ಮಂಡ್ಯ: ಕಾಂಗ್ರೆಸ್ನವರು ಬೊಗಳೆ ಬಿಡುವುದರಲ್ಲಿ ನಿಸ್ಸೀಮರು, ನರೇಂದ್ರ ಸ್ವಾಮಿನೇ ಬೊಗಳೆ ಎಂದು ಮಳವಳ್ಳಿಯಲ್ಲಿ ಶಾಸಕ ಡಾ.ಕೆ. ಅನ್ನದಾನಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 38 ಗ್ರಾಮ ಪಂಚಾಯಿತಿ ಚುನಾವಣೆ ನಡೆದಿದೆ. 26 ಗ್ರಾಪಂ ಗಳಲ್ಲಿ ಬಹುಮತ ಪಡೆದಿದ್ದೇವೆ. ಹೆಚ್ಚು ಜೆಡಿಎಸ್ ಬೆಂಬಲಿತರು ಗ್ರಾಪಂ ಸದಸ್ಯರಾಗಿದ್ದಾರೆ. ಇವರ ಪಕ್ಷದಿಂದ ಎಷ್ಟು ಸದಸ್ಯರಿದ್ದಾರೆ ಎಂದು ತೋರಿಸಲಿ. ನಾನು 120 ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದೇನೆ. ನೀವು ಕಲ್ಲು ಹಾಕಿ ಹೋಗಿದ್ರೇ ಅದು ಸಾಧನೆ ಆಗುತ್ತಾ ಎಂದು ಅವರು ಹೇಳಿದರು.
ಖಂಡಿತವಾಗಿ ಕಾರ್ಯಕರ್ತರು ದುಡ್ಡು ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಈಗಲೂ ಕಾರ್ಯಕರ್ತರು ಹಾಗೂ ಮತದಾರರಿಗೆ ಗುಲಾಮನಾಗಿ ಕೆಲಸ ಮಾಡ್ತಿದ್ದೇನೆ. ಅದನ್ನು ಪ್ರಶ್ನೆ ಮಾಡಲು ನರೇಂದ್ರ ಸ್ವಾಮಿ ಯಾರು. ತಾಲೂಕಿನಲ್ಲಿ ಏನು ಕೆಲಸ ಮಾಡಿದ್ದೀರಿ, ನಾನು ಏನು ಮಾಡಿದ್ದೇನೆ ಎಂಬ ಬಗ್ಗೆ ಬಹಿರಂಗ ಚರ್ಚೆಯಾಗಲಿ ಎಂದು ಮಾಜಿ ಶಾಸಕರನ್ನ ಚರ್ಚೆಗೆ ಆಹ್ವಾನಿಸಿದ್ದಾರೆ.