ETV Bharat / state

ಸಕ್ಕರೆ ಸಚಿವರಿಂದ ಕಾರ್ಖಾನೆ ವೀಕ್ಷಣೆ... 'ಮೈಶುಗರ್'‌ಗೆ ಸಿಗಲಿದೆಯಾ ಕಾಯಕಲ್ಪ? - mp sumalata ambarish

ರಾಜ್ಯ ಬಿಜೆಪಿ ಸರ್ಕಾರ ಮೈಶುಗರ್‌ಗೆ ಕಾಯಕಲ್ಪ ನೀಡಲು ಮುಂದಾಗಿದೆ. ಈಗಾಗಲೇ ಪಿಎಸ್‌ಎಸ್‌ಕೆ ಆರಂಭಕ್ಕೆ ಕ್ರಮ ಕೈಗೊಂಡಿರುವ ಸರ್ಕಾರ ಮೈಶುಗರ್ ಆರಂಭಕ್ಕೂ ಮುನ್ನುಡಿ ಬರೆಯುವ ಸಾಧ್ಯತೆ ಇದೆ.‌ ಇಂದು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಕಂಪನಿಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಕಾರ್ಮಿಕರಿಂದ ಮಾಹಿತಿ ಪಡೆದುಕೊಂಡರು.

mysugar industry
ಸಕ್ಕರೆ ಸಚಿವರಿಂದ ಕಾರ್ಖಾನೆ ವೀಕ್ಷಣೆ
author img

By

Published : Jun 10, 2020, 2:43 PM IST

ಮಂಡ್ಯ: ಮೈಶುಗರ್ ಕಾರ್ಖಾನೆ ಕಬ್ಬು ಅರೆಯುವಿಕೆ ನಿಂತು ಎರಡು ವರ್ಷಗಳೇ ಕಳೆದಿವೆ. 87 ವರ್ಷಗಳ ಇತಿಹಾಸ ಹೊಂದಿರುವ ಕಂಪನಿಯ ಆರಂಭ ಯಾವಾಗ ಎಂಬ ಪ್ರಶ್ನೆಗೆ ಬಿಜೆಪಿ ಸರ್ಕಾರ ಶೀಘ್ರವಾಗಿ ಉತ್ತರ ನೀಡುವ ಸಾಧ್ಯತೆಯಿದೆ. ಕಂಪನಿಯ ವಾಸ್ತವ ಸ್ಥಿತಿ ತಿಳಿಯಲು ಖುದ್ದು ಸಕ್ಕರೆ ಸಚಿವರೇ ಕಂಪನಿಯಲ್ಲಿ ರೌಂಡ್ ಹಾಕಿ ಮಾಹಿತಿ ಕಲೆ ಹಾಕಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಮೈಶುಗರ್‌ಗೆ ಕಾಯಕಲ್ಪ ನೀಡಲು ಮುಂದಾಗಿದೆ. ಈಗಾಗಲೇ ಪಿಎಸ್‌ಎಸ್‌ಕೆ ಆರಂಭಕ್ಕೆ ಕ್ರಮ ಕೈಗೊಂಡಿರುವ ಸರ್ಕಾರ ಮೈಶುಗರ್ ಆರಂಭಕ್ಕೂ ಮುನ್ನುಡಿ ಬರೆಯುವ ಸಾಧ್ಯತೆ ಇದೆ.‌ ಇಂದು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಕಂಪನಿಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಕಾರ್ಮಿಕರಿಂದ ಮಾಹಿತಿ ಪಡೆದುಕೊಂಡರು.

ಸಚಿವರ ಪ್ರವಾಸ ಕೇವಲ ಅಧಿಕಾರಿಗಳ ಸಭೆಗೆ ಮೀಸಲಾಗಿತ್ತು. ಆದರೆ ಕಂಪನಿಯನ್ನು ನೋಡಿ ವಾಸ್ತವ ತಿಳಿಯಲು ಮುಂದೆ ಬಂದ ಸಚಿವರು ಕಂಪನಿಯಲ್ಲಿ ಒಂದು ರೌಡ್ ಹಾಕಿ ಮಾಹಿತಿ ಪಡೆದುಕೊಂಡರು. ಸಚಿವರಿಗೆ ಸಂಸದೆ ಸುಮಲತಾ ಅಂಬರೀಶ್, ಸಚಿವ ನಾರಾಯಣಗೌಡ, ಶಾಸಕರಾದ ಎಂ. ಶ್ರೀನಿವಾಸ್ ಹಾಗೂ ಅಪ್ಪಾಜಿ ಗೌಡರು ಮಾತ್ರ ಸಾಥ್ ನೀಡಿದ್ರು.

ಸಕ್ಕರೆ ಸಚಿವರಿಂದ ಕಾರ್ಖಾನೆ ವೀಕ್ಷಣೆ

ಭದ್ರತಾ ಮುಖ್ಯಸ್ಥರಿಗೆ ತರಾಟೆ: ಕೊರೊನಾ ಸಂಕಷ್ಟದಲ್ಲಿ ಕಾನೂನು ಪಾಲನೆ ಮಾಡದ ಕಂಪನಿಯ ಭದ್ರತಾ ಮುಖ್ಯಸ್ಥರಿಗೆ ಎಸ್‌ಪಿ ಪರಶುರಾಮ್ ತರಾಟೆಗೆ ತೆಗೆದುಕೊಂಡರು‌. ಸಚಿವರ ಜೊತೆ ಅನೇಕರು ಕಂಪನಿಗೆ ನುಗ್ಗಿದ್ದು ಅಲ್ಲದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರೋದಕ್ಕೆ ಅಸಮಧಾನ ಹೊರ ಹಾಕಿದರು.
ಹೋರಾಟಕ್ಕೆ ಬಂದ ಸಂಘಟಕರಿಗೆ ಕ್ಲಾಸ್: ಜೊತೆಗೆ ಕಂಪನಿಯನ್ನು ಒ ಆ್ಯಂಡ್ ಎಂ ಗೆ ನೀಡಬಾರದು, ಸರ್ಕಾರವೇ ನಡೆಸಬೇಕು ಎಂದು ಹೋರಾಟ ಮಾಡಲು ಬಂದ ಕೆಲ ರೈತರಿಗೆ ಸ್ಥಳದಲ್ಲಿದ್ದ ಕೆಲ ಮುಖಂಡರು ಕ್ಲಾಸ್ ತೆಗೆದುಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.