ETV Bharat / state

ಮಂಡ್ಯದಲ್ಲಿ ಮುಂದಿನ 5 ದಿನ ಸಂಪೂರ್ಣ ಲಾಕ್‌ಡೌನ್​​ ವಿಸ್ತರಣೆ - ಮಂಡ್ಯದಲ್ಲಿ ಮುಂದಿನ 5 ದಿನ ಸಂಪೂರ್ಣ ಲಾಕ್ ಡೌನ್

ಜೂನ್​ 6, 9, 11ನೇ ತಾರೀಖಿನಂದು ಅಗತ್ಯವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 11 ವರಗೆ ಅವಕಾಶ ನೀಡಲಾಗಿದೆ. ಈ ಮೊದಲು ಬೆಳಗ್ಗೆ 6 ರಿಂದ 10 ರ ವರೆಗೆ ಅವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ಹೆಚ್ಚು ಜನಜಂಗುಳಿ ಉಂಟಾಗುತ್ತಿತ್ತು.

Next 5 day full lockdown extension in Mandya
ಜಿಲ್ಲಾಧಿಕಾರಿ ಅಶ್ವಥಿ
author img

By

Published : Jun 6, 2021, 9:43 AM IST

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್ ಡೌನ್‌ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಅಶ್ವಥಿ ಆದೇಶ ಹೊರಡಿಸಿದ್ದಾರೆ.

ನಾಳೆಯಿಂದ ಐದು ದಿನ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿ ಇರಲಿದ್ದು, ಇಂದು 11 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.

ಜಿಲ್ಲಾಧಿಕಾರಿ ಅಶ್ವಥಿ ಆದೇಶ

ಜೂನ್ 7 ರಿಂದ 13ರ ವರಗೆ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡುವ ಮೂಲಕ ಈ ದಿನಗಳಲ್ಲಿ ಹಣ್ಣು, ತರಕಾರಿ, ದಿನಸಿ, ಮಾಂಸ, ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಬ್ಯಾಂಕ್ ಗಳು, ಅಂಚೆ ಕಚೇರಿ ಎಲ್‌ಐಸಿ ಕಚೇರಿಗಳೂ ಬಂದ್ ಮಾಡುವಂತೆ ಆದೇಶ ಹೊರಡಿಸಿದರಲ್ಲದೇ ಮೆಡಿಕಲ್​​, ಹಾಲಿನ ಬೂತ್‌ಗಳು, ಎಟಿಎಂ ಹಾಗೂ ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಕೆಲಸ ನಿರ್ವಹಣೆ ಮಾಡಲಿವೆ.

ಕಳೆದೆರಡು ವಾರದಿಂದ ಸಂಪೂರ್ಣ ಲಾಕ್ ಡೌನ್ ಮೊರೆಹೋಗಿರುವ ಜಿಲ್ಲಾಡಳಿತ ಮತ್ತಷ್ಟು ಕಠಿಣ ಕ್ರಮ ಜಾರಿ ಮಾಡೋ ಮೂಲಕ ಕೊರೊನಾ ಕಂಟ್ರೋಲ್‌ಗೆ ಮುಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.