ಮಂಡ್ಯ: ಕೆಆರ್ಎಸ್ ಬಿರುಕು ವಿವಾದ ಮತ್ತಷ್ಟು ತಾರಕಕ್ಕೇರಿದೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ಸುಮಲತಾ ನಡುವಿನ ವಾಕ್ಸಮರ ಈಗ ಅವರವರ ಬೆಂಬಲಿಗರ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ. ಸುಮಲತಾ ಅವರನ್ನು ಬೆಂಬಲಿಸಿ ನಿರ್ಮಾಪಕ ರಾಕ್‌ಲೈನ್ ವೆಂಟಕೇಶ್ ನೀಡಿರುವ ಹೇಳಿಕೆಗಳನ್ನು ಖಂಡಿಸಿ ಜೆಡಿಎಸ್ ಶಾಸಕರು ಗರಂ ಆಗಿದ್ದಾರೆ.
ಹೌದು, ರಾಕ್‌ಲೈನ್ ವಿರುದ್ಧ ಜೆಡಿಎಸ್ ಶಾಸಕ ಸುರೇಶ್ ಗೌಡ ಏಕವಚನದಲ್ಲೇ ಮಾತನಾಡಿದ್ದಾರೆ. ಯಾರ್ ರೀ ಅವನು ಯಾವ ರಾಕ್‌ಲೈನ್ ವೆಂಕಟೇಶ್. ಮಂಡ್ಯ ಜಿಲ್ಲೆಗೂ, ಅವನಿಗೂ ಏನ್ ಸಂಬಂಧ ಎಂದು ಹರಿಹಾಯ್ದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀನ್ ಯಾವ ಊರ ದಾಸಯ್ಯನಯ್ಯ, ಮಂಡ್ಯ ರಾಜಕೀಯಕ್ಕೆ ನೀನ್ ಬರಬೇಡ. ನೀನ್ಯಾರು ಮಂಡ್ಯ ರಾಜಕೀಯದ ಬಗ್ಗೆ ಮಾತಾಡೋಕೆ. ಬಾಯಿಗೆ ಬಂದಂತೆ ಮಾತಾಡೋದು ಸರಿಯಲ್ಲ. ಹುಷಾರಾಗಿ ಮಾತಾಡು ಎಂದು ಎಚ್ಚರಿಕೆ ರವಾನಿಸಿದ್ದಾರೆ.
ನೀನ್ ಯಾರಪ್ಪ ಪುಣ್ಯಾತ್ಮ ಇದರ ಬಗ್ಗೆ ಮಾತಾಡೋಕೆ. ಏನ್ ಏನಕ್ಕೋ ಬಂದವರು ನಮ್ಮ ಅಸ್ತಿತ್ವದ ಬಗ್ಗೆ ಪ್ರಶ್ನಿಸ್ತಿದ್ದಾರೆ. ನಾವು ಕರ್ನಾಟಕದವರು ಅಲ್ಲವೇ ಎಲ್ಲವನ್ನೂ ಫ್ರೀಯಾಗಿ ಬಿಡುತ್ತೇವೆ. ಇಲ್ಲಿಗೆ ಬಂದವರು ನಮ್ಮವರೇ ಎಂದು ರಾಕ್‌ಲೈನ್ ಕರ್ನಾಟಕದವರಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ನಾನು ಆ್ಯಕ್ಟರ್ ಆಗಬೇಕು
ನಾನು ಆ್ಯಕ್ಟಿಂಗ್ ಕಲಿತು ಆ್ಯಕ್ಟರ್ ಆಗಬೇಕು ಅಂದುಕೊಂಡಿದ್ದೇನೆ. ಡೈಲಾಗ್ ಡೆಲಿವರಿ ಮಾಡೋದು, ಫೇಸ್ ಎಕ್ಸ್ಪ್ರೆಷನ್ ಕೊಡೋದನ್ನು ಕಲಿಯಬೇಕಿದೆ. ಮುಂದಕ್ಕೆ ಅನುಕೂಲ ಆಗುತ್ತೆ. ನಾನೂ ಟ್ರೈ ಮಾಡ್ತಿನಿ. ಕುಮಾರಣ್ಣಂಗೂ ಹೇಳಿದ್ದೀನಿ. ನೀವು ಫಿಲ್ಮ್ ತೆಗೆದ್ರೆ ಸಾಲಲ್ಲ. ಆ್ಯಕ್ಟ್ ಮಾಡಬೇಕು ಅಂತಾ ಅಂದಿರುವುದಾಗಿ ತಿಳಿಸಿದ್ರು.
ಇದನ್ನೂ ಓದಿ:ಸುಮಲತಾ ಬಗ್ಗೆ ಕುಮಾರಸ್ವಾಮಿ ಈ ಕೃತ್ಯಕ್ಕೂ ಇಳಿದಿದ್ರಾ?: ರಾಕ್‌ಲೈನ್ ವೆಂಕಟೇಶ್ರಿಂದ ಗಂಭೀರ ಆರೋಪ