ETV Bharat / state

ಸಕ್ಕರೆ ನಾಡಿನಲ್ಲೂ ರಾಬರ್ಟ್​ ಅಬ್ಬರ: ಪಟಾಕಿ ಸಿಡಿಸಿ ಸಂಭ್ರಮಾಚರಣೆ - ಮಂಡ್ಯದಲ್ಲಿ ರಾಬರ್ಟ್ ಸಿನಿಮಾ ಸಂಭ್ರಮ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್‌ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಮಂಡ್ಯದಲ್ಲಿ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ಚಿತ್ರಮಂದಿರಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಕ್ಕರೆನಾಡಿನಲ್ಲೂ ರಾಬರ್ಟ್​ ಅಬ್ಬರ
Darshan fans are celebrating in Mandya
author img

By

Published : Mar 11, 2021, 12:07 PM IST

Updated : Mar 11, 2021, 3:32 PM IST

ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್‌ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಸಿನಿಮಾ ಶತಮಾನೋತ್ಸವ ಆಚರಿಸಲೆಂದು, ಅಭಿಮಾನಿಗಳು ಅಶೋಕನಗದಲ್ಲಿರುವ ಆಂಜನೇಯಸ್ವಾಮಿ ದೇವರಿಗೆ ವಿಶೇಷಪೂಜೆ ಸಲ್ಲಿಸಿ, ಕುಂಬಳಕಾಯಿ ಒಡೆದು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷಪೂಜೆ ಸಲ್ಲಿಸಿದ ಅಭಿಮಾನಿಗಳು, ತಮ್ಮ ಆಟೋದಲ್ಲಿ ರಾಬರ್ಟ್‌ ಸಿನಿಮಾ ಪೋಸ್ಟರ್‌ ಕಟ್ಟಿಕೊಂಡು ಮಹಾವೀರ ಚಿತ್ರಮಂದಿರವರೆಗೆ ಮೆರವಣಿಗೆ ಮಾಡುವ ಮೂಲಕ ನೆಚ್ಚಿನ ನಟನಿಗೆ ಅಭಿಮಾನ ಮೆರೆದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಭ್ರಮಾಚರಣೆ

ರಾಬರ್ಟ್​ ಲಾಕ್‌ಡೌನ್‌ ನಂತರ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಪ್ರಮುಖ ಸಿನಿಮಾ ಎನಿಸಿಕೊಂಡಿದ್ದು, ನಟ ದರ್ಶನ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಚಿತ್ರಮಂದಿರದ ಸುತ್ತ ಕಟೌಟ್, ಬ್ಯಾನರ್‌ಗಳು ರಾರಾಜಿಸುತ್ತಿದ್ದು, ಈಗಾಗಲೇ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು‌ ತುಂಬಿಕೊಂಡಿದ್ದಾರೆ.

ಓದಿ: ರಾಬರ್ಟ್ ಸಿನಿಮಾ ಬಿಡುಗಡೆ: ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

ಜಿಲ್ಲೆಯ ಮಹಾವೀರ, ಸಿದ್ದಾರ್ಥ ಹಾಗೂ ಗುರುಶ್ರೀ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಇದೇ ವೇಳೆ ಅಭಿಮಾನಿಗಳು ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.

Last Updated : Mar 11, 2021, 3:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.