ಮಂಡ್ಯ: ಈ ಹಿಂದಿನ ಸರ್ಕಾರಗಳು ಸರ್ಜಿಕಲ್ ಸ್ಟ್ರೈಕ್ ಮಾಡಿಲ್ವಾ ಎಂದು ಪ್ರಶ್ನಿಸಿರುವ ಸಚಿವ ನಾಡಗೌಡ ಈಗ ಬಿಜೆಪಿಯರು ಅಧಿಕಾರಕ್ಕೆ ಬಂದ ಮೇಲೆ ಅದನ್ನು ಬೆಳಕಿಗೆ ತಂದು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಮಾಧ್ಯಮದವರೋಮದಿಗೆ ಮಾತನಾಡಿದ ಅವರು, ಈ ಹಿಂದೆ ಪಾಕಿಸ್ತಾನ ವಿರುದ್ಧ 3 ಯುದ್ಧ ಗೆದ್ದಿದ್ದೇವೆ. ಬಾಂಗ್ಲಾ ಯುದ್ಧvನ್ನೂ ಗೆದ್ದಿದ್ದೇವೆ. ಈ ಹಿಂದಿನ ಸರ್ಕಾರಗಳು ಸರ್ಜಿಕಲ್ ಸ್ಟ್ರೈಕ್ ಮಾಡಿಲ್ವಾ. ಇದು ಸರ್ಕಾರದ ಸಾಧನೆ ಅಲ್ವಾ ಎಂದು ಪ್ರಶ್ನಿಸಿದರು.
ಹಿಂದಿನ ಸರ್ಕಾರಗಳು ಮಾಡಿರುವ ಕುರಿತು ಚರ್ಚೆಗಳು ನಡೆಯುತ್ತಿರಲಿಲ್ಲ. ಈಗ ಅದೇ ದೊಡ್ಡ ವಿಷಯ ಎಂಬಂತೆ ಬಿಂಬಿಸುತ್ತಿದ್ದಿರಿ ಎಂದು ನಾಡಗೌಡ ವಾಗ್ದಾಳಿ ನಡೆಸಿದರು.