ಮಂಡ್ಯ: ರಾಜ್ಯದ ಜನರು ರೆಮಿಡಿಸಿವಿರ್ಅನ್ನು ಮುಖ್ಯ ಔಷಧಿ ಅಂತಾ ತಿಳಿಯಬಾರದು ಎಂದು ಮಂಡ್ಯದಲ್ಲಿ ಸಚಿವ ಡಾ. ಕೆ.ಸಿ.ನಾರಾಯಣಗೌಡ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯವಾಗಿ ಅದು ಔಷಧಿಯಲ್ಲ. ಆದ್ರೆ ರೆಮಿಡಿಸಿವಿರ್ ಔಷಧಿ ತೆಗೆದುಕೊಂಡ್ರೆ ನಾವು ಬದುಕುತ್ತೇವೆ ಅಂತಾ ನಮ್ಮ ತಲೆಗೆ ಬಂದುಬಿಟ್ಟಿದೆ. ಆದ್ರೆ ನಿಜವಾಗಲೂ ರೆಮಿಡಿಸಿವಿರ್ ಔಷಧಿ ಮುಖ್ಯ ಅಲ್ಲ. ಇದನ್ನ ಜನರು ಆರ್ಥೈಸಿಕೊಳ್ಳಬೇಕು ಎಂದರು. ನೆಗಡಿ, ಕೆಮ್ಮು, ಜ್ವರ ಬಂದರೆ ತಕ್ಷಣವೇ ಟೆಸ್ಟ್ ಮಾಡಿಸಿಕೊಳ್ಳಿ. ಕೊರೊನಾ ನಿಯಂತ್ರಣ ಮಾಡಲು ಸಹಕರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮೇ 24ರ ಬಳಿಕ ರಾಜ್ಯದಲ್ಲಿ ಲಾಕ್ಡೌನ್ ಮುಂದುವರೆಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ನಾರಾಯಣಗೌಡ, ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮುಂದುವರೆಸಬೇಕು. ಕೊರೊನಾ ಸೋಂಕು ಹೀಗೆಯೇ ಹೆಚ್ಚಳವಾದ್ರೆ ಲಾಕ್ಡೌನ್ ಅವಶ್ಯಕತೆ ಇದೆ ಎಂದರು.
ಇದನ್ನೂ ಓದಿ: ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ವಿರುದ್ಧ ದಿಲ್ಲಿ ಪೊಲೀಸರ ಕ್ರಮ ಖಂಡನೀಯ: ಡಿಕೆಶಿ
ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಲಾಕ್ಡೌನ್ ಅಗತ್ಯ ಇದೆ. ಎಲ್ಲರ ಸಹಕಾರ ಪಡೆದು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.