ಮಂಡ್ಯ: ಹಕ್ಕಿ ಜ್ವರ ಭೀತಿ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೋಡಿಯಂ ಹೈಪರ್ ಕ್ಲೋರೈಡ್ ಸಿಂಪಡಣೆ ಮಾಡಲಾಗಿದೆ.
ಪಕ್ಷಿಧಾಮ ಪರಿಶೀಲನೆ ನಡೆಸಿದ ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್‌ಕುಮಾರ್ ಅವರು, ವಾರಕ್ಕೆ ಎರಡು ಬಾರಿ ಪಕ್ಷಿಗಳ ಸ್ಯಾಂಪಲ್‌ನ್ನು ಲ್ಯಾಬ್‌ಗೆ ಕಳಿಸಲಾಗುತ್ತದೆ. ಈವರೆಗೂ ಹಕ್ಕಿ ಜ್ವರ ಪತ್ತೆಯಾಗಿಲ್ಲ. ಮುಂದೆಯೂ ಬಾರದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ...ಪೆಲಿಕಾನ್ ಪಕ್ಷಿಗಳ ಸರಣಿ ಸಾವು.. ಹಕ್ಕಿ ಜ್ವರದ ಭೀತಿ ಬೇಡ ಎಂದ ಪಶು ವೈದ್ಯರು