ETV Bharat / state

ನಿಷ್ಠೆ ಬಿಟ್ಟಿದ್ದರೆ ನಿಮಗಿಂತ ಮೊದಲೇ ನಾನು ಸಚಿವನಾಗುತ್ತಿದ್ದೆ : ಶಾಸಕ-ಸಚಿವರ ಮಧ್ಯೆ ವಾಕ್ಸಮರ

author img

By

Published : Apr 18, 2021, 10:30 AM IST

Updated : Apr 18, 2021, 11:37 AM IST

ಶ್ರೀರಂಗಪಟ್ಟಣದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಾ ಅವರನ್ನು ತರಾಟೆಗೆ ತೆಗೆದುಕೊಂಡರೆ, ಅಧಿಕಾರಿಗಳ ಪರ ನಿಂತುಕೊಂಡೇ ಸಚಿವ ಕೆ.ಸಿ. ನಾರಾಯಣಗೌಡರು ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.

riot-between-minister-and-mla-in-government-program-in-mandya
ಸಚಿವ ಕೆ.ಸಿ. ನಾರಾಯಣಗೌಡ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ನಡುವೆ ವಾಕ್ಸಮರ

ಮಂಡ್ಯ: ಸರ್ಕಾರಿ ಕಾರ್ಯಕ್ರಮವು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ನಡುವೆ ವಾಕ್ಸಮರಕ್ಕೆ ವೇದಿಕೆಯಾಯಿತು.

ಶ್ರೀರಂಗಪಟ್ಟಣದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಾ ಅವರನ್ನು ತರಾಟೆಗೆ ತೆಗೆದುಕೊಂಡರೆ, ಅಧಿಕಾರಿಗಳ ಪರ ನಿಂತ ಸಚಿವ ಕೆ.ಸಿ. ನಾರಾಯಣಗೌಡರು ಶಾಸಕರ ವಿರುದ್ಧವೇ ವಾಗ್ದಾಳಿ ನಡೆಸಿದರು.

ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ವಾಕ್ಸಮರ ತಲುಪಿತು. ನಂತರ ಇಬ್ಬರನ್ನು ಸ್ಥಳದಲ್ಲಿ ಇದ್ದವರು ಸಮಾಧಾನ ಪಡಿಸಿದರು. ಇಬ್ಬರು ನಾಯಕರು ಸರ್ಕಾರದ ಕಾರ್ಯಕ್ರಮದಲ್ಲಿ ಮುಜುಗರಕ್ಕೆ ಒಳಗಾದರು.

ನಿಷ್ಠೆ ಬಿಟ್ಟಿದ್ದರೆ ನಿಮಗಿಂತ ಮೊದಲೇ ನಾನು ಸಚಿವನಾಗುತ್ತಿದ್ದೆ : ನಿಷ್ಠೆಯಿ೦ದ ಇರುವುದಿಂದಲೇ ನಾನು ಇಂದಿಗೂ ಜೆಡಿಎಸ್ ಪಕ್ಷದ ಶಾಸಕನಾಗಿ ಉಳಿದಿದ್ದೇನೆ ನಿಮ್ಮ ಹಾಗೆ ನಿಷ್ಠೆ ಬಿಟ್ಟಿದ್ದರೆ ನಿಮಗಿಂತ ಮೊದಲೇ ನಾನು ಸಚಿವನಾಗುತ್ತಿದ್ದೆ ಎಂದು ಸಚಿವ ನಾರಾಯಣಗೌಡರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್ ನೀಡಿದರು.

ಇಬ್ಬರ ನಡುವಿನ ವಾಕ್ಸಮರದ ವೇಳೆ ವೈಯಕ್ತಿಕ ವಿಚಾರಗಳತ್ತಲೂ ಮಾತುಗಳು ಹೊರಳಿದವು. ನನ್ನ ಉಪಚುನಾವಣೆ ಸಮಯದಲ್ಲಿ ನೀವು ಏನು ಮಾಡಿದ್ದೀರಿ ಅಂತ ನನಗೆ ಚೆನ್ನಾಗಿ ಗೊತ್ತು. ನನ್ನ ವಿರುದ್ಧ ಏನೆಲ್ಲಾ ರಣತಂತ್ರಗಳನ್ನು ರೂಪಿಸಿದ್ದೀರಿ ಎಂಬುದೂ ಗೊತ್ತು. ಅದನ್ನು ಈ ಸಭೆಯಲ್ಲಿ ಹೇಳುವ ಅಗತ್ಯವಿಲ್ಲ ಎಂದಾಗ, ನಿಮ್ಮದೇ ಬೇರೆ ಪಕ್ಷ, ನಮ್ಮದೇ ಬೇರೆ ಪಕ್ಷ. ಈಗಿರುವಾಗ ನಿಮಗೆ ಚುನಾವಣೆಯಲ್ಲಿ ಸಹಾಯ ಮಾಡಲು ಹೇಗೆ ಸಾಧ್ಯ ಎಂದು ಶಾಸಕ ರವೀಂದ್ರ ಕುಟುಕಿದರು.

ಬಿಜೆಪಿ ಸರ್ಕಾರ ಉಳಿಯುವುದಕ್ಕೆ ನಮ್ಮ (ಜೆಡಿಎಸ್) ಪಕ್ಷದ ಕೊಡುಗೆ ಏನು ಎನ್ನುವುದು ಮುಖ್ಯಮಂತ್ರಿಗಳಿಗೆ ಗೊತ್ತಿದೆ. ನಿಮಗೆ ಗೊತ್ತಿಲ್ಲದಿದ್ದರೆ ಮುಖ್ಯಮಂತ್ರಿಗಳ ಬಳಿ ಕೇಳಿ ತಿಳಿದುಕೊಳ್ಳಿ ಎಂದು ರವೀಂದ್ರ ಶ್ರೀಕಂಠಯ್ಯ ನೇರವಾಗಿ ಹೇಳಿದರು.

ರಾಜಕೀಯ ಹೊಸದಲ್ಲ: ಜನರನ್ನು ಗುಂಪು ಕಟ್ಟಿಕೊಂಡು ಬರುವ ಜಾಯಮಾನ ನನ್ನದಲ್ಲ. ನಾನು ಯಾರನ್ನೂ ಗುಂಪು ಕಟ್ಟಿಕೊಂಡು ಇಲ್ಲಿಗೆ ಬಂದಿಲ್ಲ. ಬದಲಿಗೆ ನೊಂದ ಸಾರ್ವಜನಿಕರ ಅಧಿಕಾರಿಗಳನ್ನ ಪ್ರಶ್ನೆ ಮಾಡುತ್ತಿದ್ದಾರೆ. ನಮಗೇನು ರಾಜಕೀಯ ಹೊಸದಲ್ಲ, ನಮ್ಮ ಕುಟುಂಬ ಸಹ 80 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಎಂದು ಸಚಿವರಿಗೆ ಪ್ರತ್ಯುತ್ತರ ನೀಡಿದರು.

ಯಾಕೆ ಈ ವಾಕ್ಸಮರ..? : ಶ್ರೀರಂಗಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾ.ಪಂ ಹಾಗೂ ರಾಜೀವ್‌ಗಾಂಧಿ ವಸತಿ ನಿಗಮದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಂದಾಯ ಅದಾಲತ್‌ ಹಾಗೂ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನಾ ಹಕ್ಕುಪತ್ರ ಸಮಾರಂಭದಲ್ಲಿ ಸಚಿವ ಸಿ.ನಾರಾಯಣಗೌಡ, ಶಾಸಕ ರವೀಂದ್ರ ಶ್ರೀಕಂಠಯ್ಯ, ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಪಾಲ್ಗೊಂಡಿದ್ದರು. ಜೊತೆಗೆ ಪಾಂಡವಪುರ ಎಸಿ.ಬಿ.ಸಿ. ಶಿವಾನಂದ ಮೂರ್ತಿ, ತಹಶೀಲ್ದಾರ್ ಎಂ.ವಿ.ರೂಪಾ ಸೇರಿ ದ೦ತೆ ಕ೦ದಾಯ ಅಧಿಕಾರಿಗಳು ಹಾಜರಿದ್ದರು.

ಆಹ್ವಾನ ಪತ್ರಿಕೆಯಲ್ಲಿ ಕಂದಾಯ ಅದಾಲತ್ ಎಂದು ನಮೂದಿಸಿರುವ ಬಗ್ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ತಹಶೀಲ್ದಾರ್ ಎಂ.ವಿ.ರೂಪಾ ಅವರನ್ನು ಪ್ರಶ್ನಿಸಿದರು. ಕಂದಾಯ ಅದಾಲತ್ ಎಂದರೇನು? ಅದನ್ನು ಯಾವಾಗ ಮಾಡಿದ್ದೀರಿ, ಅದರಡಿ ಯಾವ ಫಲಾನುಭವಿಯಾದರೂ ಇಲ್ಲಿ ಇದ್ದಾರಾ? ಎಂದು ಸಾರ್ವಜನಿಕರೆದುರೇ ಅವರನ್ನು ತರಾಟೆ ತೆಗೆದುಕೊಂಡರು.

ಓದಿ : ಅಯೋಧ್ಯೆಗೂ ಮುನ್ನ ಸಿದ್ದರಾಮಯ್ಯರ ಊರಲ್ಲಿ ರಾಮಮಂದಿರ ನಿರ್ಮಾಣ.. ಇಲ್ಲೇ 'ಶ್ರೀರಾಮ'ನ ದರ್ಶನ

ಜನರನ್ನು ದಾರಿ ತಪ್ಪಿಸಬೇಡಿ: ಈ ವೇಳೆ ತಹಶೀಲ್ದಾರ್‌ ಎಂ.ವಿ.ರೂಪಾ ಅವರು ಆಹ್ವಾನ ಪತ್ರಿಕೆಯನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಇದರಿಂದ ಕೋಪಗೊಂಡ ಶಾಸಕರು, ಸಾರ್ವಜನಿಕರಿಗೆ ಸುಳ್ಳು, ಮಾಹಿತಿ ನೀಡಿ ದಾರಿ ತಪ್ಪಿಸಬೇಡಿ, ನಿಮ್ಮ ಕಾರ್ಯವೈಖರಿ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಸ್ವಲ್ಪ ತಾಳ್ಮೆ ಕಳೆದುಕೊಂಡ ತಹಶೀಲ್ದಾರ್ ಎಂ.ವಿ. ರೂಪಾ, ನಾನು ನನ್ನ ವ್ಯಾಪ್ತಿಯೊಳಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ಅಧಿಕಾರ ವಹಿಸಿಕೊಂಡ ಬಳಿಕ ಜನರ ಸಾವಿರಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದೇನೆ. ನನ್ನ ಕಾರ್ಯವೈಖರಿ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡು ಮಾತನಾಡಬೇಡಿ ಎಂದರು.

ದಾಖಲೆಗಳ ಸಹಿತ ಬಹಿರಂಗ: ಆಗ ಮತ್ತೆ ಶಾಸಕ ರವೀಂದ್ರ ಶ್ರೀಕಂಠಯ್ಯ, ನೀವು ಯಾವ ರೀತಿ ಕೆಲಸ ಮಾಡುತ್ತಿದ್ದೀರಿ ಎಂಬ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ನೀವು ಎಲ್ಲೆಲ್ಲಿ ಅವ್ಯವಹಾರ ಮಾಡಿದ್ದೀರಿ. ಎನ್ನುವುದನ್ನು ದಾಖಲೆ ಸಹಿತ ಸಾರ್ವಜನಿಕರೆದುರು ಬಹಿರಂಗಪಡಿಸುತ್ತೇನೆ ಎಂದು ಬಹಿರಂಗವಾಗಿಯೇ ಸವಾಲು ಹಾಕಿದರು.

ಈ ಸಮಯದಲ್ಲಿ ಏನೇ ಸಮಸ್ಯೆ ಇದ್ದರೂ ಸಹ ಕೊಠಡಿಯಲ್ಲೇ ಕುಳಿತು ಬಗೆ ಹರಿಸಿಕೊಳ್ಳೋಣ. ಅದನ್ನು ಬಿಟ್ಟು ಹೀಗೆ ಸಾರ್ವಜನಿಕವಾಗಿ ಅಧಿಕಾರಿಗಳನ್ನು ನಿಂದಿಸುವುದು ಶೋಭೆ ತರುವುದಿಲ್ಲ ಎಂದು ಉಸ್ತುವಾರಿ ಸಚಿವರು ಶಾಸಕರನ್ನು ಸಮಾಧಾನಪಡಿಸಲು ಮುಂದಾದರು.

ವೈಯಕ್ತಿಕ ಸಮಸ್ಯೆ ಕೇಳುತ್ತಿಲ್ಲ: ಈ ವೇಳೆ ಮತ್ತೆ ಕೆಂಡಾಮಂಡಲವಾದ ಶಾಸಕ ರವೀಂದ್ರ ಶ್ರೀಕಂಠಯ್ಯ, ಕೊಠಡಿಯಲ್ಲಿ ಕುಳಿತು ಮಾತನಾಡಲು ನನ್ನ ವೈಯಕ್ತಿಕ ಸಮಸ್ಯೆಯನ್ನು ಕೇಳುತ್ತಿಲ್ಲ. ಸಾರ್ವಜನಿಕ ಸಮಸ್ಯೆಗಳನ್ನು ಸಾರ್ವಜನಿಕವಾಗಿಯೇ ಕೇಳಬೇಕು, ಅದನ್ನೇ ನಾನು ಮಾಡುತ್ತಿದ್ದೇನೆ. ಇಲ್ಲಿನ ಸಮಸ್ಯೆಗಳ ಬಗ್ಗೆ ನಿಮಗೇನು ತಿಳಿದಿದೆ ಎಂದು ಸಚಿವರನ್ನೇ ಪ್ರಶ್ನಿಸಿದರು.

Last Updated : Apr 18, 2021, 11:37 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.