ಮಂಡ್ಯ: ನೆಲ ಬಾಡಿಗೆ ಪಾವತಿಸದೆ ಬಾಕಿ ಉಳಿಸಿಕೊಂಡ ವಿಚಾರದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಮೊದಲ ಕಂತಿನಲ್ಲಿ ಡಿಡಿ ಮೂಲಕ ಕೆನರಾ ಬ್ಯಾಂಕ್ ಖಾತೆಗೆ 18.77 ಲಕ್ಷ ರೂ. ಪಾವತಿ ಮಾಡಿದ್ದಾರೆ. ಅವರ ಒಡೆತನದ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಕಂಪನಿಯು ಡಿಡಿ ಜೊತೆಗೆ ವಿಸ್ತೃತ ಪತ್ರ ಬರೆದಿದ್ದು, ಉಳಿದ ಬಾಕಿಯನ್ನು 2 ಕಂತುಗಳಲ್ಲಿ ಪಾವತಿಸುವ ಭರವಸೆ ನೀಡಿದೆ.
2018ರಿಂದಲೂ ಬಾಡಿಗೆ, ಕಂದಾಯ ಪಾವತಿಸದ ಬಗ್ಗೆ ಕಂಪನಿ ಮಾಲೀಕಳಾದ ನಿಶಾ ಯೋಗೇಶ್ವರ್ ವಿರುದ್ಧ ಮದ್ದೂರು ಟಿಎಪಿಸಿಎಂಎಸ್ (TAPCMS) ಕಾನೂನು ಹೋರಾಟ ಮುಂದಾಗಿತ್ತು. ನಿಶಾರ ಕಂಪನಿಯು 2017ರಲ್ಲಿ ಮದ್ದೂರು ಟಿಎಪಿಸಿಎಂಎಸ್ಗೆ ಗೋದಾಮು ಬಾಡಿಗೆಗೆ ಪಡೆದಿತ್ತು.
ಇದನ್ನೂ ಓದಿ: ನೆಲ ಬಾಡಿಗೆ ಮತ್ತು ಕಂದಾಯ ಪಾವತಿಸದ ಸಿ ಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ
ಆದರೆ ಒಪ್ಪಂದದಂತೆ ಏಪ್ರಿಲ್ 2018ರಿಂದಲೂ ಬಾಡಿಗೆ, ಕಂದಾಯ ಪಾವತಿಸದೆ 42.47 ಲಕ್ಷ ಗೋದಾಮು ಬಾಡಿಗೆ, ಖಾಲಿ ಜಾಗದ ನೆಲ ಬಾಡಿಗೆ 1.09 ಲಕ್ಷ ರೂ. ಬಾಕಿ ಹಾಗೂ ಪುರಸಭೆಯ ಕಂದಾಯ 4.78 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಅ.1ರಂದು ನಡೆದ ಟಿಎಪಿಸಿಎಂಎಸ್ ಆಡಳಿತ ಮಂಡಳಿ ಸಭೆಯಲ್ಲಿ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿತ್ತು.
ಇದನ್ನೂ ಓದಿ: ಟಿಕೆಟ್ ಕೈ ತಪ್ಪಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಶಿವಕುಮಾರ್ ಉದಾಸಿ