ಮಂಡ್ಯ: ಒಳ್ಳೆಯ ಕೆಲಸ ಮಾಡುತ್ತಿರುವವರಿಗೆ ಅಡಚಣೆ ಮಾಡಿದರೆ ಜನ ಸರಿಯಾದ ಉತ್ತರ ಕೊಡ್ತಾರೆ ಎಂದು ಸಂಸದೆ ಸಮಲತಾ ತಿರುಗೇಟು ನೀಡಿದ್ದಾರೆ.
ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಅಂಬಿ ಪುತ್ರ ಅಭಿಷೇಕ್ ಚಿತ್ರದ ಚಿತ್ರೀಕರಣಕ್ಕೆ ರೈತ ನಾಯಕರ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ನಾಯಕ-ನಾಯಕಿ ಹೇಳುಕೊಳ್ಳುವವರು ರೈತರಿಗೆ ವಿರೋಧವಾಗಿ ನಡೆದುಕೊಳ್ಳವಾಗ ನಾನು ಹೇಳೋದು ನಿಮ್ಮನ್ನ ರೈತ ವಿರೋಧಿಗಳು ಅಂತಾ. ಇದಕ್ಕೆ ಏನು ಉತ್ತರ ಕೊಡಲಿ, ತುಂಬಾ ವಿವೇಚನೆಗೆ ದೂರವಾದ ಮಾತುಗಳು ಎಂದು ಸಿಡಿಮಿಡಿಗೊಂಡರು. ಎಲ್ಲಾದ್ರೂ ಶೂಟಿಂಗ್ ನಡೆದರೆ ಆ ಜಾಗ ನಮ್ಮದಾಗುತ್ತಾ ಅಂತಾ ಪ್ರಶ್ನಿಸಬೇಕು. ಕೆಆರ್‌ಎಸ್‌ನಲ್ಲಿ ಎಷ್ಟು ಸಿನಿಮಾದ ಚಿತ್ರೀಕರಣ ನಡೆದಿವೆ. ಸರ್ಕಾರದ ಜಾಗದಲ್ಲಿ ಚಿತ್ರೀಕರಣ ಮಾಡಬಾರದು ಅಂತ ನಿಯಮ ಇದ್ಯಾ? ಸರ್ಕಾರದ ಅನುಮತಿ ಪಡೆದು ಅವರು ಮಾಡಬಹುದು ಎಂದರು.
ಓದಿ: ಅಜೀಂ ಪ್ರೇಮ್ ಜಿ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ನಮ್ಮ ಮಂಡ್ಯ ಜಿಲ್ಲೆಯಲ್ಲಿ ಶೂಟಿಂಗ್ ನಡೆದರೆ ಅಭಿವೃದ್ಧಿಯಾಗುತ್ತೆ. ಅದು ಅವರಿಗೆ ಗೊತ್ತಿಲ್ಲಾ ಎಂದ ಅವರು, ನನ್ನ ಮಗನ ಸಿನಿಮಾ ಚಿತ್ರೀಕರಣ ಬಗ್ಗೆ ಗೊತ್ತಿರಲಿಲ್ಲಾ. ಮೊದಲ ದಿನ ಬಂದ ನಂತರ ಗೊತ್ತಾಗಿದ್ದು ಎಂದು ತಿಳಿಸಿದರು.
ಜಿಲ್ಲಾಡಳಿತದ ಅನುಮತಿ ಪಡೆದ ಹಣ ಕಟ್ಟಿ ಚಿತ್ರೀಕರಣ ಮಾಡ್ತಿದ್ದಾರೆ. ಇದ್ದೆಲ್ಲಾ ಇವರ ಅರಿವಿಗೆ ತಟ್ಟೆ ಇಲ್ವಾ? ಇವರಿಗೆ ಏನು ಗೊತ್ತು ಯಾವ ಕಾರಣ? ಯಾವ ದುರುದ್ದೇಶ ಇಟ್ಟಿಕೊಂಡು ಮಾತನಾಡ್ತಿದ್ದಾರೆ? ಎಂದು ಪ್ರಶ್ನಿಸಿದ ಸಂಸದೆ, ರೈತರನ್ನ ಬಳಸಿಕೊಂಡು ಮಾತನಾಡಿಸ್ತಿದ್ದಾರಾ ಅಂತ ಪ್ರಶ್ನಿಸಬೇಕಾದ ವಿಚಾರ ಎಂದರು. ಮಂಡ್ಯ ಜಿಲ್ಲೆಯಲ್ಲಿ ಮೈಷುಗರ್ ಕಾರ್ಖಾನೆ ಪ್ರಾರಂಭಕ್ಕೆ ಹೋರಾಟ ಮಾಡ್ತಿದ್ದೇನೆ. ಅದು ಸರ್ಕಾರದ ಕೈಯಲ್ಲಿದೆ.ಖಾಸಗೀಕರಣ ಅಥವಾ ಸರ್ಕಾರ ನಡೆಸುವ ವಿಚಾರವಾಗಿ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ನನ್ನ ಬಗ್ಗೆ ವಿರೋಧ ಮಾಡುವವರಿಗೆ ಒಂದು ಸಲಹೆ ನೀಡುತ್ತೆನೆ. ಇವರಿಗೆ ಈ ರೀತಿಯ ವಿಚಾರ ಮಾತನಾಡಿ ಅನವಶ್ಯಕವಾಗಿ ಒಬ್ಬರನ್ನ ದ್ವೇಷಿಸಿದರೆ ಜನ ಮೆಚ್ಚುವುದಿಲ್ಲ. ಇಂತಹ ನಡವಳಿಕೆಯಿಂದ ಯಾರು ನಾಯಕರು ಆಗಲ್ಲ. ನಾಲ್ಕು ಜನಕ್ಕೆ ಒಳ್ಳೆಯದು ಮಾಡಿ ಎಂದು ಸಲಹೆ ನೀಡಿದರು. ನೀವು ಮಂಡ್ಯ ಜನರ ವಿರೋಧಿಗಳು. ಮಂಡ್ಯಕ್ಕೆ ಮಾಡುವ ದ್ರೋಹ ಇದು.ಮಾನವಿಯತೆ ಇರಬೇಕು ಇವರಿಗೆ.ಪಬ್ಲಿಸಿಟಿಗೊಸ್ಕರ ಮಾಡ್ತಿರಬಹುದು ಅನ್ಸುತ್ತೇ ಎಂದು ವ್ಯಂಗ್ಯ ವಾಡಿದರು.