ETV Bharat / state

ತ್ರಿವಿಧ ದಾಸೋಹಿ ಹೆಸರಲ್ಲಿ ನಳನಳಿಸುತ್ತಿದೆ ಹಚ್ಚ ಹಸಿರಿನ ಪಾರ್ಕ್ - ಮಂಡ್ಯದಲ್ಲಿ ಶಿವಕುಮಾರ ಸ್ವಾಮೀಜಿ ಪಾರ್ಕ್ ಅಭಿವೃದ್ಧಿ,

ಕಾವೇರಿ ಕೃಪೆಯಿಂದ ಹಸಿರಿನಿಂದ ಕಂಗೊಳಿಸುವ ಸಕ್ಕರೆ ಜಿಲ್ಲೆಯಲ್ಲಿ ತ್ರಿವಿಧ ದಾಸೋಹಿಯ ಹೆಸರಿನಲ್ಲಿಯೂ ಉದ್ಯಾನವನ ಕಂಗೊಳಿಸುತ್ತಿದೆ.

Shivakumar Swamiji park, Shivakumar Swamiji park development, Shivakumar Swamiji park developed in Mandya,  Shivakumar Swamiji park news, ಶಿವಕುಮಾರ ಸ್ವಾಮೀಜಿ ಪಾರ್ಕ್​, ಮಂಡ್ಯದಲ್ಲಿ ಶಿವಕುಮಾರ ಸ್ವಾಮೀಜಿ ಪಾರ್ಕ್, ಮಂಡ್ಯದಲ್ಲಿ ಶಿವಕುಮಾರ ಸ್ವಾಮೀಜಿ ಪಾರ್ಕ್ ಅಭಿವೃದ್ಧಿ, ಶಿವಕುಮಾರ ಸ್ವಾಮೀಜಿ ಪಾರ್ಕ್ ಸುದ್ದಿ,
ತ್ರಿವಿಧ ದಾಸೋಹಿ ಹೆಸರಿನಲ್ಲಿ ನಳನಳಿಸುತ್ತಿದೆ ಹಚ್ಚ ಹಸಿರಿನ ಪಾರ್ಕ್
author img

By

Published : Jun 5, 2020, 2:49 PM IST

ಮಂಡ್ಯ: ಪಾಳು ಬಿದ್ದಿದ್ದ ಪಾರ್ಕ್ ಈಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಇದರ ಹಿಂದಿದೆ ಕಾಯಕಯೋಗಿ ಫೌಂಡೇಷನ್. ಮತ್ತೊಂದು ವಿಚಾರವೆಂದರೆ ಈ ಪಾರ್ಕ್​ನಲ್ಲಿ ಗಿಡ ನೆಟ್ಟು ಶುಭ ಹಾರೈಸಿದ್ದು ಕೂಡ ಸ್ವತಃ ಶಿವಕುಮಾರ ಸ್ವಾಮೀಜಿಯರೇ ಆಗಿದ್ದಾರೆ.

ತ್ರಿವಿಧ ದಾಸೋಹಿ ಹೆಸರಿನಲ್ಲಿ ನಳನಳಿಸುತ್ತಿದೆ ಹಚ್ಚ ಹಸಿರಿನ ಪಾರ್ಕ್

ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿರೋ ಶಿವಕುಮಾರ ಸ್ವಾಮೀಜಿ ಉದ್ಯಾನವನ ವಿಶ್ವ ಪರಿಸರ ದಿನದ ಕೊಡುಗೆ ಎಂದೇ ಹೇಳಬಹುದು. ಕಳೆದ 6 ವರ್ಷಗಳ ಹಿಂದೆ ಪಾಳು ಬಿದ್ದಿದ್ದ ಈ ಪಾರ್ಕ್ ಇಂದು ಹಸಿರಿನಿಂದ ನಳನಳಿಸುತ್ತಿದೆ.

ಕಾಯಕಯೋಗಿ ಫೌಂಡೇಷನ್‌ನ ಅಧ್ಯಕ್ಷ, ಪತ್ರಕರ್ತ ಶಿವಕುಮಾರ್ ಶ್ರಮದ ಫಲವಾಗಿ ಈ ಪಾರ್ಕ್‌ ಸುಂದರವಾಗಿ ಕಂಗೊಳಿಸುತ್ತಿದೆ. ನಗರಸಭೆಯಿಂದ 50 ವರ್ಷಗಳಿಗೆ ಲೀಸ್‌ಗೆ ಪಡೆದು ಈ ಪಾರ್ಕ್ ನಿರ್ವಹಣೆ ಮಾಡಲಾಗುತ್ತಿದೆ. ಸುಮಾರು ಎರಡೂವರೆ ಎಕರೆ ಪ್ರದೇಶದ ಈ ಪಾರ್ಕ್‌ನಲ್ಲಿ ವಿವಿಧ ಬಗೆಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ‌. ಪ್ರತಿ ತಿಂಗಳು 20 ಸಾವಿರ ರೂಪಾಯಿಗೂ ಹೆಚ್ಚು ವೆಚ್ಚ ಮಾಡಿ ನಿರ್ವಹಣೆ ಮಾಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.