ಶಿರಸಿ: ರಾಜಕೀಯದಲ್ಲಿ ನಿರೀಕ್ಷೆ, ಬಹುಕಾಲದ ಯೋಜನೆ ಇರುತ್ತೆ. ಪ್ರಜಾಕೀಯಾದಲ್ಲಿ ಇವೆಲ್ಲ ಇರಲ್ಲ. ಪ್ರಜಾಕೀಯ ಬೂದಿ ಮುಚ್ಚಿದ ಕೆಂಡ ಇದ್ದಂತೆ. ಧಗ ಧಗ ಎಂದು ಉರಿಯಲ್ಲ ಅಂತಾ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಹೇಳಿದ್ರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯ ರಾಜಕೀಯ ಅಷ್ಟೇ ಎಲ್ಲ ಕಡೆ ಕಾಣ್ತಿದೆ. ಮತ್ತೆ ನಾನೂ ಅದರ ಬಗ್ಗೆ ಮಾತಾಡಲ್ಲ. ಇಲ್ಲಿ ಜನ ಗೆಲ್ಲಲಿ ಎಂದು ಸಿನಿಮಾ ಸ್ಟೈಲಲ್ಲಿ ಉತ್ತರಿಸಿದರು.
ರಾಜಕೀಯ ನಿರೀಕ್ಷೆ ಪಡುವಂತಹದ್ದಲ್ಲ. ನಿರೀಕ್ಷೆ ಆರೋಗ್ಯ ಹಾಳು ಮಾಡುತ್ತದೆ. ಇಲ್ಲಿ ಸೋಲು ಗೆಲುವಿನ ಮಾತೇ ಇಲ್ಲ. ಇದು ಜನರ ಧ್ವನಿ. ಯಾರು ಬೇಕಾದರೂ ಸೇರಿಕೊಳ್ಳಬಹುದು. ಜನರ ಧ್ವನಿಗೆ ನಿರಂತರ ಐದು ವರ್ಷ ಬೆಲೆ ಇರಬೇಕು ಎಂದು ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪಿಸಲಾಗಿದೆ ಎಂದರು.