ETV Bharat / state

ಸುಮಲತಾ ರೈತರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ: ರವೀಂದ್ರ ಶ್ರೀಕಂಠಯ್ಯ - ಸುಮಲತಾ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ

KRS ಡ್ಯಾಂ ನ್ಯಾಷನಲ್ ಪ್ರಾಪರ್ಟಿ. ಅದರ ಬಗ್ಗೆ ಅನುಮಾನ ಇದ್ದರೆ ಸರ್ಕಾರದ ಗಮನಕ್ಕೆ ತರಬೇಕಿತ್ತು. ಡ್ಯಾಂ ಬಗ್ಗೆ ಹೇಳಿಕೆ ಕೊಡುವಾಗ ಅವರು ಯೋಚನೆ ಮಾಡಬೇಕಿತ್ತು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

MLA Ravindra Srikanth Statement in Mandy
ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ
author img

By

Published : Jul 5, 2021, 4:46 PM IST

ಮಂಡ್ಯ: ಸರಿಯಾದ ಮಾಹಿತಿ ಪಡೆಯದೆ ಡ್ಯಾಂ ಬಿರುಕು ಬಿಟ್ಟಿದೆ ಎಂದಿದ್ದಾರೆ‌. ಇದು ದೇಶದ್ರೋಹದಷ್ಟೇ ಅಪರಾಧ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಕೆ‌ಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಸಂಸದೆ ಸುಮಲತಾ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರನ್ನು ಪ್ರಚೋದಿಸುವ ಕೆಲಸ ಸುಮಲತಾ ಮಾಡುತ್ತಿದ್ದಾರೆ. ಯಾರಾದರೂ ಇದರ ಬಗ್ಗೆ ಕಾನೂನು ಹೋರಾಟ ಮಾಡಿದರೆ ಸುಮಲತಾ ಶಿಕ್ಷೆ ಅನುಭವಿಸಬೇಕಾಗಬಹುದು ಎಂದರು.

ಚುನಾವಣೆಯಲ್ಲಿ ಗೆದ್ದ ಬಳಿಕ ಮಂಡ್ಯ ಅಭಿವೃದ್ಧಿಗಾಗಿ ಏನು ಮಾಡಿದ್ದಾರೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಲಿ. ಕೋವಿಡ್ ಸಂಕಷ್ಟದಲ್ಲಿ ಜನರ ಕಷ್ಟ ಕೇಳಲಿಲ್ಲ. ನಾನು ಕ್ಷೇತ್ರಕ್ಕೆ ಬಂದರೆ ಜನ ಸೇರುತ್ತಾರೆ ಎಂಬ ಕಾರಣ ಕೊಟ್ಟು ದೂರ ಉಳಿದಿದ್ದು ನಾಚಿಕೆಗೇಡು ಎಂದು ಕಿಡಿಕಾರಿದರು.

ಮಂಡ್ಯಕ್ಕೆ ಬಾರದ ಸುದ್ದಿಯನ್ನು ಮರೆಮಾಚಲು KRS ಬಿರುಕು ಬಿಟ್ಟಿದೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಸುಮಲತಾ ಹೇಳಿಕೆಯಿಂದ ರೈತರು ಆತಂಕದಲ್ಲಿದ್ದಾರೆ. ಈ ಸಂದರ್ಭದಲ್ಲಿ ರೈತರು ಬೆಳೆ ಬೆಳೆಯಬೇಕೇ ಬೇಡವೇ.? ಡ್ಯಾಂ ಪರಿಸ್ಥಿತಿ ಹೇಗಿದೆ.? ಎಂಬ ಪ್ರಶ್ನೆ ಮಾಡುವ ಮೂಲಕ ಎಲ್ಲರಲ್ಲಿ ಗೊಂದಲ ಆವರಿಸಿದೆ ಎಂದರು.

ಇದನ್ನೂ ಓದಿ: KRS ರಕ್ಷಣೆಗೆ ಅವ್ರನ್ನೇ ಮಲಗಿಸಬೇಕೆಂದ ಹೆಚ್​ಡಿಕೆ..ಭಾಷೆ ಮೇಲೆ ಹಿಡಿತ ಇಲ್ವಾ ಎಂದು ಕುಟುಕಿದ ಸಂಸದೆ ಸುಮಲತಾ

KRS ಡ್ಯಾಂ ನ್ಯಾಷನಲ್ ಪ್ರಾಪರ್ಟಿ. ಅದರ ಬಗ್ಗೆ ಅನುಮಾನ ಇದ್ದರೆ ಸರ್ಕಾರದ ಗಮನಕ್ಕೆ ತರಬೇಕಿತ್ತು. ಈ ಬಗ್ಗೆ ಹೇಳಿಕೆ ಕೊಡುವಾಗ ಅವರು ಯೋಚನೆ ಮಾಡಬೇಕಿತ್ತು. ಯಾವುದೋ ಉದ್ದೇಶ ಇಟ್ಟುಕೊಂಡು ಹೇಳಿಕೆ ಕೊಡುವುದು ಸರಿಯಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.