ETV Bharat / state

ಹಲ್ಲು ಮುರಿದ ಅಂತಾ ತಲೆ ತೆಗೆದ್ರು... ಮಹಜರಿಗೆ ಬಂದಾಗ ಇವ್ರನ್ನ ನೋಡೋಕೆ ಸೇರಿತ್ತು ಜನಸ್ತೋಮ!

ಚಿತ್ರ ನಟರನ್ನು ನೋಡಲು ಜನಸ್ತೋಮ ಸೇರಿರುವುದನ್ನು ಕೇಳಿದ್ದೀರಿ, ರಾಜಕಾರಣಿಗಳ ಕಾರ್ಯಕ್ರಮಕ್ಕೆ ಜನಸ್ತೋಮ ಬರುವುದನ್ನು ನಾವೆಲ್ಲ ಕೇಳಿದ್ದೀವಿ. ಆದರೆ ಕೊಲೆಗಾರರನ್ನು ನೋಡಲು ಜನ ಸಾಗರ ಸೇರೋದನ್ನು ನೀವು ಎಲ್ಲಾದ್ರೂ ಕೇಳಿದ್ದೀರಾ?

ಆರೋಪಿಗಳನ್ನು ನೋಡಲು ಜನಸಾಗರ
author img

By

Published : Oct 23, 2019, 10:47 PM IST

ಮಂಡ್ಯ: ಚಿತ್ರ ನಟರನ್ನು ನೋಡಲೋ, ರಾಜಕಾರಣಿಗಳ ಕಾರ್ಯಕ್ರಮಕ್ಕೋ ಅಪಾರ ಜನಸ್ತೋಮ ಬರುವುದನ್ನು ನಾವು ನೋಡಿದ್ದೇವೆ. ಆದರೆ ಕೊಲೆ ಆರೋಪಿಗಳನ್ನು ನೋಡಲು ಜನಸಾಗರ ಸೇರೋದನ್ನು ಎಲ್ಲಾದ್ರೂ ಕೇಳಿದ್ದೀರಾ? ಹೌದು, ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಅಕ್ಟೋಬರ್ 19ರಂದು ನವೀನ್​ ಎಂಬಾತನನ್ನು ಸಾರ್ವಜನಿಕವಾಗಿ ಅಟ್ಟಾಡಿಸಿ ರೌಡಿಗಳು ಬರ್ಬರವಾಗಿ ಕೊಲೆ ಮಾಡಿದ್ರು. ಈ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಕೆ.ಎಂ.ದೊಡ್ಡಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಇಂದು ಸ್ಥಳ ಮಹಜರು ಮಾಡಲು ಕರೆದುಕೊಂಡು ಬಂದಿದ್ರು.

ಆರೋಪಿಗಳನ್ನು ನೋಡಲು ಜನಸಾಗರ

ಸ್ಥಳಕ್ಕೆ ಆರೋಪಿಗಳನ್ನು ಪೊಲೀಸರು ಕರೆದುಕೊಂಡು ಬರೋ ವಿಚಾರ ತಿಳಿಯುತ್ತಿದ್ದಂತೆ ಕೆ.ಎಂ.ದೊಡ್ಡಿಯ ಪ್ರಮುಖ ವೃತ್ತದಲ್ಲಿ ಜನಸಾಗರವೇ ಸೇರಿತ್ತು. ಆರೋಪಿಗಳಾದ ಪ್ರವೀಣ್, ಎಂ.ಎನ್.ನಿರಂಜನ್, ಕೆ.ಪಿ.ಕಾರ್ತಿಕ್, ಜೆ.ಅನಂತಕುಮಾರ್ ಹಾಗೂ ಕೆ.ಪಿ.ಸಚಿನ್ ಗೌಡನನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಮಹಜರು ಮಾಡಲಾಯಿತು. ಈ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಹಲ್ಲು ಮುರಿದದ್ದಕ್ಕೆ ತಲೆ ತೆಗೆದರು:

ಕೊಲೆಯಾದ ನವೀನ್ ಹಾಗೂ ಪ್ರವೀಣ್ ಆಲಿಯಾಸ್ ಕಡ್ಡಿ ಜಗಳ ಮಾಡಿಕೊಂಡಿದ್ರಂತೆ. ಈ ಸಂದರ್ಭದಲ್ಲಿ ಕಡ್ಡಿಯ ಹಲ್ಲು ಮುರಿದು ಇಬ್ಬರೂ ಸಂಧಾನ ಮಾಡಿಕೊಂಡಿದ್ರಂತೆ. ಕೊಲೆಯಾದ ನವೀನ್ ಹಲ್ಲು ಮುರಿದುಕೊಂಡ ಕಡ್ಡಿಗೆ ಚಿಕಿತ್ಸೆ ಕೊಡಿಸಿ, ಹಲ್ಲನ್ನು ಕಟ್ಟಿಸಿಕೊಡಬೇಕಾಗಿತ್ತು. ಆದರೆ ಹಲ್ಲು ಕಟ್ಟಿಸಿಕೊಡದ ಕಾರಣ ತನ್ನ ಸ್ನೇಹಿತರ ಜೊತೆಗೂಡಿ ನವೀನ್ ತಲೆ ತೆಗೆದಿದ್ದಾರೆ ಅಂತಾ ವಿಚಾರಣೆಯಿಂದ ತಿಳಿದು ಬಂದಿದೆ.

Intro:ಮಂಡ್ಯ: ಚಿತ್ರ ನಟರನ್ನು ನೋಡಲು ಜನಸ್ತೋಮ ಕೇಳಿದ್ದೀರಿ, ರಾಜಕಾರಣಿಗಳ ಕಾರ್ಯಕ್ರಮಕ್ಕೆ ಜನಸ್ತೋಮ ಕೇಳಿದ್ದೀರಿ. ಆದರೆ ಕೊಲೆಗಾರರನ್ನು ನೋಡಲು ಜನ ಸಾಗರ ಸೇರೊದನ್ನು ನೀವು ಕೇಳಿದ್ದೀರಿ, ನೋಡಿದ್ದೀರಿ. ಅಚ್ಚರಿ ಪಡಬೇಡಿ. ಇಲ್ಲಿದೆ ನೋಡಿ.

ಮದ್ದೂರು ತಾಲ್ಲೂಕಿನ ಕೆ.ಎಂ. ದೊಡ್ಡಿಯಲ್ಲಿ ಅಕ್ಟೋಬರ್ 19ರಂದು ನವೀನ್ ನನ್ನು ಸಾರ್ವಜನಿಕವಾಗಿ ಅಟ್ಟಾಡಿಸಿ ರೌಡಿಗಳು ಬರ್ಬರವಾಗಿ ಕೊಲೆ ಮಾಡಿದ್ದರು. ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಕೆ.ಎಂ.ದೊಡ್ಡಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಇಂದು ಸ್ಥಳ ಮಹಾಜರು ಮಾಡಲು ಕರೆದುಕೊಂಡು ಹೋಗಿದ್ದರು.

ಸ್ಥಳಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗುವ ವಿಚಾರ ತಿಳಿಯುತ್ತಿದ್ದಂತೆ ಕೆ.ಎಂ.ದೊಡ್ಡಿಯ ಪ್ರಮುಖ ವೃತ್ತದಲ್ಲಿ ಜನ ಸಾಗರವೇ ಸೇರಿತ್ತು. ಆರೋಪಿಗಳಾದ ಪ್ರವೀಣ್, ಎಂ.ಎನ್. ನಿರಂಜನ್, ಕೆ.ಪಿ. ಕಾರ್ತಿಕ್, ಜೆ. ಅನಂತಕುಮಾರ್ ಹಾಗೂ ಕೆ.ಪಿ. ಸಚಿನ್ ಗೌಡನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಮಹಜರು ಮಾಡಲಾಯಿತು. ಈ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಹಲ್ಲು ಮುರಿದದ್ದಕ್ಕೆ ತಲೆ ತೆಗೆದರು: ಕೊಲೆಯಾದ ನವೀನ್ ಹಾಗೂ ಪ್ರವೀಣ್ ಆಲಿಯಾಸ್ ಕಡ್ಡಿ ಜಗಳ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಕಡ್ಡಿಯ ಹಲ್ಲು ಮುರಿದು ಇಬ್ಬರೂ ಸಂಧಾನ ಮಾಡಿಕೊಂಡಿದ್ದರು.

ಕೊಲೆಯಾದ ನವೀನ್ ಹಲ್ಲು ಮುರಿದುಕೊಂಡ ಕಡ್ಡಿಗೆ ಚಿಕಿತ್ಸೆ ಕೊಡಿಸಿ, ಹಲ್ಲನ್ನು ಕಟ್ಟಿಸಿಕೊಡಬೇಕಾಗಿತ್ತು. ಆದರೆ ಹಲ್ಲು ಕಟ್ಟಿಸಿಕೊಡದ ಹಿನ್ನೆಲೆಯಲ್ಲಿ ತನ್ನ ಸ್ನೇಹಿತರ ಜೊತೆಗೂಡಿ ನವೀನ್ ತಲೆ ತೆಗೆದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.