ಮಂಡ್ಯ : ಜಿಲ್ಲೆಯಲ್ಲಿ ದಿನೆ ದಿನೇ ಹೆಣ್ಣು ಮಕ್ಕಳ ಮೇಲೆ ಶೋಷಣೆ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅವುಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಮುಂದಾಗಿದ್ದು, ನಿರ್ಭಯಾ ಹೆಸರಲ್ಲಿ ಹೊಸ ಪಡೆಯೊಂದನ್ನು ರಚಿಸಿದೆ.
ಜಿಲ್ಲೆಯಲ್ಲಿರುವ ಪ್ರತಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸರನ್ನು ದಿನದ 24 ಗಂಟೆ ಗಸ್ತಿಗೆ ನಿಯೋಜಿಸಿಲು ಸಿದ್ದತೆ ಮಾಡಿಕೊಂಡಿದೆ. ಅಲ್ಲದೇ ಗಸ್ತಿಗಾಗಿ 32 ಹೊಸ ಬೈಕ್ ಖರೀದಿಸಿದ್ದು, ಶೀಘ್ರದಲ್ಲೇ ನಿರ್ಭಯಾ ಪಡೆ ಕಾರ್ಯಾಚರಣೆ ಆರಂಭಿಸಲಿದೆ. ಈ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸ್ ಇಲಾಖೆ ಮತ್ತಷ್ಟು ಜನಸ್ನೇಹಿ ಆಗಲಿ ಎಂಬ ಕಾರಣಕ್ಕೆ ನಿರ್ಭಯಾ ಪಡೆಯ ಹೊಸ ಬೈಕ್‌ಗಳು ಜಿಲ್ಲೆಗೆ ಬಂದಿದ್ದು, ಶೀಘ್ರವೇ ಅವುಗಳು ಕಾರ್ಯಾಚರಣೆಗೆ ಇಳಿಯಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಕಡಿವಾಣ ಮತ್ತು ಹೆಣ್ಣು ಮಕ್ಕಳ ರಕ್ಷಣೆಗಾಗಿ ಪೊಲೀಸ್ ಇಲಾಖೆ ನಿರ್ಭಯ ಪಡೆ ರಚನೆಗೆ ಮಹಿಳೆಯರು ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ನಿರ್ಭಯ ಟೀಂ ಕಾರ್ಯಾಚರಣೆಯಿಂದ ಜಿಲ್ಲೆಯಲ್ಲಿ ನಿರ್ಭೀತಿಯಿಂದ ಓಡಾಡಲು ಸಹಾಯವಾಗುತ್ತದೆ. ಹೀಗಾಗಿ ಶೀಘ್ರವೇ ಜಿಲ್ಲೆಯಲ್ಲಿ ನಿರ್ಭಯಾ ಪಡೆ ಕಾರ್ಯಾಚರಣೆ ಆರಂಭಿಸಲಿ ಎಂದು ಪೊಲೀಸರ ಈ ವಿನೂತನ ಕಾರ್ಯಾಚರಣೆಯನ್ನು ಪ್ರಶಂಶಿಸಿದ್ದಾರೆ.