ETV Bharat / state

ನಿಖಿಲ್​ ಗಿಫ್ಟ್​  ಆಗಿ ಕೊಟ್ಟ ಸ್ಯಾನಿಟೈಸಿಂಗ್​ ಟನಲ್​ ಬಗ್ಗೆ ವೈದ್ಯರ ಕಳವಳ... ಕಾರಣ?

ರೈತರು ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಕೊರೊನಾ ಸೋಂಕು ತಗುಲಬಾರದೆಂಬ ಕಾರಣಕ್ಕೆ ಜೆಡಿಎಸ್​ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಸ್ಯಾನಿಟೈಸಿಂಗ್​ ಟನಲ್​ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಆದರೆ, ಇದೊರಳಗೆ ಬಳಸಲಾಗುತ್ತಿರುವ ಹೈಪೋ ಕ್ಲೋರೈಡ್​ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಔಷಧಿ ಸಿಂಪಡಣೆ ಟನಲ್ ಗಿಫ್ಟ್ ನೀಡಿದ ನಿಖಿಲ್
ಔಷಧಿ ಸಿಂಪಡಣೆ ಟನಲ್ ಗಿಫ್ಟ್ ನೀಡಿದ ನಿಖಿಲ್
author img

By

Published : Apr 7, 2020, 3:00 PM IST

ಮಂಡ್ಯ: ರೈತರು ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಕೊರೊನಾ ಸೋಂಕು ಹರಡದಿರಲಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಸ್ಯಾನಿಟೈಸರ್ ಟನಲ್ ನಿರ್ಮಾಣ ಮಾಡಿಕೊಟ್ಟಿದ್ದಾರೆ.

ರೈತರು ಹಾಗೂ ಜನರ ಅನುಕೂಲಕ್ಕಾಗಿ ಮಾರುಕಟ್ಟೆಯನ್ನು ನಗರದ ಸರ್​ಎಂವಿ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾದೆ, ಆದರೂ ಜನ ವಸ್ತುಗಳನ್ನು ಖರೀದಿ ಮಾಡಲು ಮುಗಿ ಬೀಳುತ್ತಿದ್ದಾರೆ. ಇದನ್ನು ಗಮನಿಸಿದ ಜೆಡಿಎಸ್ ನಾಯಕರು ಸೋಡಿಯಂ ಹೈಪೋಕ್ಲೋರೈಡ್ ಟನಲ್ ನಿರ್ಮಾಣ ಮಾಡಿದ್ದರು, ಆದರೆ ಈ ಟನಲ್​ನಲ್ಲಿ ಕೂಡ ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ಇಲ್ಲ ಎಂಬ ಆರೋಪ ಕೇಳಿ ಬಂದಿತ್ತು.

ಇದನ್ನು ಮನಗಂಡ ನಿಖಿಲ್ ಕುಮಾರಸ್ವಾಮಿ ಸ್ಯಾನಿಟೈಸರ್ ಟನಲ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಈ ಟನಲ್​ ನಿರ್ಮಾಣದಿಂದಾಗಿ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ, ಆದರೆ ವೈದ್ಯರು ಮಾತ್ರ ಟನಲ್​ನಲ್ಲಿ ಸಿಂಪಡಣೆ ಮಾಡುತ್ತಿರುವ ಔಷಧದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸ್ಯಾನಿಟೈಸರ್ ಬಿಟ್ಟು ಸೋಡಿಯಂ ಹೈಪೋಕ್ಲೋರೈಡ್ ಸಿಂಪಡಣೆ ಮಾಡಿದರೆ ಅದರಿಂದ ಚರ್ಮ ರೋಗಗಳು ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.