ಮಂಡ್ಯ: ಪತ್ರಕರ್ತರಿಗೆ ಕೊರೊನಾ ಟೆಸ್ಟ್ ನಡೆಸದಂತೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಕಿರಿಕ್ ಮಾಡಿದ್ದಾರೆ. ಅವರ ಪುತ್ರನನ್ನು ಮುಂದೆ ಬಿಟ್ಟು ಪತ್ರಕರ್ತರ ಮೇಲೆ ಹಲ್ಲೆ ಮಾಡಲು ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪತ್ರಕರ್ತರಿಗೆ ಕೊರೊನಾ ಟೆಸ್ಟ್ ನಡೆಸುತ್ತಿದ್ದ ಸಂದರ್ಭದಲ್ಲಿ, ಜನರನ್ನು ಎತ್ತಿಕಟ್ಟಿ ಕಿರಿಕ್ ಮಾಡಿದ ಶ್ರೀಕಂಠೇಗೌಡ, ತಮ್ಮ ಪುತ್ರನನ್ನು ಮುಂದೆ ಬಿಟ್ಟು ಖಾಸಗಿ ಚಾನಲ್ ವರದಿಗಾರನ ಮೇಲೆ ಹಲ್ಲೆ ನಡೆಸಿದ್ದಾರೆ. ನಗರದ ಅಂಬೇಡ್ಕರ್ ಭವನದ ಪಕ್ಕದಲ್ಲಿ ಮನೆಯಿರುವ ಕಾರಣ ಟೆಸ್ಟ್ ಮಾಡಬೇಡಿ ಎಂದು ಜನರೊಂದಿಗೆ ಸೇರಿ ಜಗಳ ತೆಗೆದು, ಈ ಸ್ಥಳದಲ್ಲಿ ಕೋವಿಡ್-19 ಟೆಸ್ಟ್ ನಿಲ್ಲಿಸುವಂತೆ ಧಮ್ಕಿ ಹಾಕಿದ್ದಾರೆ ಎನ್ನಲಾಗ್ತಿದೆ.
ಮಾಧ್ಯಮದವರಿಗೆ ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಮಾಡದಂತೆ ಗಲಾಟೆ ಆರಂಭಿಸಿ ಹಲ್ಲೆ ಮಾಡಲಾಗಿದೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ಶ್ರೀಕಂಠೇಗೌಡರ ಪುತ್ರನನ್ನು ವಶಕ್ಕೆ ಪಡೆದ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.