ಮಂಡ್ಯ: ಶ್ರೀರಂಗಪಟ್ಟಣದ ಆರ್ಥಿಕ ಚಟುವಟಿಕೆ ನಿಂತಿರುವುದು ಪ್ರವಾಸೋದ್ಯಮದಿಂದ. ಆದರೆ ಲಾಕ್ಡೌನ್ನಿಂದ ಇಲ್ಲಿನ ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಇಲ್ಲಿನ ದೇವಾಲಯಗಳು ಭಕ್ತರಿಲ್ಲದೆ ಖಾಲಿಯಾಗಿವೆ.
ಮೈಸೂರು ಹೊರತು ಪಡಿಸಿದರೆ ಮತ್ತೊಂದು ಪ್ರಸಿದ್ಧ ಪ್ರವಾಸಿ ತಾಣ ಶ್ರೀರಂಗಪಟ್ಟಣ. ಇಲ್ಲಿನ ಶ್ರೀರಂಗನಾಥ ಹಾಗೂ ನಿಮಿಷಾಂಭ ದೇವಿಯ ದರ್ಶನ ಮಾಡಿ ಪ್ರಮುಖ ಪ್ರವಾಸಿ ತಾಣಗಳನ್ನು ಪ್ರವಾಸಿಗರು ವೀಕ್ಷಣೆ ಮಾಡುತ್ತಾರೆ. ಆದರೆ ಕೊರೊನಾದಿಂದಾಗಿ ಭಕ್ತರಿಲ್ಲದೆ ದೇವಾಲಯಗಳು ಬಣಗುಡುತ್ತಿವೆ. ಇದರಿಂದ ದೇವಾಲಯದ ಆದಾಯದ ಜೊತೆಗೆ ವ್ಯಾಪಾರವೂ ನೆಲ ಕಚ್ಚಿದ್ದು, ವ್ಯಾಪಾರಿಗಳು ಪ್ರವಾಸಿಗರ ನಿರೀಕ್ಷೆಯಲ್ಲಿದ್ದಾರೆ.
ಪ್ರವಾಸಿಗರಿಂದಲೇ ಆರ್ಥಿಕ ಚಟುವಟಿಕೆ ನಡೆಯುತ್ತಿದ್ದರಿಂದ ಎಷ್ಟೋ ವ್ಯಾಪಾರಿಗಳು ಜೀವನ ಸಾಗಿಸುತ್ತಿದ್ದರು. ಆದರೆ ಸದ್ಯ ದೇವಾಲಯಗಳಲ್ಲಿ ಭಕ್ತರು ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರಿಲ್ಲದೇ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.