ETV Bharat / state

ಅಪಘಾತದಿಂದ ಗಾಯಗೊಂಡಿದ್ದ ಮಹಿಳೆಯನ್ನು ಬೆಂಗಾವಲು ವಾಹನದಲ್ಲೇ ಆಸ್ಪತ್ರೆ ಸೇರಿಸಿದ ಸಚಿವರು - ಮಂಡ್ಯ ರಾಜಕೀಯ ಸುದ್ದಿ

ಅಪಘಾತಗೊಂಡು ಆ್ಯಂಬುಲೆನ್ಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಗಮನಿಸಿದ ಇಬ್ಬರು ಸಚಿವರು ಮಹಿಳೆಗೆ ಸಾಂತ್ವನ ಹೇಳಿ ಚಿಕಿತ್ಸೆಗೆಂದು ತಮ್ಮ ಎಸ್ಕಾರ್ಟ್​ ವಾಹನದಲ್ಲೇ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ.

Ministers admits injured woman to hospital in their escort vehicle
ಮಹಿಳೆಯನ್ನು ಬೆಂಗಾವಲು ವಾಹನದಲ್ಲೇ ಆಸ್ಪತ್ರೆ ಸೇರಿಸಿದ ಸಚಿವರು
author img

By

Published : Jun 10, 2020, 4:49 PM IST

ಮಂಡ್ಯ: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರನ್ನು ತಮ್ಮ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ಸಚಿವ ನಾರಾಯಣ ಗೌಡ ಹಾಗೂ ಶಿವರಾಮ್ ಹೆಬ್ಬಾರ್ ಮಾನವೀಯತೆ ಮೆರೆದಿದ್ದಾರೆ.

ಮೈಶುಗರ್ ಕಾರ್ಖಾನೆ ಭೇಟಿ ಮುಗಿಸಿ, ಪಿಎಸ್‌ಎಸ್‌ಕೆ ಕಾರ್ಖಾನೆಗೆ ಇಬ್ಬರೂ ಸಚಿವರು ತೆರಳುತ್ತಿದ್ದರು. ಈ ಸಂದರ್ಭ ಶ್ರೀರಂಗಪಟ್ಟಣ ತಾಲೂಕಿನ ಟಿಎಂ ಹೊಸೂರು ಗೇಟ್ ಬಳಿ ಮಹಿಳೆಯೊಬ್ಬರು ಅಪಘಾತಗೊಂಡು ಆ್ಯಂಬುಲೆನ್ಸ್‌ಗಾಗಿ ಕಾಯುತ್ತಿದ್ದರು‌. ಇದನ್ನು ಗಮನಿಸಿದ ಇಬ್ಬರು ಸಚಿವರು ಮಹಿಳೆಗೆ ಸಾಂತ್ವನ ಹೇಳಿ ಚಿಕಿತ್ಸೆಗೆಂದು ತಮ್ಮ ಎಸ್ಕಾರ್ಟ್​ ವಾಹನದಲ್ಲೇ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ.

ಮಹಿಳೆಯನ್ನು ಬೆಂಗಾವಲು ವಾಹನದಲ್ಲೇ ಆಸ್ಪತ್ರೆ ಸೇರಿಸಿದ ಸಚಿವರು

ಸಚಿವರ ಮಾನವೀಯ ಗುಣಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪಘಾತ ಸಂಬಂಧ ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.