ಮಂಡ್ಯ: ಮಾಜಿ ಸಿಎಂ ಎಸ್‌ಎಂಕೆ ಶಿಷ್ಯನಿಗೆ ಬಿಜೆಪಿ ಗೇಟ್‌ಪಾಸ್ ನೀಡಿ, ರೆಬೆಲ್ ಶಾಸಕ ನಾರಾಯಣಗೌಡರ ಬೆಂಬಲಿಗರಿಗೆ ಅವಕಾಶ ನೀಡಲು ಶುರುಮಾಡಿದೆ.
ಮನ್ಮುಲ್ ನ ನಾಮ ನಿರ್ದೇಶಕ ಸ್ಥಾನದಿದಂದ ಎಸ್.ಎಂ.ಕೃಷ್ಣ ಬೆಂಬಲಿಗರ ನಾಮಿನಿ ಆದೇಶ ರದ್ದು ಮಾಡಿ ಅನರ್ಹ ಶಾಸಕ ನಾರಾಯಣಗೌಡರ ಬೆಂಬಲಿಗನಿಗೆ ಮಣೆ ಹಾಕಲಾಗಿದೆ.
ಕಳೆದ ಒಂದು ವಾರದ ಹಿಂದೆ ಎಸ್.ಎಂ.ಕೃಷ್ಣ ಬೆಂಬಲಿಗ ಪ್ರಸನ್ನ ಕುಮಾರ್ ಅವರನ್ನು ನಾಮನಿರ್ದೇಶನ ಮಾಡಿ ಆದೇಶ ಮಾಡಿದ್ದ ರಾಜ್ಯ ಸರ್ಕಾರ ದಿಢೀರ್ ಆದೇಶ ರದ್ದುಪಡಿಸಿ ಕಿಕ್ಕೇರಿಯ ಕೆ.ಜಿ ತಮ್ಮಣ್ಣಗೌಡಗೆ ಮಣೆ ಹಾಕಿದೆ.
![notification](https://etvbharatimages.akamaized.net/etvbharat/prod-images/4465145_vicky.jpg)
ಹಾಲು ಒಕ್ಕೂಟ ನಾಮ ನಿರ್ದೇಶನ ಸಂಬಂಧ ಜಿಲ್ಲಾಧ್ಯಕ್ಷ ನಾಗಣ್ಣಗೌಡ ಈ ಕುರಿತು ಅಸಮಾಧಾನ ಹೊರ ಹಾಕಿದ್ದರು. ಇದು ಜಿಲ್ಲಾ ಬಿಜೆಪಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಪ್ರಸನ್ನಕುಮಾರ್ ನೇಮಕ ವಾಪಸ್ ಪಡೆದಿರೋದು ಮತ್ತೊಂದು ಚರ್ಚೆಗೆ ಕಾರಣವಾಗಿದೆ.