ETV Bharat / state

ಸಚಿವ ಪುಟ್ಟರಾಜು ತಮ್ಮ ತಾಲೂಕಿಗಷ್ಟೇ ನೀರು ಹರಿಸಿದ್ರೇ ನಾವ್‌ ಸುಮ್ನಿರ್ತೀವಾ.. JDS ಶಾಸಕ ಸುರೇಶ್‌ಗೌಡ ಪ್ರಶ್ನೆ..

ನೀರಿನ ವಿಚಾರದಲ್ಲಿ ರಾಜಕೀಯ ಮಾಡುವ ದುಸ್ಥಿತಿಗೆ ನಾವು ತಲುಪಿಲ್ಲ ಎಂದು ನಾಗಮಂಗಲದ ಜೆಡಿಎಸ್ ಶಾಸಕ ಸುರೇಶ್ ಗೌಡ, ಮಾಜಿ ಸಚಿವ ಚಲುವರಾಯಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಸುರೇಶ್ ಗೌಡ ವಾಗ್ದಾಳಿ
author img

By

Published : Jun 29, 2019, 6:37 PM IST

ಮಂಡ್ಯ: ನೀರಿನ ವಿಚಾರದಲ್ಲಿ ರಾಜಕೀಯ ಮಾಡುವ ದುಸ್ಥಿತಿಗೆ ನಾವು ತಲುಪಿಲ್ಲ ಎಂದು ನಾಗಮಂಗಲದ ಜೆಡಿಎಸ್ ಶಾಸಕ ಸುರೇಶ್ ಗೌಡ, ಮಾಜಿ ಸಚಿವ ಚಲುವರಾಯಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಸಚಿವ ಪುಟ್ಟರಾಜು ಅವರ ತಾಲೂಕಿಗೆ ನೀರು ಹರಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಚಲುವರಾಯಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರವನ್ನು ವಿರೋಧಿಸಿ ಶಾಸಕ ಸುರೇಶ್ ಗೌಡ, ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸುರೇಶ್ ಗೌಡ , ಸದ್ಯಕ್ಕೆ ಬೆಳೆದಿರುವ ಬೆಳೆಗಳಿಗೆ ನೀರು ಕೊಡಬೇಕು ಅನ್ನೋದು ನಮ್ಮ ಉದ್ದೇಶವಾಗಿದೆ. ಈ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕು ಎಂದು ಯೋಚನೆ ಮಾಡುತ್ತಿದ್ದೇವೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡುವ ಸ್ಥಿತಿಗೆ ನಾವು ತಲುಪಿಲ್ಲ ಎಂದರು.

ಸುರೇಶ್ ಗೌಡ ವಾಗ್ದಾಳಿ

ಸಚಿವ ಪುಟ್ಟರಾಜು ಅವರ ತಾಲೂಕಿಗೆ ನೀರು ಹರಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಸಚಿವ ಪುಟ್ಟರಾಜು ವಿರುದ್ಧ ಅವರಿಗಾಗದದವರು ಈ ರೀತಿ ಆರೋಪ ಮಾಡುತ್ತಿದ್ದಾರೆ. ಅವರ ತಾಲೂಕಿಗೆ ನೀರು ಹರಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರು ನೀರನ್ನು ಎಲ್ಲಿ ಹರಿಸಿದ್ರು? ಯಾಕೆ ಹರಿಸಿದ್ರು ? ಅನ್ನೋದಕ್ಕೆ ಸಾಕ್ಷಿ ಬೇಕಲ್ವಾ, ಸುಮ್ಮನೆ ಆರೋಪ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ಆ ರೀತಿ ಪುಟ್ಟರಾಜು ಒಬ್ಬರೇ ಅವರ ತಾಲೂಕಿಗೆ ನೀರು ಬಿಡಿಸಿಕೊಂಡರೆ, ನಾವೆಲ್ಲಾ ಸುಮ್ಮನಿರ್ತೀವಾ? ಆಪಾದನೆ ಮಾಡುವುದು ಸಾಮಾನ್ಯ, ಏನಾದ್ರೂ ಮಾಡಿಕೊಳ್ಳಲಿ ಬಿಡಿ ಎಂದು ವಾಗ್ದಾಳಿ ನಡೆಸಿದರು.

Intro:ಮಂಡ್ಯ: ನೀರಿನ ವಿಚಾರದಲ್ಲಿ ರಾಜಕೀಯ ಮಾಡೋ ಸ್ಥಿತಿಗೆ ನಾವು ತಲುಪಿಲ್ಲ ಎಂದು ನಾಗಮಂಗಲದ ಜೆಡಿಎಸ್ ಶಾಸಕ ಸುರೇಶ್ ಗೌಡ ಮಾಜಿ ಸಚಿವ ಚಲುವರಾಯಸ್ವಾಮಿಗೆ ತಿರುಗೇಟು ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿ, ಸದ್ಯಕ್ಕೆ ಬೆಳೆದಿರೋ ಬೆಳೆಗಳಿಗೆ ನೀರು ಕೊಡಬೇಕು ಅನ್ನೋದು ನಮ್ಮ ಉದ್ದೇಶ. ಅದನ್ನು ಹೇಗೆ ಪರಿಹರಿಸಬೇಕು ಅಂತಾ ಯೋಚನೆ ಮಾಡ್ತಿದ್ದೀವಿ. ನೀರಿನ ವಿಚಾರದಲ್ಲಿ ರಾಜಕೀಯ ಮಾಡೋ ಸ್ಥಿತಿಗೆ ನಾವೂ ತಲುಪಿಲ್ಲ ಎಂದರು.
ಸಚಿವ ಪುಟ್ಟರಾಜು ವಿರುದ್ಧ ಅವರಿಗಾಗದದವರೂ ಆರೋಪ ಮಾಡ್ತಿದ್ದಾರೆ. ಅವರ ತಾಲ್ಲೂಕಿಗೆ ನೀರು ಹರಿಸ್ತಿದ್ದಾರೆ ಅಂತಾ ಹೇಳ್ತಾ ಇದ್ದಾರೆ. ಅವರು ನೀರನ್ನು ಎಲ್ಲಿ ಹರಿಸಿದ್ರೂ? ಯಾಕೆ ಹರಿಸಿದ್ರೂ ?ಅನ್ನೋದಕ್ಕೆ ಪ್ರೂಪ್ ಬೇಕಲ್ವಾ ಸುಮ್ಮನೇ ಆರೋಪ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
ಆ ರೀತಿ ಪುಟ್ಟರಾಜು ಒಬ್ಬರೇ ಅವರ ತಾಲ್ಲೂಕಿಗೆ ನೀರು ಬಿಡಿಸಿಕೊಂಡ್ರೆ ನಾವೆಲ್ಲಾ ಸುಮ್ಮನಿರ್ತಿವಾ. ಆಪಾದನೆ ಮಾಡೋದು ಸರ್ವೇ ಸಾಮಾನ್ಯ ಮಾಡ್ತಾರೆ ಬಿಡಿ ಎಂದರು.Body:ಕೊತ್ತತ್ತಿ ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.