ETV Bharat / state

ಯುವ ವೈದ್ಯರು ಹಳ್ಳಿಗಳಿಗೆ ಹೋಗಿ ಸೇವೆ ಸಲ್ಲಿಸಲಿ: ಸಚಿವ ಸುಧಾಕರ್ - Health Minister Dr. K. Sudhakar

ರಾಜ್ಯದಲ್ಲಿ 60 ಮೆಡಿಕಲ್ ಕಾಲೇಜುಗಳಿದ್ದು, ಹೊಸದಾಗಿ 4 ಕಾಲೇಜು ಆರಂಭಿಸಲಾಗಿದೆ. ಒಂದು ಹೊಸ ಕಾಲೇಜು ಉದ್ಘಾಟನೆಯಾಗಿದೆ. ಇದು ಸೇರಿ ಒಟ್ಟು ಕಾಲೇಜುಗಳ ಸಂಖ್ಯೆ 65 ಕ್ಕೇರಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದರು.

minister sudakar talk
ಸಚಿವ ಸುಧಾಕರ್
author img

By

Published : Jan 21, 2021, 9:19 PM IST

ಮಂಡ್ಯ: ಯುವ ವೈದ್ಯರು ಹಳ್ಳಿಗಳಿಗೆ ಹೋಗಿ ಸೇವೆ ಸಲ್ಲಿಸದಿದ್ದರೆ ಎಷ್ಟೇ ಮೆಡಿಕಲ್ ಕಾಲೇಜು ನಿರ್ಮಿಸಿದರೂ ಪ್ರಯೋಜನವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಸಚಿವ ಸುಧಾಕರ್

ಓದಿ: ಸಚಿವರಲ್ಲಿ ಅಸಮಾಧಾನ ಸಹಜ, ಎಲ್ಲ ಸರಿಯಾಗುತ್ತದೆ; ಬೊಮ್ಮಾಯಿ ವಿಶ್ವಾಸ

ನಾಗಮಂಗಲದ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರೋಗ್ಯ ಕರ್ನಾಟಕದ ಕನಸು ನನಸಾಗಿಸಲು ಪ್ರಾಥಮಿಕ ಹಂತದ ಆರೋಗ್ಯ ಸೌಲಭ್ಯ ಉತ್ತಮವಾಗಬೇಕು. ಹೆಚ್ಚಿನ ಆಸ್ಪತ್ರೆಗಳು ನಗರಗಳಲಿದ್ದು, ವೈದ್ಯರು ಹಳ್ಳಿಗಳಿಗೆ ಹೋಗಿ ಕಾರ್ಯನಿರ್ವಹಿಸದಿದ್ದರೆ ಎಷ್ಟೇ ಸಂಖ್ಯೆಯ ಮೆಡಿಕಲ್ ಕಾಲೇಜು ನಿರ್ಮಿಸಿದರೂ ಒಂದೇ ಎಂದರು.

ಗ್ರಾಮೀಣ ಸೇವೆ ಉತ್ತೇಜಿಸಲು ನೇಮಕಾತಿ ನಿಯಮಗಳಲ್ಲಿ ಕೆಲ ಬದಲಾವಣೆಗೆ ಯತ್ನಿಸಲಾಗಿದೆ. ಹಳ್ಳಿಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ವೇತನ, ಬೇಗ ಬಡ್ತಿ, ಮಕ್ಕಳಿಗೆ ಶಿಕ್ಷಣ ಮೊದಲಾದ ಸೌಲಭ್ಯ ನೀಡಲು ಯತ್ನಿಸಲಾಗುತ್ತಿದೆ ಎಂದರು.

ನನ್ನ ಘಟನೆಯೇ ಸಾಕ್ಷಿ:

ನನ್ನೂರು ಚಿಕ್ಕಬಳ್ಳಾಪುರದ ಹಳ್ಳಿ, ನಾನು ವ್ಯಾಸಂಗ ಮಾಡುತ್ತಿದ್ದಾಗ ಹಳ್ಳಿಯಲ್ಲಿದ್ದ ತಾಯಿಗೆ ಆರೋಗ್ಯ ಹದಗೆಟ್ಟಿದೆ ಎಂದು ತಿಳಿಯಿತು. ನನ್ನೂರಿನಲ್ಲಿ ಆಂಬ್ಯುಲೆನ್ಸ್ ಸೌಲಭ್ಯ ಇರಲಿಲ್ಲ. ಇದರಿಂದಾಗಿ ನಾನು ತಾಯಿಯ ಬಳಿ ತಲುಪುವ ಹೊತ್ತಿಗೆ ನಿಧನರಾಗಿದ್ದರು. ಈ ರೀತಿ ಸರಿಯಾದ ಸಮಯಕ್ಕೆ ತುರ್ತು ಸೇವೆ ಸಿಗದೆ ಆತ್ಮೀಯರನ್ನು ಕಳೆದುಕೊಳ್ಳುವ ಘಟನೆ ನಡೆಯುತ್ತಲೇ ಇವೆ ಎಂದರು.

ಈಗ ನನಗೆ ಸಿಕ್ಕ ಅವಕಾಶದಲ್ಲಿ, ಆಂಬ್ಯುಲೆನ್ಸ್ ಸೇವೆಯಲ್ಲಿ ಬದಲಾವಣೆ ತಂದಿದ್ದೇನೆ. 2 ಲಕ್ಷ ಜನಸಂಖ್ಯೆಗೆ ಒಂದು ಆಂಬ್ಯುಲೆನ್ಸ್ ಇದ್ದು, ಈಗ ಪ್ರತಿ ಪಿಎಚ್​​ಸಿಗೆ ಒಂದು ಆಂಬ್ಯುಲೆನ್ಸ್ ನೀಡಲಾಗುತ್ತಿದೆ. ಒಟ್ಟು 2,400 ಆಂಬ್ಯುಲೆನ್ಸ್ ದೊರೆಯಲಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ 60 ಮೆಡಿಕಲ್ ಕಾಲೇಜುಗಳಿದ್ದು, ಹೊಸದಾಗಿ 4 ಕಾಲೇಜು ಆರಂಭಿಸಲಾಗಿದೆ. ಒಂದು ಹೊಸ ಕಾಲೇಜು ಉದ್ಘಾಟನೆಯಾಗಿದೆ. ಇದು ಸೇರಿ ಒಟ್ಟು ಕಾಲೇಜುಗಳ ಸಂಖ್ಯೆ 65 ಕ್ಕೇರಿದೆ. ಆದಿಚುಂಚನಗಿರಿ ಕಾಲೇಜು ಗ್ರಾಮೀಣ ಪ್ರದೇಶದಲ್ಲಿ ನೆಲೆಯಾಗಿರುವುದು ವಿಶೇಷವಾಗಿದ್ದು, ಸ್ವಾಮೀಜಿಗಳ ನಿಸ್ವಾರ್ಥ ಸೇವೆ ಹಾಗೂ ಗ್ರಾಮೀಣ ಪ್ರದೇಶದ ಬಗೆಗಿನ ಕಾಳಜಿಗೆ ಸಾಕ್ಷಿ. ಕೋವಿಡ್ ಬಂದ ಬಳಿಕ ಹತ್ತು ತಿಂಗಳಲ್ಲಿ ಆದಿಚುಂಚನಗಿರಿ ಸಂಸ್ಥೆ 9 ಸಾವಿರ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದೆ ಎಂದರು.

ವೈದ್ಯ ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲೇ ಕಠಿಣವಾಗಿ ಅಧ್ಯಯನ ಮಾಡಬೇಕು. ಈಗಿನ ಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಆವಿಷ್ಕಾರ ನಡೆಯುತ್ತಿದ್ದು, ಈ ಬಗ್ಗೆ ಗಮನಹರಿಸಿದರೆ ಉತ್ತಮ ವೈದ್ಯರಾಗಬಹುದು ಎಂದು ಸಲಹೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.