ಮಂಡ್ಯ: ಮುನಿರತ್ನ ಹಾಗೂ ನಾಗೇಶ್ಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಮುನಿರತ್ನ ಹಾಗೂ ನಾಗೇಶ್ ಅವರಿಗೆ ಉತ್ತಮ ಸ್ಥಾನ-ಮಾನ ಸಿಗಲಿದೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಅವರಿಗೆ ಒಳ್ಳೆಯದಾಗುತ್ತದೆ ಎಂದ ಅವರು, ಯಡಿಯೂರಪ್ಪ ಮೇಲೆ ಯತ್ನಾಳ್ ಆಕ್ರೋಶ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಪಕ್ಷದಲ್ಲಿ ಒಬ್ಬರು ಏನೋ ಮಾತನಾಡುತ್ತಾರೆ. ಎಲ್ಲಾ ಪಕ್ಷದಲ್ಲೂ ಹೀಗೆ ಇದ್ದಾರೆ. ಇವತ್ತು ಕೂಗಾಡುತ್ತಾರೆ ನಂತರ ಒಳಗೆ ಬಂದು ಸೇರಿಕೊಳ್ಳುತ್ತಾರೆ. ಮುಂದೆ ಎಲ್ಲರೂ ಸಮಾಧಾನವಾಗಿ ಹೋಗಬೇಕಾಗುತ್ತದೆ ಎಂದರು.
ನಾವು ಸಹ ಅವರಿಗೆ ಸಮಾಧಾನ ಹೇಳುವ ಕೆಲಸ ಮಾಡುತ್ತೇವೆ. ಸಿಡಿ ವಿಚಾರದ ಬಗ್ಗೆ ನನಗೆ ಏನು ಗೊತ್ತಿಲ್ಲ. ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂದು ಬಂದಿರುವವರು ನಾವು. ಯಾವ ಸಿಡಿ ವಿಚಾರವೂ ನಮಗೆ ತಿಳಿದಿಲ್ಲ ಎಂದರು.
ಓದಿ...ಸಿಡಿ ಬಿಡುಗಡೆ ಆಗುತ್ತೆ, ಸತ್ಯಾಂಶ ಬಯಲಾಗುತ್ತದೆ: ಬಿಎಸ್ವೈ ವಿರುದ್ಧ ಗುಡುಗಿದ ’ಹಳ್ಳಿಹಕ್ಕಿ’
ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಮನವಿ ಮಾಡುತ್ತೇನೆ. ಮುನಿರತ್ನಗೆ ಹಾಗೂ ವಿಶ್ವನಾಥ್ಗೆ ಸಚಿವ ಸ್ಥಾನ ಸಿಗಬೇಕು ಎಂದು ನಮ್ಮ ಒತ್ತಡ ಇದೆ. ವಿಶ್ವನಾಥ್ ಅವರು ಏನು ಮಾತಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಅವರು ನಾನು ಒಂದೇ ಪಕ್ಷದಲ್ಲಿ ಇದ್ದವರು. ನಾವು ಹೋಗಿ ಅವರ ಬಳಿ ಮಾತಮಾಡುತ್ತೇವೆ ಎಂದು ತಿಳಿಸಿದರು.