ಮಂಡ್ಯ: ಭಯ ಭೀತಿಯಿಂದ ಕೋರ್ಟ್ಗೆ ಹೋಗಿಲ್ಲ, ಇದು ಗೌರವ ಹಾಗೂ ಕುಟುಂಬದವರಿಗೆ ನೋವಾಗುವ ಪ್ರಶ್ನೆ ಎಂದು ಸಚಿವ ನಾರಾಯಣಗೌಡ ಕೋರ್ಟ್ಗೆ ಹೋಗಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಚಿವರು ಮಾತ್ರ ಅಲ್ಲ, ಎಲ್ಲ ರಾಜಕಾರಣಿಗಳು ಕೋರ್ಟ್ಗೆ ಹೋಗುತ್ತಾರೆ. ಗೌರವ ಕಳೆಯುವ ಸಂದರ್ಭದಲ್ಲಿ ರಕ್ಷಣೆ ತೆಗೆದುಕೊಳ್ಳಬೇಕಾಗುತ್ತದೆ. ಸಿಡಿ ಇದ್ದರೆ ತಂದು ತೋರಿಸಲಿ. ಸತ್ಯಾಂಶ ತಿಳಿಸಲಿ. ಸುಮ್ಮನೆ ಅವರದಿದೆ, ಇವರದಿದೆ ಎಂದೇಳಿ ಫೋಟೋ ಹಾಕಿ ಗೌರವ ಕಳೆಯುವುದು ಸರಿಯಲ್ಲ.
ಇದನ್ನೆಲ್ಲ ತಡೆಹಿಡಿಯಲು ಕೋರ್ಟ್ ಹೋಗಿದ್ದೇವೆ. ಮೀಡಿಯಾಗಳು, ಸೋಷಿಯಲ್ ಮೀಡಿಯಾಗಳು ಪಿತೂರಿ ಮಾಡಿ ಗೌರವ ಕಳೆಯುವ ಕೆಲಸವಾಗುತ್ತಿದೆ. ಸತ್ಯಾಂಶ ಇಲ್ಲದೇ ಇವೆಲ್ಲವನ್ನೂ ತೋರಿಸಬಾರದು ಎಂದು ಕೋರ್ಟ್ ಮೊರೆ ಹೋಗಿದ್ದೇವೆ ಎಂದರು.