ಮಂಡ್ಯ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮಂಡ್ಯದ ಆರ್ಎಸ್ಎಸ್ ಕಾರ್ಯಕರ್ತರು ಚಡ್ಡಿ ಪಾರ್ಸಲ್ ಕಳುಹಿಸಿದ್ದಾರೆ. ಜಿಲ್ಲೆಯ ಕೆ.ಆರ್. ಪೇಟೆಯ RSS ಕಾರ್ಯಕರ್ತರಿಂದ RSS ಚಡ್ಡಿ ಪಾರ್ಸಲ್ ಮಾಡಲಾಗಿದೆ.
ಇತ್ತೀಚೆಗೆ ಸಿದ್ದರಾಮಯ್ಯ ಅವರು ಆರ್ಎಸ್ಎಸ್ ಚಡ್ಡಿ ಸುಟ್ಟು ಹಾಕುತ್ತೇವೆಂದು ಹೇಳಿದ್ದರು. ಈ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆ RSS ನ ಖಾಕಿ ಚಡ್ಡಿಯನ್ನ ಕಾರ್ಯಕರ್ತರು ಪಾರ್ಸಲ್ ಮಾಡಿದ್ದಾರೆ. ಬಾಕ್ಸ್ನಲ್ಲಿ ಆರ್ಎಸ್ಎಸ್ ಚಡ್ಡಿ ಹಾಕಿ ಸಿದ್ದು ಮನೆಯ ವಿಳಾಸಕ್ಕೆ ಪಾರ್ಸಲ್ ಮಾಡಿದ್ದಾರೆ.
ಇದನ್ನೂ ಓದಿ:ಅವರು ಚಡ್ಡಿ ಸುಟ್ಕೊಂಡು ಇರಲಿ, ನಮ್ಮ ಹಳೇ ಚಡ್ಡಿ ಕಳಿಸಿ ಕೊಡುತ್ತೇವೆ: ಸಿ ಟಿ ರವಿ