ಮಂಡ್ಯ: ಬೆಳಗ್ಗೆ ಎದ್ದ ತಕ್ಷಣ ಮದ್ಯದ ಅಂಗಡಿಗಳ ಕಡೆ ಮುಖ ಮಾಡಿದ್ದ ಮದಿರೆ ಪ್ರಿಯರು ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತು ಮಾದರಿಯಾಗಿದ್ದರು, ಆದರೆ ಮದ್ಯದ ಅಂಗಡಿ ಓಪನ್ ಆಗಿದ್ದೇ ತಡ ಅಂತರವನ್ನೂ ಮರೆತು ಎಣ್ಣೆ ಖರೀದಿಗೆ ಮುಗಿ ಬಿದ್ದರು.
ಹೌದು, ಮಂಡ್ಯ ಸೇರಿದಂತೆ ಎಲ್ಲಾ ತಾಲ್ಲೂಕು ಕೇಂದ್ರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮುಂಜಾನೆ ಸಾಮಾಜಿಕ ಅಂತರ ಕಾಯ್ದುಕೊಂಡು, ಮುಖಕ್ಕೆ ಮಾಸ್ಕ್ ಧರಿಸಿದ್ದ ಮದ್ಯ ಪ್ರಿಯರು ಬಾರ್ ಓಪನ್ ಆಗುತ್ತಿದ್ದಂತೆ ಅಂತರವನ್ನೂ ಮರೆತು ಮುಗಿ ಬಿದ್ದು ಮದ್ಯ ಖರೀದಿ ಮಾಡುತ್ತಿದ್ದಾರೆ.
ಅಲ್ಲಲ್ಲಿ ಪೊಲೀಸರು ಎಚ್ಚರಿಕೆ ನೀಡಿದರೂ ಲೆಕ್ಕಿಸದೇ, ಸಾಮಾಜಿಕ ಅಂತರವನ್ನೂ ಮರೆತು ಮುಗಿ ಬೀಳುತ್ತಿದ್ದಾರೆ. ಬಾರ್ ಮುಂದೆ ಮಾತ್ರ ಅಂತರಕ್ಕಾಗಿ ಹಾಕಿರುವ ಬಾಕ್ಸ್‌ಗಳಲ್ಲಿ ನಿಲ್ಲುತ್ತಿದ್ದರೆ, ಮಿಕ್ಕೆಡೆ ಒಬ್ಬರ ಮೇಲೊಬ್ಬರು ಬಿದ್ದು ಖರೀದಿ ಮಾಡುತ್ತಿದ್ದಾರೆ.