ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯ ಐದನೇ ದಿನವಾದ ಇಂದು ಪಾಂಡವಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದೆ. ಕಾವೇರಿ ಮಾತೆಗೆ ಪೂಜಿಸಲ್ಲಿಸಿ ರಥಯಾತ್ರೆ ಆರಂಭಗೊಂಡಿತು. ಕುಮಾರಸ್ವಾಮಿಯವರಿಗೆ ಸೇಬು ಹಣ್ಣಿನ ಹಾರ, ಭತ್ತದ ಹಾರದ ಮೂಲಕ ಪಾಂಡುಪುರ ಶಾಸಕ ಸಿ ಎಸ್ ಪುಟ್ಟರಾಜು ಅದ್ಧೂರಿಯಾಗಿ ಸ್ವಾಗತಿಸಿದರು.
ಹೆಲಿಕಾಪ್ಟರ್ ಮೂಲಕ ಹೂ ಮಳೆ: ಹೆಚ್ಡಿಕೆ ರಥವೇರುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಹರ್ಷದಿಂದ ಘೋಷಣೆ ಕೂಗಿದರು, ಇದೇ ಸಂದರ್ಭದಲ್ಲಿ ಹೆಲಿಕಾಪ್ಟರ್ ಮುಖಾಂತರ ಯಾತ್ರೆಯಲ್ಲಿ ಸೇರಿದ ಜನಸ್ತೋಮಕ್ಕೆ ಹೂ ಮಳೆ ಸುರಿಸಲಾಯಿತು.
ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ನನ್ನ ಸ್ವಾರ್ಥಕ್ಕಾಗಿ ಅಲ್ಲ, ಸಿಎಂ ಆಗುವುದಕ್ಕಾಗಿ ಅಲ್ಲ, ಜನರ ಹಿತಕ್ಕಾಗಿ ಎಂದು ಹೇಳಿದರು. ಕಳೆದ ಬಾರಿ ಚುನಾವಣೆಯಲ್ಲಿ ಮಂಡ್ಯದ ಜನತೆ 7 ಕ್ಷ್ರೇತ್ರದಲ್ಲಿ ಜೆಡಿಎಸ್ ಗೆಲ್ಲುವ ಹಾಗೆ ಮಾಡಿದ್ದರು. ಈ ಬಾರಿ ಬಹುಮತದಲ್ಲಿ ಗೆಲ್ಲುವ ಹಾಗೆ ಜನರು ಆರ್ಶಿವದಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಅಮೃತ ಮಹೋತ್ಸವ, ಚಂದ್ರು ಸಾವು.. 2022ರಲ್ಲಿ ದಾವಣಗೆರೆಯಲ್ಲಿ ನಡೆದ ಘಟನಾವಳಿಗಳ ಸುತ್ತ..