ETV Bharat / state

ಮಂಡ್ಯದಲ್ಲಿ ಮಧ್ಯರಾತ್ರಿ ಭೀಕರ ಘಟನೆ: ಒಂದೇ ಕುಟುಂಬದ ನಾಲ್ವರು ಮಕ್ಕಳು ಸೇರಿ ಐವರ ಕೊಚ್ಚಿ ಕೊಲೆ - murder of five members of the same family in mandya

ಶನಿವಾರ ಮಧ್ಯರಾತ್ರಿ ಸಕ್ಕರೆನಾಡು ಮಂಡ್ಯ ಬೆಚ್ಚಿ ಬಿದ್ದಿದೆ. ಒಂದೇ ಕುಟುಂಬದ ನಾಲ್ವರು ಮಕ್ಕಳು ಸೇರಿ ಐವರನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಘಟನೆ ಕೆಆರ್​ಎ​ಸ್​ ಸಮೀಪದ ಬಜಾರ್ ಲೈನ್​ನಲ್ಲಿ ಜರುಗಿದೆ.

murder-of-five-members-of-the-same-family-in-mandya
ಒಂದೇ ಕುಟುಂಬದ ಐವರನ್ನು ಕೊಚ್ಚಿ ಕೊಲೆ
author img

By

Published : Feb 6, 2022, 11:18 AM IST

Updated : Feb 7, 2022, 8:18 PM IST

ಮಂಡ್ಯ: ಒಂದೇ ಕುಟುಂಬದ ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆ.ಆರ್.ಎಸ್ ನಲ್ಲಿ ನಡೆದಿದೆ.

ಕೆ.ಆರ್.ಎಸ್ ಗ್ರಾಮದ ಬಜಾರ್ ಲೈನ್ ನಿವಾಸಿ ಗಂಗರಾಮ್ ಪತ್ನಿ ಲಕ್ಷ್ಮೀ(30), ಮಕ್ಕಳಾದ ರಾಜ್ (12) ಕೋಸಮಲ್ (7), ಕುನಾಲ್(5) ಹಾಗೂ ಅಣ್ಣನ ಮಗ ಗೋವಿಂದ್(12) ಕೊಲೆಯಾದವರು.

ಒಂದೇ ಕುಟುಂಬದ ಐವರ ಕೊಲೆ

ಗಂಗರಾಮ್ ಹಾಗೂ ಆತನ ಅಣ್ಣ ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಾಗಿದ್ದು, ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಗೂ ಹೋಗಿ ವ್ಯಾಪಾರ ಮಾಡುತ್ತಾರಂತೆ. ಒಮ್ಮೆ ವ್ಯಾಪಾರಕ್ಕೆಂದು ಮನೆಯಿಂದ ಹೋದ್ರೆ ಹದಿನೈದು ದಿನದಿಂದ ಒಂದು ತಿಂಗಳು ವಾಪಸ್ ಬರುವುದಿಲ್ಲ. ಇನ್ನು ಗಂಗರಾಜ್ ಎರಡು ದಿನದ ಹಿಂದೆ ವ್ಯಾಪಾರಕ್ಕೆಂದು ಮನೆಯಿಂದ ಹೋಗಿದ್ರು. ಹೀಗಾಗಿ ಲಕ್ಷ್ಮೀ ಮಕ್ಕಳನ್ನು ನೋಡಿಕೊಂಡು ಮನೆಯಲ್ಲೇ ಇದ್ರು. ರಾತ್ರಿ ಎಲ್ಲರೂ ಮಲಗಿದ ಬಳಿಕ ಮನೆಗೆ ನುಗ್ಗಿರುವ ಹಂತಕರು ಹರಿತವಾದ ಮಾರಕಾಸ್ತ್ರಗಳಿಂದ ಐವರನ್ನು ಹತ್ಯೆ ಮಾಡಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪೊಲೀಸರು ಹಾಗೂ ಕುಟುಂಬಸ್ಥರಿಂದ ಮಾಹಿತಿ

ಘಟನಾ ಸ್ಥಳಕ್ಕೆ ದಕ್ಷಿಣ ವಲಯದ ಐಜಿ ಪ್ರವೀಣ್ ಮಧುಕರ್ ಪವಾರ್, ಮಂಡ್ಯ ಎಸ್ಪಿ ಎನ್.ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು, ಸದ್ಯ ಹಂತಕರ ಪತ್ತೆಗಾಗಿ ತಂಡ ರಚನೆ ಮಾಡಲಾಗುತ್ತಿದೆ.

Last Updated : Feb 7, 2022, 8:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.