ETV Bharat / state

ಮೈತ್ರಿ ಸರ್ಕಾರದ ಆಡಳಿತದಿಂದ ಬೇಸತ್ತು ರೆಬೆಲ್​​​​ ಶಾಸಕರಿಂದ ರಾಜೀನಾಮೆ: ಚಲುವರಾಯಸ್ವಾಮಿ

ರೆಬೆಲ್​ ಶಾಸಕರು ಮೈತ್ರಿ ಸರ್ಕಾರದ ಆಡಳಿತದಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಸ್ಪೀಕರ್​ ರಮೇಶ್​ ಕುಮಾರ್​ ಅವರು 14 ಶಾಸಕರನ್ನು ಅನರ್ಹಗೊಳಿಸಿದ್ದು, ಈ ಹಿಂದಿನ ರಾಜೀನಾಮೆ ಪ್ರಕರಣಗಳನ್ನು ಅಧ್ಯಯನ ಮಾಡಬೇಕಿತ್ತು ಎನ್ನುವ ಮೂಲಕ ಸ್ಪೀಕರ್ ತೀರ್ಪಿಗೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

N.cheluvarayaswamy,ಎನ್. ಚಲುವರಾಯಸ್ವಾಮಿ
author img

By

Published : Jul 28, 2019, 7:51 PM IST

ಮಂಡ್ಯ: ರೆಬೆಲ್ ಶಾಸಕರು ಆಡಳಿತದಿಂದ ಬೇಸತ್ತು ರಾಜೀನಾಮೆ ನೀಡಿರಬಹುದು ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿ, ಹಿಂದಿನ ರಾಜೀನಾಮೆ ಪ್ರಕರಣಗಳನ್ನು ಅಧ್ಯಯನ ಮಾಡಬೇಕಿತ್ತು ಎನ್ನುವ ಮೂಲಕ ಸ್ಪೀಕರ್ ತೀರ್ಪಿಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ

ನಾಗಮಂಗಲದಲ್ಲಿ ಮಾತನಾಡಿದ ಎನ್.ಚಲುವರಾಯಸ್ವಾಮಿ, ಸ್ಪೀಕರ್​ ರಮೇಶ್​ ಕುಮಾರ್​ ಅವರು ಶಾಸಕರನ್ನು ಅನರ್ಹಗೊಳಿಸಿದ್ದು, ಹಿಂದಿನ ರಾಜೀನಾಮೆ ಪ್ರಕರಣಗಳನ್ನು ಅಧ್ಯಯನ ಮಾಡಬೇಕಿತ್ತು. ಆಪರೇಷನ್ ಕಮಲಕ್ಕಿಂತ ಸ್ವತಃ ಜೆಡಿಎಸ್​-ಕಾಂಗ್ರೆಸ್​ನ ಶಾಸಕರೇ ಆಡಳಿತದ ವಿಚಾರದಲ್ಲಿ ನಮನೊಂದು ಹೋಗಿರುವುದು ವಾಸ್ತವಾಗಿದೆ. ಕೊಂಚ ಬಿಜೆಪಿಯವರ ಪ್ರಯತ್ನವೂ ಇರಬಹುದು. ರಮೇಶ್​ ಜಾರಕಿಹೊಳಿಯಿಂದ ಪ್ರಾರಂಭವಾದದ್ದು ವಿಶ್ವನಾಥ್​ವರೆಗೂ ಆಡಳಿತದಿಂದ ಶಾಸಕರು ಬೇಸತ್ತು ಹೋಗಿದ್ದು, ಆ ಕುರಿತು ಚರ್ಚೆ ಮಾಡಬೇಕು ಎಂದರು.

ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರಾಗಿರುವುದರಿಂದ ಭವಿಷ್ಯದಲ್ಲಿ ಕಿತ್ತಾಟ ಸಮಸ್ಯೆ ಬರಲ್ಲ. ಅವರೇ ಆಪೋಸಿಶನ್​​​ ಲೀಡರ್​ ಆಗಿ ಮುಂದುವರೆಯುವ ಸಾಧ್ಯತೆಯಿದೆ. ಸ್ಪೀಕರ್​​ ರಮೇಶ್​ ಕುಮಾರ್ ಅವರು 17 ಶಾಸಕರನ್ನು ಅನರ್ಹ ಮಾಡಿದ್ದಾರೆ. ಬಿಜೆಪಿ ಬಹುಮತ ಸಾಬೀತು ಮಾಡುತ್ತದೆ ಎಂದರು.

ಯಡಿಯೂರಪ್ಪ ನಮ್ಮ ಜಿಲ್ಲೆಯವರು. ಅವರಿಗೆ ಒಳ್ಳೆಯದಾಗಲಿ. ಬೂಕನಕೆರೆಗೆ ಬಂದು ಅಭಿವೃದ್ಧಿಗೆ ಅನುದಾನ ಘೋಷಿಸಿದರು. ಅವರು ಹಿರಿಯರು, ಅವರಿಗೆ ದೇವರು ಆರೋಗ್ಯ, ಆಯಸ್ಸು ಕರುಣಿಸಲಿ. ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಡಲಿ ಎಂದರು.

Intro:ಮಂಡ್ಯ: ಆಡಳಿತದಿಂದ ಬೇಸತ್ತು ರಾಜೀನಾಮೆಯನ್ನು ರೆಬೆಲ್ ಶಾಸಕರು ನೀಡಿರಬಹುದು ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿ, ಹಿಂದಿನ ರಾಜೀನಾಮೆ ಪ್ರಕರಣಗಳನ್ನು ಅಧ್ಯಯನ ಮಾಡಬೇಕಿತ್ತು ಅನ್ನೋ ಮೂಲಕ ಸ್ಪೀಕರ್ ತೀರ್ಪಿಗೆ ಪರೋಕ್ಷವಾಗಿ ಅಸಮಧಾನ ಹೊರ ಹಾಕಿದರು.
ನಾಗಮಂಗಲದಲ್ಲಿ ಮಾತನಾಡಿ, ಹಿಂದಿನ ರಾಜೀನಾಮೆ ಪ್ರಕರಣಗಳನ್ನು ಅಧ್ಯಯನ ಮಾಡಬೇಕಿತ್ತು. ಆಡಳಿತದಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಆಪರೇಷನ್ ಕಮಲವೂ ಕೊಂಚ ಇರಬಹುದು ಎಂದರು.
ಆದರೆ ಅದು ಪ್ರಮುಖ ಅಲ್ಲ. ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರಾಗಿರುವುದರಿಂದ ಕಿತ್ತಾಟ ಬರಲ್ಲ. 17 ಶಾಸಕರು ಅನರ್ಹ ಆಗಿದ್ದಾರೆ. ಹೀಗಾಗಿ ಮ್ಯಾಜಿಕ್ ನಂಬರ್ ತಲುಪಲು ಸದನದಲ್ಲಿ ಹಾಜರಿರುವ ಸದಸ್ಯರ ಸಂಖ್ಯೆ ಮುಖ್ಯ. ಬಿಜೆಪಿ 100 ಪರ್ಸೆಂಟ್ ಬಹುಮತ ಸಾಬೀತು ಮಾಡುತ್ತೆ ಎಂದರು.
ಯಡಿಯೂರಪ್ಪ ನಮ್ಮ ಜಿಲ್ಲೆಯವರು.ಅವರಿಗೆ ಒಳ್ಳೆಯದಾಗಲಿ. ಬೂಕನಕೆರೆಗೆ ಬಂದು ಅಭಿವೃದ್ಧಿಗೆ ಅನುದಾನ ಘೋಷಿಸಿದರು. ಅವರು ಹಿರಿಯರು. ಅವರಿಗೆ ಆರೋಗ್ಯ, ಆಯಸ್ಸು ಕರುಣಿಸಲಿ. ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಡಲಿ ಎಂದರು.
ಉಪ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಈಗಾಗಲೇ ಮಂಡ್ಯ ಆಯಿತು. ಈಗ ಕೆ.ಆರ್.ಪೇಟೆಯವರು ಕರೆಯುತ್ತಿದ್ದಾರೆ. ನಾಗಮಂಗಲದವರು ತಿರಸ್ಕರಿಸಿದರು ಅಂತ ಕರೆಯುತ್ತಿರಬಹುದು. ಆ ಜನರಿಗೆ ಚಿರರುಣಿ. ನಾನು ಮೊದಲೇ ಹೇಳಿದಂತೆ ಯಾವುದೇ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು.Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.