ETV Bharat / state

ಮೈ ಶುಗರ್ ಕಾರ್ಖಾನೆ ಪ್ರಾರಂಭಕ್ಕೆ ಅಡ್ಡಿಯಾದವರಿಗೆ ರೈತರ ಶಾಪ ತಟ್ಟುತ್ತೆ: ಸಂಸದೆ ಸುಮಲತಾ ಅಂಬರೀಶ್​

ಸಕ್ಕರೆ ನಾಡು ಮಂಡ್ಯದಲ್ಲಿ ಇದೀಗ ಮೈ ಶುಗರ್ ಕಾರ್ಖಾನೆ ಆರಂಭದ ವಿಚಾರದಲ್ಲಿ ಜಟಾಪಟಿ ಜೋರಾಗಿದೆ‌. ಸಂಸದೆ ಸುಮಲತಾ ಅಂಬರೀಶ್​ ಅವರೇ ಖುದ್ದು ಅಖಾಡಕ್ಕೆ ಇಳಿದಿದ್ದು, ಶತಾಯಗತಾಯ ಕಾರ್ಖಾನೆ ಆರಂಭಿಸಲು ರೈತರ ಪರ ನಿಂತಿದ್ದಾರೆ.

MP statement on mysugar factory
ಸಂಸದೆ ಸುಮಲತಾ ಅಂಬರೀಶ್​​​
author img

By

Published : Jun 18, 2020, 6:59 PM IST

ಮಂಡ್ಯ: ಮೈ ಶುಗರ್ ಕಾರ್ಖಾನೆ ಆರಂಭದ ವಿಚಾರದಲ್ಲಿ ಅಡ್ಡಿಯಾದವರಿಗೆ ರೈತರ ಶಾಪ ತಟ್ಟಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್​​​ ಹೇಳಿದರು.

ಕಾರ್ಖಾನೆ ಆರಂಭಕ್ಕೆ ಅಡ್ಡಿಪಡಿಸುತ್ತಿರುವ ಶಾಸಕರು ಹಾಗೂ ಹೋರಾಟಗಾರರ ವಿರುದ್ಧ ಸಂಸದೆ ಆಕ್ರೋಶ ಹೊರ ಹಾಕಿದರು. ರೈತರ ವಿಷಯದಲ್ಲಿ ಸ್ವಾರ್ಥದ ರಾಜಕಾರಣ ಮಾಡುತ್ತಿರುವವರಿಗೆ ಆ ದೇವರು ಕ್ಷಮಿಸಲ್ಲ. ರೈತರೂ ಕ್ಷಮಿಸಲ್ಲ ಎಂದರು.

ಸಂಸದೆ ಸುಮಲತಾ ಅಂಬರೀಶ್

ಕಬ್ಬು ಬೆಳೆಗಾರ ರೈತರು ಕಾರ್ಖಾನೆಯನ್ನು O&M ಮಾದರಿಯಲ್ಲಿ ಆರಂಭಿಸಲು ಈ ಹಿಂದೆ ಮೈತ್ರಿ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಸರ್ಕಾರ ಬದಲಾಗುತ್ತಿದ್ದಂತೆ ಇಲ್ಲಿನ ಶಾಸಕರು ವಿರೋಧ ವ್ಯಕ್ತಪಡಿಸ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಕಾರ್ಖಾನೆ ಈ ಸರ್ಕಾರದ ಅವಧಿಯಲ್ಲಿ ತೆರೆದರೆ ಅದರ ಲಾಭ ಅವರಿಗೆ ಹೋಗಲಿದೆ ಎಂದು ಅವರಿಗೆ ಭಯ. ಅದಕ್ಕಾಗಿ ಅವರ ಎದೆಯಲ್ಲಿ ಆತಂಕ ಶುರುವಾಗಿದೆ. ಸಂಸದರು ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಲಾಬಿ ಮಾಡುತ್ತಿದ್ದಾರೆ ಎಂಬುದನ್ನು ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.

ಒಂದು ಒಳ್ಳೆಯ ಉದ್ದೇಶವಿಟ್ಟುಕೊಂಡು ಕೆಲಸ ಮಾಡಿದರೂ ಈ ರೀತಿ ಆರೋಪ ಮಾಡುತ್ತಿದ್ದಾರೆ. ಈಗ ಬೇಡ ಎನ್ನುತ್ತಿರುವ ಅವರ ಹಿಂದೆ ಒಂದು ದುರದ್ದೇಶವಿದೆ ಎಂದು ಜೆಡಿಎಸ್ ಶಾಸಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಕಾರ್ಖಾನೆ ಆರಂಭಿಸಲು ಒತ್ತಾಯಿಸಿ ಪ್ರಗತಿಪರ ರೈತರು ಪ್ರತಿಭಟನೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.