ಮಂಡ್ಯ : ಕೊರೊನಾ ಸೋಂಕಿತರು ಜಿಲ್ಲೆಯ ಎರಡು ತಾಲೂಕು ಕೇಂದ್ರದಲ್ಲಿ ಸಂಚಾರ ಮಾಡಿರುವ ಹಿನ್ನೆಲೆಯಲ್ಲಿ ಅಕ್ಕಪಕ್ಕದ ತಾಲೂಕುಗಳಲ್ಲೂ ಬಿಗಿಯಾದ ಲಾಕ್‌ಡೌನ್‌ಗೆ ತಾಲೂಕು ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮಳವಳ್ಳಿ ಮತ್ತು ನಾಗಮಂಗಲದಲ್ಲಿ ಕೊರೊನಾ ಸೋಂಕಿತರ ಸಂಚಾರ ಹಿನ್ನೆಲೆಯಲ್ಲಿ ಎರಡು ತಾಲೂಕಿನ ಅಕ್ಕಪಕ್ಕದ ತಾಲೂಕುಗಳಾದ ಕೆಆರ್‌ಪೇಟೆ ಹಾಗೂ ಮದ್ದೂರಿನಲ್ಲಿ ಕಟ್ಟು ನಿಟ್ಟಿನ ಲಾಕ್‌ಡೌನ್‌ಗೆ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ. ಬೇಕರಿ, ಸಲೂನ್ ಮತ್ತು ಮೀನು-ಮಾಂಸದ ಅಂಗಡಿಗೆ ಜಿಲ್ಲಾಡಳಿತ ಕೊಟ್ಟಿದ್ದ ಅನುಮತಿ ರದ್ದು ಪಡಿಸಿದೆ. ಎರಡು ತಾಲೂಕಿನ ಜನರು ಎಚ್ಚರಿಕೆಯಿಂದರಲು ಸೂಚಿಸಲಾಗಿದೆ.