ETV Bharat / state

ಮೀನಿನ ಬಲೆಗೆ ಸಿಲುಕಿದ ಹೆಬ್ಬಾವು... ಒಂದು ಗಂಟೆ ಕಾರ್ಯಾಚರಣೆ ಬಳಿಕ ರಕ್ಷಣೆ - ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಕೆರೆ

ಮೀನು ಹಿಡಿಯಲು ಹಾಕಲಾಗಿದ್ದ ಬಲೆಗೆ ಸಿಲುಕಿದ್ದ, ಹೆಬ್ಬಾವನ್ನು ರಕ್ಷಣೆ ಮಾಡಲಾಗಿದೆ.

Protection of the python
ಮೀನಿನ ಬಲೆಗೆ ಸಿಲುಕಿದ ಹೆಬ್ಬಾವಿನ ರಕ್ಷಣೆ
author img

By

Published : Jan 19, 2020, 1:20 PM IST

ಮಂಡ್ಯ: ಮೀನು ಹಿಡಿಯಲು ಹಾಕಲಾಗಿದ್ದ ಬಲೆಗೆ ಸಿಲುಕಿದ್ದ, ಹೆಬ್ಬಾವನ್ನು ರಕ್ಷಣೆ ಮಾಡಲಾಗಿದೆ. ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದ ಕೆರೆಯಲ್ಲಿ, ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ರಕ್ಷಿಸಲಾಗಿದೆ.

ಮೀನಿನ ಬಲೆಗೆ ಸಿಲುಕಿದ ಹೆಬ್ಬಾವಿನ ರಕ್ಷಣೆ

ಉರಗ ಪ್ರೇಮಿ ಮ.ನಾ. ಪ್ರಸನ್ನ ಕುಮಾರ್ ಅವರು, ಸುಮಾರು 12 ಕೆ.ಜಿ ತೂಕದ 10 ಅಡಿಯ ಹೆಬ್ಬಾವನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಕಳೆದ ರಾತ್ರಿ ಮೀನುಗಾರರು ಮೀನು ಹಿಡಿಯಲು ಕೆರೆಗೆ ಬಲೆಯನ್ನು ಹಾಕಿದ್ದರು. ಬಲೆಗೆ ಹೆಬ್ಬಾವು ಸಿಲುಕಿದ್ದನ್ನು ನೋಡಿದ ಮೀನುಗಾರರು, ಉರಗ ಪ್ರೇಮಿ ಪ್ರಸನ್ನ ಕುಮಾರ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದರು‌. ಬಳಿಕ ಸ್ಥಳಕ್ಕೆ ಬಂದ ಪ್ರಸನ್ನ ಕುಮಾರ್, ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಹೆಬ್ಬಾವನ್ನು ಹರಿಗೋಲು ಸಹಾಯದಿಂದ ರಕ್ಷಣೆ ಮಾಡಿದ್ದಾರೆ‌.

Intro:ಮಂಡ್ಯ: ಮೀನಿಗೆ ಹಾಕಿದ್ದ ಬಲೆಗೆ ಹೆಬ್ಬಾವು ಸಿಲುಕಿ, ಸತತ ಒಂದು ಗಂಟೆ ಕಾರ್ಯಾಚರಣೆ ಬಳಿಕ ಹಾವನ್ನು ರಕ್ಷಣೆ ಮಾಡಿದ ಘಟನೆ ಮದ್ದೂರು ತಾಲ್ಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದ ಕೆರೆಯಲ್ಲಿ ನಡೆದಿದೆ.
ಉರಗಪ್ರೇಮಿ ಮ.ನಾ. ಪ್ರಸನ್ನ ಕುಮಾರ್ ಹೆಬ್ಬಾವು ರಕ್ಷಣೆ ಮಾಡಿದ್ದಾರೆ.‌ ಸುಮಾರು 12 ಕೆ.ಜಿ ತೂಕದ 10 ಅಡಿಯ ಹೆಬ್ಬಾವು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಡಲಾಯಿತು.
ಕಳೆದ ರಾತ್ರಿ ಮೀನುಗಾರರು ಮೀನು ಹಿಡಿಯಲು ಕೆರೆಗೆ ಬಲೆಯನ್ನು ಬಿಟ್ಟಿದ್ದರು. ಬಲೆಗೆ ಹೆಬ್ಬಾವು ಸಿಲುಕಿದನ್ನು ನೋಡಿದ ಮೀನುಗಾರರು, ಉರಗ ಪ್ರೇಮಿ ಪ್ರಸನ್ನ ಕುಮಾರ್‌ಗೆ ಕೆರೆ ಮಾಡಿ ವಿಚಾರ ತಿಳಿಸಿದ್ದರು‌.
ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಹೆಬ್ಬಾವನ್ನು ಹರಿಗೋಲು ಸಹಾಯದಿಂದ ಬಲೆಗೆ ಬಿದ್ದ ಸ್ಥಳಕ್ಕೆ ತೆರಳಿ ಹೆಬ್ಬಾವು ರಕ್ಷಣೆ ಮಾಡಲಾಯಿತು‌.

ಬೈಟ್: ಮ.ನ. ಪ್ರಸನ್ನ ಕುಮಾರ್, ಉರಗ ಪ್ರೇಮಿBody:ಯತೀಶ್ ಬಾಬು, ಮಂಡ್ಯConclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.