ETV Bharat / state

ಹಣದ ವಿಚಾರಕ್ಕೆ ಸ್ನೇಹಿತನನ್ನೇ ಕೊಂದ ಕಿರಾತಕರು: ಆರೋಪಿಗಳನ್ನು ಬಂಧಿಸಿದ ಪೊಲೀಸರು - ಶ್ರೀರಂಗಪಟ್ಟಣ ಕರೀಘಟ್ಟ-ಗಂಜಾಂ

ಕಲ್ಲು ಎತ್ತಿ ಹಾಕಿ ವ್ಯಕ್ತಿವೋರ್ವನನ್ನು ಕೊಲೆಗೈದು ಬಳಿಕ ಪರಾರಿಯಾಗಿದ್ದ ಕಿರಾತಕರನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪುರಸಭೆ ವ್ಯಾಪ್ತಿಯ ಗಂಜಾಂ ಪೇಟೆಬೀದಿ ರಾಮಮಂದಿರ ಬಳಿಯ ನಿವಾಸಿ ಅನಂತ (45)ನನ್ನು ಕಿರಾತಕರು ಹತ್ಯೆಗೈದಿದ್ದರು.

shrirangapattana
ಸ್ನೇಹಿತನನ್ನೇ ಹತ್ಯೆಗೈದ ಕಿರಾತಕರು
author img

By

Published : Jul 11, 2021, 9:04 AM IST

ಮಂಡ್ಯ: ಜಮೀನು ರಸ್ತೆಯಲ್ಲಿ ಕಲ್ಲು ಎತ್ತಿ ಹಾಕಿ ವ್ಯಕ್ತಿವೋರ್ವನನ್ನು ಕೊಲೆಗೈದಿದ್ದ ಆರೋಪಿಗಳನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಕರೀಘಟ್ಟ-ಗಂಜಾಂನ ಕಾವೇರಿ ಸೇತುವೆ ಸಮೀಪದ ಜಮೀನು ರಸ್ತೆಯಲ್ಲಿ ಘಟನೆ ಸಂಭವಿಸಿತ್ತು.

ಪುರಸಭೆ ವ್ಯಾಪ್ತಿಯ ಗಂಜಾಂ ಪೇಟೆಬೀದಿ ರಾಮಮಂದಿರ ಬಳಿಯ ನಿವಾಸಿ ಅನಂತ (45)ನನ್ನು ಕಿರಾತಕರು ಹತ್ಯೆಗೈದಿದ್ದರು. ಕೊಲೆಯಾದ ಅನಂತ್​ನ ಸ್ನೇಹಿತರಾದ ಗಂಜಾಂನ ದೊಡ್ಡ ಬೆಸ್ತಗೇರಿಯ ನಿವಾಸಿ ಬಜಣ್ಣ ಹಾಗೂ ಅಂಬೇಡ್ಕರ್ ಬೀದಿಯ ಪಾಪಣ್ಣ ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು.

shrirangapattana
ಸ್ನೇಹಿತನನ್ನೇ ಹತ್ಯೆಗೈದ ಕಿರಾತಕರು

ಹಣದ ವಿಚಾರಕ್ಕೆ ಕೊಲೆ: ಮೃತನ ಬಳಿ ಆರೋಪಿಗಳು 5ಸಾವಿರ ರೂ. ಸಾಲ ಪಡೆದಿದ್ದರು. ಹಣ ಹಿಂದಿರುಗಿಸುವ ವಿಚಾರಕ್ಕೆ ಇವರ ನಡುವೆ ಜಗಳ ನಡೆದಿದೆ. ಕೊನೆಗೆ ನಿರ್ಜನ ಪ್ರದೇಶಕ್ಕೆ ಪ್ಯಾಸೆಂಜರ್ ಆಟೋದಲ್ಲಿ ಅನಂತ್​ನನ್ನು ಕರೆದೊಯ್ದು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವುದಾಗಿ ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಡಿವೈಎಸ್ಪಿ ಸಂದೇಶ್ ಕುಮಾರ್ ನಿರ್ದೇಶನದಂತೆ ಗ್ರಾಮಾಂತರ ಠಾಣೆ ಇನ್​ಸ್ಪೆಕ್ಟರ್ ವಿವೇಕಾನಂದ ಹಾಗೂ ಸಿಬ್ಬಂದಿ ಕೇವಲ 2 ದಿನಗಳಲ್ಲಿ ಕ್ಷಿಪ್ರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಎಸ್ಪಿ ಡಾ.ಅಶ್ವಿನಿ ಅವರು ಪೊಲೀಸರನ್ನು ಅಭಿನಂದಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.