ETV Bharat / state

ರಸ್ತೆ ಕಾಮಗಾರಿಗಾಗಿ ಹೋರಾಟ; ಗುದ್ದಲಿಪೂಜೆ ಬೇಡ ಎಂದ ಗ್ರಾಮಸ್ಥರು - ಅರೆಕೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ಗುದ್ದಲಿ ಪೂಜೆ

ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ರಸ್ತೆ ಅಗಲೀಕರಣದ ಅಭಿವೃದ್ದಿ ಕಾಮಗಾರಿಗೆ  ₹10 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಇಂದು ಗುದ್ದಲಿ ಪೂಜೆಯನ್ನು ಹಮ್ಮಿಕೊಂಡಿದ್ರು. ಆದ್ರೆ, ಗ್ರಾಮಸ್ಥರು ಕಾಮಗಾರಿ ನಡೆಸದಂತೆ ಪ್ರತಿಭಟನೆ ನಡೆಸಿದರು.

ರಸ್ತೆ ಕಾಮಗಾರಿಗಾಗಿ ಹೋರಾಟ; ಗುದ್ದಲಿಪೂಜೆ ಬೇಡ ಎಂದ ಗ್ರಾಮಸ್ಥರು
author img

By

Published : Nov 11, 2019, 1:53 PM IST

ಮಂಡ್ಯ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವು ಗುದ್ದಲಿ ಪೂಜೆ ನಡೆದಿದ್ದವು. ಅದೇ ರೀತಿ, ಬಿಜೆಪಿ ಸರ್ಕಾರದಲ್ಲೂ ನಡೆಯುತ್ತಿವೆ ಎಂದು ಗ್ರಾಮಸ್ಥರು ಹಾಗೂ ಶಾಸಕರ ಬೆಂಬಲಿಗರ ನಡುವೆ ಗುದ್ದಲಿ ಪೂಜೆ ವಿಚಾರವಾಗಿ ವಾಕ್ ಸಮರವೇ ನಡೆದಿದೆ‌.

ರಸ್ತೆ ಕಾಮಗಾರಿಗಾಗಿ ಹೋರಾಟ; ಗುದ್ದಲಿಪೂಜೆ ಬೇಡ ಎಂದ ಗ್ರಾಮಸ್ಥರು

ಹೌದು, ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ಗುದ್ದಲಿ ಪೂಜೆ ಹಮ್ಮಿಕೊಂಡಿದ್ದರು. ಈ ಗ್ರಾಮ, ಶಾಸಕರ ತವರು ಗ್ರಾಮ ಕೂಡ ಹೌದು. ರಸ್ತೆ ಅಗಲೀಕರಣದ ಅಭಿವೃದ್ದಿ ಕಾಮಗಾರಿಗೆ ₹10 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಇಂದು ಗುದ್ದಲಿ ಪೂಜೆಯನ್ನು ಹಮ್ಮಿಕೊಂಡಿದ್ರು. ಇನ್ನೇನು ಶಾಸಕರು ಗುದ್ದಲಿಪೂಜೆ ಮಾಡಬೇಕೆನ್ನುವಷ್ಟರಲ್ಲಿ ಊರಿನ ಹಲವು ಗ್ರಾಮಸ್ಥರು ಕಾಮಗಾರಿ ನಡೆಸದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ರು. ರಸ್ತೆ ಅಗಲೀಕರಣದಿಂದ ತಮ್ಮ ಮನೆಗಳು ಹೋಗಲಿದ್ದು, ಮೊದ್ಲು ನಮಗೆ ಪರಿಹಾರ ಕೊಡಿಸಿ ಅಂತಾ ತರಾಟೆಗೆ ತೆಗೆದುಕೊಂಡ್ರು. ಸ್ಥಳಕ್ಕೆ ಬಂದ ಶಾಸಕ ರವೀಂದ್ರ ಶ್ರೀಕಂಠಯ್ಯ ಗ್ರಾಮಸ್ಥರನ್ನು ಮನವೊಲಿಸಲು ಮುಂದಾದ್ರು ಜನರು ಕ್ಯಾರೆ ಅನ್ನಲಿಲ್ಲ. ಶಾಸಕರ ಕ್ರಮ ಖಂಡಿಸಿ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಮಧ್ಯೆ ಧರಣಿ ಕುಳಿತು ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿದ್ರು.

ಒಂದುಕಡೆ ಗ್ರಾಮಸ್ಥರು ಧರಣಿ ಕುಳಿತು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸ್ತಿದ್ರೆ, ಇತ್ತ ಶಾಸಕರು ವಿರೋಧದ ನಡುವೆ ಗುದ್ದಲಿ ಪೂಜೆ ನಡೆಸಿದ್ರು. ಈ ವೇಳೆ, ಶಾಸಕರ ಬೆಂಬಲಿಗರು ಬೇಕೆ ಬೇಕು ರಸ್ತೆ ಬೇಕು ಎಂದು ಕೂಗಿದ್ರೆ, ಮತ್ತೋಂದು ಗುಂಪು ಬೇಡ ಬೇಡ ರಸ್ತೆ ಬೇಡ ಎಂದು ಪ್ರತಿಭಟನೆಗೆ ಮುಂದಾದ್ರು. ಊರಿನವರ ಒತ್ತಾಯದ ಮೇರೆಗೆ ಈ ಗ್ರಾಮದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಮುಂದಾಗಿದ್ದೆ. ಸರ್ಕಾರದ ಜಾಗದಲ್ಲಿ ಮನೆ ಕಟ್ಟಿದ್ರೆ ಪರಿಹಾರ ಕೊಡಲು ಬರೋದಿಲ್ಲ. ಅವ್ರ ಜಾಗದಲ್ಲಿದ್ರೆ ಪರಿಹಾರ ಸಿಗುತ್ತೆ. ಯಾರಿಗೂ ಅನ್ಯಾಯವಾಗಲ್ಲ ಎಂದು ಶಾಸಕ ತಿಳಿಸಿದ್ರು.

ಗ್ರಾಮದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯವರನ್ನು ಸಮಾಧಾನ ಪಡಿಸಿದ್ರು. ಗ್ರಾಮ ಪಂಚಾಯಿತಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದರು.

Intro:ಮಂಡ್ಯ: ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಯಲ್ಲಿ ಹಲವು ಗುದ್ದಲಿ ಪೂಜೆ ನಡೆದವು. ಬಿಜೆಪಿ ಸರ್ಕಾರದಲ್ಲೂ ನಡೆಯುತ್ತಿವೆ. ಆದರೆ ಗ್ರಾಮಸ್ಥರು ಹಾಗೂ ಶಾಸಕರ ಬೆಂಬಲಿಗರ ನಡುವೆ ಗುದ್ದಲಿ ಪೂಜೆ ವಿಚಾರವಾಗಿ ವಾಕ್ ಸಮರವೇ ನಡೆದಿದೆ‌. ನೀವು ಮಾಡುತ್ತಿರುವುದು ಬೋಗಸ್ ಪೂಜೆ ಅಂತ ವಿರೋಧಿ ಬಣ ಪ್ರತಿಭಟನೆ ಮಾಡೊದರೆ, ಅತ್ತ ಶಾಸಕರು ಗುದ್ದಲಿ ಪೂಜೆ ನೆರವೇರಿಸಿ ಸ್ಥಳದಿಂದ ತೆರಳಿದ ಆ ಸ್ಟೋರಿನ ನೀವೇ ನೋಡಿ.
ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ಗುದ್ದಲಿ ಪೂಜೆ ಹಮ್ಮಿಕೊಂಡಿದ್ದರು. ಈ ಗ್ರಾಮ ಶಾಸಕರ ತವರು ಗ್ರಾಮ ಕೂಡ ಹೌದು. ರಸ್ತೆ ಅಗಲೀಕರಣದ ಅಭಿವೃದ್ದಿ ಕಾಮಗಾರಿಗೆ 10 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಇಂದು ಗುದ್ದಲಿ ಪೂಜೆಯನ್ನು ಹಮ್ಮಿಕೊಂಡಿದ್ರು. ಇನ್ನೇನು ಶಾಸಕರು ಗುದ್ದಲಿಪೂಜೆ ಮಾಡಬೇಕೆನ್ನುವಷ್ಟರಲ್ಲಿ ಊರಿನ ಹಲವು ಗ್ರಾಮಸ್ಥರು ಕಾಮಗಾರಿ ನಡೆಸಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ರು. ರಸ್ತೆ ಅಗಲೀಕರಣದಿಂದ ತಮ್ಮ ಮನೆಗಳು ಹೋಗಲಿದ್ದು ಮೊದ್ಲು ನಮಗೆ ಪರಿಹಾರ ಕೊಡಿಸಿ ಅಂತಾ ತರಾಟೆಗೆ ತೆಗೆದುಕೊಂಡ್ರು. ಸ್ಥಳಕ್ಕೆ ಬಂದ ಶಾಸಕ ರವೀಂದ್ರ ಶ್ರೀಕಂಠಯ್ಯ ಗ್ರಾಮಸ್ಥರನ್ನು ಮನವೊಲಿಸಲು ಶಾಸಕರು ಮುಂದಾದ್ರು ಕ್ಯಾರೆ ಅನ್ನಲಿಲ್ಲ‌. ಶಾಸಕರ ಕ್ರಮ ಖಂಡಿಸಿ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಮಧ್ಯೆ ಧರಣಿ ಕುಳಿತು ಪರಿಹಾರಕ್ಕಾಗಿ ಪ್ರತಿಭಟೆನೆ ನಡೆಸುದ್ರು.

ಬೈಟ್ : ರವಿ ಮಾಜಿ ಗ್ರಾ.‌ಪಂ.

ಒಂದುಕಡೆ ಗ್ರಾಮಸ್ಥರು ಧರಣಿ ಕುಳಿತು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸ್ತಿದ್ರೆ, ಇತ್ತ ಶಾಸಕರು ವಿರೋಧದ ನಡುವೆ ಗುದ್ದಲಿ ಪೂಜೆ ನಡೆಸಿದ್ರು. ಈ ವೇಳೆ ಶಾಸಕರ ಬೆಂಬಲಿಗರು ಬೇಕೆ ಬೇಕು ರಸ್ತೆ ಬೇಕು ಎಂದು ಕೂಗಿದ್ರೆ, ಮತ್ತೋಂದು ಗುಂಪು ಬೇಡ ಬೇಡ ರಸ್ತೆ ಬೇಡ ಎಂದು ಪ್ರತಿಭಟನೆಗೆ ಮುಂದಾದ್ರು. ಊರಿನವರ ಒತ್ತಾಯದ ಮೇರೆಗೆ ಈ ಗ್ರಾಮದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಮುಂದಾಗಿದ್ದೆ. ಸರ್ಕಾರದ ಜಾಗದಲ್ಲಿ ಮನೆ ಕಟ್ಟಿದ್ರೆ ಪರಿಹಾರ ಕೊಡಲು ಬರೋದಿಲ್ಲ‌. ಅವ್ರ ಜಾಗದಲ್ಲಿದ್ರೆ ಪರಿಹಾರ ಸಿಗುತ್ತೆ. ಯಾರಿಗೂ ಅನ್ಯಾಯವಾಗಲ್ಲ ಎಂದರು ಶಾಸಕರು.

ಬೈಟ್: ರವೀಂದ್ರ ಶ್ರೀಕಂಠಯ್ಯ, ಶಾಸಕ.

ಗ್ರಾಮದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯವರನ್ನು ಸಮಾಧಾನ ಪಡಿಸಿದ್ರು. ಗ್ರಾಮ ಪಂಚಾಯತಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದರು.

Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.