈ ಶ್ರೀರಾಮ್ ಎಂದು ಕೂಗಿದರು. ನಾನು ಅಲ್ಲಾಹು ಅಕ್ಬರ್' ಎಂದು ಕೂಗಿದೆ' ಎಂದು ಸ್ಪಷ್ಟನೆ ನೀಡಿದರು.
'ಅವರು ಕೂಗಿದ್ದು ತಪ್ಪಿಲ್ಲ, ನಾನು ಕೂಗಿದ್ದೂ ತಪ್ಪಿಲ್ಲ. ನಾನು ನನ್ನ ಧರ್ಮ ಪಾಲನೆ ಮಾಡಿದ್ದೇನೆ. ಅವರು ಕಿವಿ ಹತ್ತಿರ ಬಂದು ಘೋಷಣೆ ಕೂಗಿದ್ರು. ಆ ಕ್ಷಣದಲ್ಲಿ ನನಗೆ ಯಾವ ಭಯವೂ ಆಗಲಿಲ್ಲ. ನಾನು ಯಾಕೆ ಭಯ ಪಡಬೇಕು?' ಎಂದರು.
ಇದೇ ವೇಳೆ, ಕೋರ್ಟ್ ಆದೇಶ ಏನು ಬರುತ್ತೋ ಗೊತ್ತಿಲ್ಲ. ಆದರೆ ಹಿಜಬ್ ವಿಚಾರದಲ್ಲಿ ಆದೇಶ ಪಾಲನೆ ಕಷ್ಟ' ಎಂದು ಹೇಳಿದರು.
ಇದನ್ನೂ ಓದಿ: 'ನಾನು ಹಿಜಾಬ್ ಹಾಕಲ್ಲ, ಅದು ಅವರವರ ಸ್ವಾತಂತ್ರ್ಯ': ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸೈಯದ್