ಮಂಡ್ಯ: ಇಲ್ಲಿನ ಕಾರಾಗೃಹದಲ್ಲಿ ಕೈದಿಗಳು ಸಕತ್ ಸ್ಟೆಪ್ ಹಾಕುವ ಮೂಲಕ ಎಲ್ಲರೂ ಒಟ್ಟಾಗಿ ಸಂಭ್ರಮಿಸಿದ್ದಾರೆ. ಅಪರಾಧಿಗಳಾಗಿ ಕಾರಾಗೃಹದ ನಾಲ್ಕು ಗೋಡೆಗಳ ಮಧ್ಯೆಯೇ ಇದ್ದವರಿಗೆ ಮಂಡ್ಯ ಜಾನಪದ ವತಿಯಿಂದ ಭರ್ಜರಿ ಮನರಂಜನೆ ಸಿಕ್ಕಿದೆ.
'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ.. ಮತದಲ್ಲಿ ಮೇಲ್ಯಾವುದೋ' ಹಾಡಿಗೆ ಕೈದಿಗಳು ಕುಣಿದು ಕುಪ್ಪಳಿಸಿದ್ದಾರೆ. ಜೈಲು ಹಕ್ಕಿಗಳ ಮನರಂಜನೆಗಾಗಿ ಜಾನಪದ ಗ್ರೂಪ್‌ನಿಂದ ಸುಗಮ ಸಂಗೀತ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೈದಿಗಳು ಹಾಡಿ ಕುಣಿದು ಸಂತೋಷ ಪಟ್ಟಿದ್ದಾರೆ.
ಅಲ್ಲದೇ ಜೈಲುಹಕ್ಕಿಗಳ ಜೊತೆ ಕಾರಾಗೃಹದ ಅಧಿಕಾರಿಗಳು ಸಹ ಒಂದೆರೆಡು ಹೆಜ್ಜೆ ಹಾಕಿ ಖುಷಿಪಟ್ಟರು.
ಇದನ್ನೂ ಓದಿ:ಕೇಂದ್ರ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕಾಗಿ 2.31 ಲಕ್ಷ ಕೋಟಿ ರೂ. ಮೀಸಲು : ಸಚಿವೆ ಶೋಭಾ ಕರಂದ್ಲಾಜೆ