ಮಂಡ್ಯ : ಬಿಜೆಪಿ ಎಂದರೆ ಕರೆಪ್ಟ್ ಪೊಲಿಟಿಕಲ್ ಪಾರ್ಟಿ. ನಾವು ಅವಿಶ್ವಾಸ ತಂದರೆ ಜೆಡಿಎಸ್‌ನವರು ಸೈಲೆಂಟ್ ಆದರು. ನಾವು ಮಣ್ಣಿನ ಮಕ್ಕಳು ಅಂತಾರೆ. ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದರೆ, ಅವರ ಮಗ ಆರ್‌ಟಿಜಿಎಸ್ ಮೂಲಕ ಪಡೆಯುತ್ತಿದ್ದಾರೆ ಎಂದು ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೃಷಿ ಭೂಮಿಯನ್ನು ಕಾರ್ಪೊರೇಟರ್‌ಗಳಿಗೆ ಕೊಡಲು ಬಿಜೆಪಿ ಸರ್ಕಾರ ಮುಂದಾಗಿದೆ. ಭೂ ಕಾಯಿದೆ ತಿದ್ದುಪಡಿ ಹಿಂದೆ ಯಾವ ಉದ್ದೇಶವಿದೆ. ಕೋಟ್ಯಂತರ ರೂಪಾಯಿ ನುಂಗಿದ್ದಾರೆ. ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರೈತರ ಸಮಸ್ಯೆಗಳಿಗೆ ದುಡ್ಡು ಇದ್ಯಾ. ಘೋಷಣೆ ಮಾಡಿದ ಹಣ ಕೊಟ್ರಾ. ದುಡ್ಡು ಇಲ್ಲ ಅಂತಾರೆ. ಅಧಿಕಾರ ಬಿಟ್ಟು ಹೋಗಿ. ನಾವು ಮಾಡುತ್ತೇವೆ. ಸರ್ಕಾರ ಸಾಲದಲ್ಲಿದೆ. ನನ್ನ ಕಾಲದಲ್ಲಿ 2.36 ಲಕ್ಷ ಕೋಟಿ ಸಾಲ ಇತ್ತು. ಈಗ 4.01ಲಕ್ಷ ಕೋಟಿಗೆ ಏರಿದೆ. ವರ್ಷಕ್ಕೆ 23 ಸಾವಿರ ಕೋಟಿ ಬಡ್ಡಿ ಕಟ್ಟಬೇಕು. ಯಡಿಯೂರಪ್ಪ ಹೆಣದ ಮೇಲೆ ದುಡ್ಡು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಯಡಿಯೂರಪ್ಪ, ಅಶೋಕಣ್ಣ ಸೇರಿ ರಾಜ್ಯ ಮಾರುವ ಕೆಲಸ ಮಾಡುತ್ತಿದ್ದಾರೆ. ಜನ ಧ್ವನಿ ಏರಿಸಬೇಕಾಗಿದೆ. ರಾಹುಲ್ ಗಾಂಧಿಯವರು ಮುಂದಿನ ತಿಂಗಳು ರಾಜ್ಯಕ್ಕೆ ಬರುತ್ತಿದ್ದಾರೆ. ಅಂದು ರೈತ ಪರ ಹೋರಾಟ ಮಾಡಲಿದ್ದಾರೆ ಎಂದು ಘೋಷಣೆ ಮಾಡಿದರು.
ನಮ್ಮ ಪರಿಷತ್ ಸದಸ್ಯರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಪರಿಷತ್‌ನಲ್ಲಿ ಮೂರು ಬಿಲ್ ವಾಪಸ್ ಹೋಗಿದ್ದು ಇತಿಹಾಸ ಎಂದರು.
ಸಭೆಯಲ್ಲಿ ಕೋಟಿ ಸಹಿ ಸಂಗ್ರಹ ಮಾಡಿ ಸೋನಿಯಾ ಗಾಂಧಿ ಮೂಲಕ ರಾಷ್ಟ್ರಪತಿಗಳಿಗೆ ಮೂರು ಬಿಲ್‌ಗಳ ವಿರುದ್ಧ ಮನವಿ ಸಲ್ಲಿಸಲು ತೀರ್ಮಾನ ಮಾಡಲಾಯಿತು. ಜೊತೆಗೆ ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈಗ ಜಾರಿ ಮಾಡಿರುವ ಬಿಲ್‌ಗಳನ್ನು ವಾಪಸ್ ಪಡೆಯುವ ಭರವಸೆ ನೀಡಲಾಯಿತು